ಬೀದರ್

ಕಾಂಗ್ರೇಸ್ ಹಿಂದಿನ ಯುಪಿಎ ಸರ್ಕಾರದಲ್ಲಿ ಎಲ್ಲರೂ ಒಟ್ಟಾಗಿದ್ದೇವು – ದಿನೇಶ ಪವಾರ್

ಬೀದರ: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ಮೀಸಲಾತಿ ಇರಬೇಕೇ ವಿನಃ ಅದರಲ್ಲಿ ಪ್ರತ್ಯೇಕತೆ ಸಲ್ಲದು ಎಂದು ಹೇಳಿದರೂ ಹಿಂದೆ ರಾಜ್ಯದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟರಲ್ಲಿ ಒಡಕು ಮೂಡಿಸಲು ಪ್ರತ್ಯೇಕ ಮೀಸಲಾತಿ ಯಾದಿ ಬಿಡುಗಡೆ ಮಾಡಿ ಒಂದಾಗಿದ್ದ ಪರಿಶಿಷ್ಟರನ್ನು ಇಬ್ಭಾಗ ಮಾಡಲು ಸದಾಶಿವ ಆಯೋಗ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಬಂಜಾರಾ ಸಮಾಜದ ಮುಖಂಡರಾದ ದಿನೇಶ (ರಾಮರಾವ) ಪವಾರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು ಪರಿಶಿಷ್ಟರಲ್ಲಿ ನೂರಾ ಒಂದು ಜಾತಿಗಳು ಒಳಗೊಂಡಿದ್ದು ಕಾಂಗ್ರೇಸ್ ಹಿಂದಿನ ಯುಪಿಎ ಸರ್ಕಾರದಲ್ಲಿ ಎಲ್ಲರೂ ಒಟ್ಟಾಗಿದ್ದೇವು. ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಜಾತಿ ಜಾತಿಗಳಲ್ಲಿ ಜಗಳ ಹಚ್ಚಿ ಒಮ್ಮತದ ಸಮಾಜಗಳನ್ನು ಚೂರು ಚೂರು ಮಾಡಲು ಹೊರಟಿದೆ. ಸಂವಿಧಾನದ ಆಶಯದಂತೆ ಎಲ್ಲರಿಗೆ ಸಮಬಾಳು ಸಮಪಾಲು ಎಂಬ ನೀತಿಯನ್ನು ಧಿಕ್ಕರಿಸಿರುವ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆದು ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲೂ ಸಹ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಾಗರ ಖಂಡ್ರೆಯವರಿಗೆ ಮತ ನೀಡುವ ಮೂಲಕ ಕೇಸರಿ ಸರ್ಕಾರವನ್ನು ಮನೆಗೆ ಕಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡುವುದಾಗಿ ದಿನೇಶ ತಿಳಿಸಿದರು.
ಡಾ. ಸಂತೋಷಕುಮಾರ ಅಣ್ಣೆಪ್ಪನೋರ್ ಮಾತನಾಡಿ ಸಾಗರ ಖಂಡ್ರೆ ಒಬ್ಬ ಯುವಕ. ಈ ದೇಶದ ಯುವಕರ ಕೈಯಲ್ಲಿ ಕೊಟ್ಟರೆ ರಾಷ್ಟ್ರದ ಚಿತ್ರಣ ಬದಲಾಗಬಹುದೆಂಬ ಸಂಕಲ್ಪದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ತಮ್ಮ ಸುಪುತ್ರ ಸಾಗರ ಖಂಡ್ರೆಗೆ ಟಿಕೇಟ ಕೊಟ್ಟು ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು. ಸಚಿನ್ ಪವಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Ghantepatrike kannada daily news Paper

Leave a Reply

error: Content is protected !!