ಬೀದರ್

ಕಾರಂಜಾ ಸಂತ್ರಸ್ಥರಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ.

ಕಾರಂಜಾ ಸಂತ್ರಸ್ಥರ ಧರಣಿಯು ಇಂದಿಗೆ 490 ದಿನಕ್ಕೆ ಕಾಲಿರಿಸಿದರು  ಕೂಡ ಸರ್ಕಾರವು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿರುವುದಿಲ್ಲ. ಆದರೂ ಕೂಡ  ಸರಕಾರದ ನೀತಿಗೆ ಅನುಗುಣವಾಗಿ ಸಂತ್ರಸ್ತರಿAದ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅಹೋರಾತ್ರಿ  ಧರಣಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಅವರು ಮಾತನಾಡಿದರು. ಸರ್ಕಾರವು ಕೊಟ್ಟ ಮಾತಿನಂತೆ ನಡೆದುಕೊಂಡು ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸಂದರ್ಭದಲ್ಲಿ  ಪಾಟೀಲ್ ರವರು ಸರ್ಕಾರಕ್ಕೆ ಒತ್ತಾಯಿಸಿದರು. ಸಮಿತಿಯ ನಿರ್ದೇಶಕರಾದ ವೀರಭದ್ರಪ್ಪ ಉಪ್ಪಿನ್ ರವರು ಮಾತನಾಡಿ, ಕರ್ನಾಟಕವೆoದು ನಾಮಕರಣಗೊಂಡ 50 ವರ್ಷ ಪೂರೈಸಿ 68ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ, ಕರ್ನಾಟಕದ ಕಿರೀಟದಂತಿರುವ ಬೀದರ್ ಜಿಲ್ಲೆಯಲ್ಲಿ ಸುಮಾರು 40 ವರ್ಷಗಳಿಂದ ನನೇಗೂದಿಗೆ ಬಿದ್ದ ಕಾರಂಜಾ  ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಕುಲಕರ್ಣಿ ಅವರು ಮಾತನಾಡಿ,  ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡವನ್ನು ನಾವೆಲ್ಲರೂ ಶ್ರದ್ಧಾ- ಭಕ್ತಿಯಿಂದ ರೂಢಿಯಲ್ಲಿ ಬಳಸುವುದು ಅತ್ಯಂತ ಅವಶ್ಯಕತೆ ಇದೆ.  ಇತರ ಭಾಷೆಗಳನ್ನು ಪ್ರೀತಿಸಿದರು ಕನ್ನಡವನ್ನು ಗೌರವಿಸಬೇಕು ಮತ್ತು ಕರ್ನಾಟಕದಲ್ಲಿ ವಾಸಿಸುವ ಎಲ್ಲರ ಜೊತೆ ಕನ್ನಡದಲ್ಲಿ ಮಾತನಾಡುವ ಹವ್ಯಾಸವನ್ನು ಬೆಳೆಸಿಕೊಂಡು ಇತರರಿಗೂ ಕನ್ನಡವನ್ನು ಮಾತನಾಡಲು ಪ್ರೋತ್ಸಾಹಿಸಬೇಕು ಎಂದರು. ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ, ಕನ್ನಡವೇ ನಿತ್ಯ,  ಕನ್ನಡವೇ ಸತ್ಯ,  ಕನ್ನಡ ನಾಡು ನುಡಿ ಸಂಸ್ಕೃತಿ ವಿಶ್ವಕ್ಕೆ ಮಾದರಿ,  ಆದ್ದರಿಂದ ನಾವೆಲ್ಲರೂ ಕನ್ನಡವನ್ನು ಅನುಷ್ಠಾನದಲ್ಲಿ ತರಲು ಶ್ರಮಿಸಬೇಕೆಂದು ನುಡಿದರು.
ಪತ್ರಕರ್ತ ಹಾಗೂ ಸಮಾಜ ಸೇವಕರಾದ ಜ್ಞಾನೇಶ್ ಕುಮಾರ್ ಮಾತನಾಡಿ ನೆನೆಗುದಿಗೆ ಬಿದ್ದಿರುವ ಸಮಸ್ಯೆಯನ್ನು ಸರ್ಕಾರವು ಹಗುರವಾಗಿ ಕಾಣಬಾರದು. ಇದು ಇಡೀ ಜಿಲ್ಲೆಯ ನಾಡಿ ಮಿಡಿತವಾದ ಕಾರಂಜಾ ಜಲಾಶಯವು  ಸಂತ್ರಸ್ತರ ಸಮರ್ಪಣೆಯಿಂದ ತಯಾರಾಗಿದೆ.  ಆದ್ದರಿಂದ ಬೀದಿಪಾಲಾದ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಿ, ಸರ್ಕಾರ ರೈತರಿಗೆ ವೈಜ್ಞಾನಿಕ ಬೆಲೆಯನ್ನು ನೀಡಿ ಅವರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ನಾಗೇಶ್ ಅವರು ಮಾತನಾಡಿ,  ಬೀದರ್ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮುಖ ವ್ಯಕ್ತಿಗಳಿದ್ದರು ಕೂಡ 490  ದಿವಸಗಳ ಕಾಲ ಬೀದಿಯಲ್ಲಿ ಕುಳಿತು ಸತ್ಯಾಗ್ರಹವನ್ನು ಮಾಡುತ್ತಿರುವುದು ಕಂಡು ಕಾಣದಂತೆ ನೋಡುತ್ತಿರುವುದು ಜಿಲ್ಲೆಯ ಗಣ್ಯರಿಗೆ ಶೋಭೆ ತರುವುದಿಲ್ಲ.  ಹೀಗೆಯೆ ಮುಂದುವರೆಯದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ರೈತರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಂತು,  ತೀವ್ರವಾದ ಹೋರಾಟವನ್ನು ಮಾಡಲಾಗುವುದು. ಇದಕ್ಕೆ ಆಸ್ಪದವನ್ನು ಕೊಡದೆ ಸರ್ಕಾರವು ಬೇಗ ಸ್ಪಂದಿಸಲಿ ಎನ್ನುವುದೇ ನಮ್ಮೆಲ್ಲರ ಆಸೆ ಎಂದು ಅಭಿಪ್ರಾಯಪಟ್ಟರು.
ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗಶೆಟ್ಟಿ ಹಚ್ಚಿಯವರು ಸಂತ್ರಸ್ತರ ಬಾಧೆಯನ್ನು ತೋಡಿಕೊಂಡು ಅಕ್ರೋಶವಾಗಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಣೆಯಲ್ಲಿ ಅಣ್ಣಪ್ಪ ಪಟವಾರಿ,  ಮಹೇಶ್ ಕುಮಾರ್, ಚಂದ್ರಕಾAತ್ ಪಾಟೀಲ್, ಶಿವಲಿಂಗಪ್ಪ ಹೂಗಾರ್, ಅಣ್ಣಪ್ಪ ಕಮಾಲ ಪುರ್ ಮತ್ತು ಅನೇಕ ಸಂತ್ರಸ್ತರು  ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!