ವಿದೇಶ

ವಿಶ್ವದ “ಮೋಸ್ಟ್ ವಾಂಟೆಡ್” ಕಂಪ್ಯೂಟರ್ ಹ್ಯಾಕರ್ ನಿಧನ

ವಾಷಿಂಗ್ಟನ್, ಜು.೨೧- ಒಂದು ಸಮಯದಲ್ಲಿ ತನ್ನ ಅತ್ಯದ್ಬುತ ಹ್ಯಾಕಿಂಗ್ ಸ್ಕಿಲ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು, ಬಳಿಕ ಅಮೆರಿಕಾದ ತನಿಖಾ ಸಂಸ್ಥೆ ಎಫ್‌ಬಿಐನ ಮೋಸ್ಟ್ ವಾಂಟೆಡ್ ಸೈಬರ್ ಕ್ರಿಮಿನಲ್‌ಗಳಲ್ಲಿ ಒಬ್ಬರಾಗಿ, ಜೈಲುಶಿಕ್ಷೆಯ ಬಳಿಕ ಸಮಾಜಪರ ಕಾರ್ಯಗಳಲ್ಲಿ ತೊಡಗಿ ಶ್ಲಾಘನೆಗೆ ಪಾತ್ರರಾಗಿದ್ದ ಕೆವಿನ್ ಮಿಟ್ನಿಕ್ ತಮ್ಮ ೫೯ ನೇ ವಯಸ್ಸಿನಲ್ಲಿ ನಿಧನರಾದರು.
೧೯೯೦ರ ದಶಕಗಳಲ್ಲಿ ಕೆವಿನ್ ಅವರು ಅನೇಕ ರೀತಿಯ ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ೧೯೯೦ರ ದಶಕದಲ್ಲಿ ಕಾರ್ಪೊರೇಟ್ ಡೇಟಾ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ, ಪೆಸಿಫಿಕ್ ಬೆಲ್ ಸೇರಿದಂತೆ ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಕಾರ್ಪೊರೇಟ್ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಮಿಟ್ನಿಕ್ ಕುಖ್ಯಾತಿಯನ್ನು ಗಳಿಸಿದ್ದರು. ಈ ಅವಧಿಯಲ್ಲಿ ಅವರು ಕಾರ್ಪೊರೇಟ್, ಸರ್ಕಾರಿ ಮತ್ತು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹ್ಯಾಕಿಂಗ್ ಮೂಲಕ ಧ್ವಂಸಗೊಳಿಸುವುದರ ಜೊತೆಗೆ ಅಮೆರಿಕಾದ ಸೆಲ್ ನೆಟ್‌ವರ್ಕ್‌ಗಳಿಗೆ ತನ್ನ ದಾರಿಯಲ್ಲಿ ಕೆಲಸ ಮಾಡುವುದರ ಜೊತೆಗೆ ದೇಶಾದ್ಯಂತ ಸಾವಿರಾರು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಮತ್ತು ಡೇಟಾ ಫೈಲ್‌ಗಳ ಕಳ್ಳತನದಲ್ಲಿ ಭಾಗಿಯಾಗಿದ್ದರು. ಇದೇ ಕಾರಣಕ್ಕಾಗಿ ಕೆವಿನ್‌ರನ್ನು ತನಿಖಾಧಿಕಾರಿಗಳು ವಿಶ್ವದ “ಮೋಸ್ಟ್ ವಾಂಟೆಡ್” ಕಂಪ್ಯೂಟರ್ ಹ್ಯಾಕರ್ ಎಂದು ಕರೆದಿದ್ದರು. ಇದೇ ಸಮಯದಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಕಣ್ಮರೆಯಾಗಿದ್ದು, ಅಮೆರಿಕಾದ ತನಿಖಾ ಸಂಸ್ಥೆ ಎಫ್‌ಬಿಐ ಶೋಧ ಕಾರ್ಯಾಚರಣೆಯನ್ನು ಕೂಡ ತೀವ್ರಗೊಳಿಸಿತ್ತು. ಅಂತಿಮವಾಗಿ ಕೆವಿನ್ ಬಂಧನದ ಬಳಿಕ ಸೈಬರ್ ಅಪರಾಧಗಳಿಗೆ ಸಂಬಂಧಪಟ್ಟಂತೆ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಆದರೆ ೨೦೦೦ರಲ್ಲಿ ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಕೆವಿನ್ ಸಂಪೂರ್ಣ ಬದಲಾಗಿದ್ದು, ಸಮಾಜಪರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಈ ಅವಧಿಯಲ್ಲಿ ಅವರು ವೈಟ್ ಹ್ಯಾಕಿಂಗ್ (ಸಮಾಜಪರ) ಮೂಲಕ ಜನರಲ್ಲಿ ಸೈಬರ್‌ಕ್ರೈಮ್‌ಗಳ ಬಗ್ಗೆ ಜಾಗೃತಿ ಮೂಡುಸುವ ಕಾರ್ಯದಲ್ಲಿ ನಿರತರಾಗಿ, ಅಪಾರ ಜನಮನ್ನಣೆ ಗಳಿಸಿದ್ದರು.

Ghantepatrike kannada daily news Paper

Leave a Reply

error: Content is protected !!