ಬೀದರ್

`ತಪ್ಪದೇ ದ್ವಿತೀಯ ಪಿಯು 2ನೇ ಪೂರಕ ಪರೀಕ್ಷೆಗೆ ಹಾಜರಾಗಿ’

ಬೀದರ:2023ರ ಆಗಷ್ಟ 21 ರಿಂದ ಸೆ.02ರ ವರೆಗೆ ನಡೆಯುವ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳು ತಪ್ಪದೇ ಹಾಜರಾಗಿ ಪರೀಕ್ಷೆ ಬರೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಪದವಿ ಪೂರ್ವ) ಬೀದರ ಚಂದ್ರಕಾಂತ ಶಾಹಾಬಾದಕರ್ ತಿಳಿಸಿದ್ದಾರೆ.
ಈಗಾಗಲೇ ಅನುತ್ತೀರ್ಣಗೊಂಡ ಕಾಲೇಜುಗಳಲ್ಲಿ 2ನೇ ಪೂರಕ ಪರೀಕ್ಷೆಗಳಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹಾಲ್ ಟಿಕೇಟ್(ಪ್ರವೇಶ ಪತ್ರ) ಬಂದಿರುತ್ತವೆ.ವಿದ್ಯಾರ್ಥಿಗಳು ಸಂಬಂಧಿಸಿದ ಕಾಲೇಜುಗಳಿಂದ ಹಾಲ್ ಟಿಕೇಟ್ ಪಡೆದು ಸಂಬಂಧಿಸಿದ ಆಯಾ ಪರೀಕ್ಷೆ ಕೇಂದ್ರಗಳಲ್ಲಿ ಆಯಾ ಪರೀಕ್ಷೆ ದಿನದಂದು ಹಾಜರಾಗಬೇಕು.ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ಆಯಾ ಪರೀಕ್ಷೆ ಕೇಂದ್ರಗಳಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.ಅಲ್ಲದೆ ಜಿಲ್ಲೆಯ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಪಪೂ ಕಾಲೇಜಿನ ಪ್ರಾಚಾರ್ಯರು ಪರೀಕ್ಷೆ ಶುಲ್ಕ ಪಾವತಿಸಿದ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ವಿತರಿಸಿ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿ-ಪಾಲಕರಿಗೆ ದೂರವಾಣಿ ಮೂಲಕ ತಿಳಿಸಬೇಕು ಎಂದು ಉಪನಿರ್ದೇಶಕರು ಸೂಚಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!