ಬೀದರ್

ಕಬ್ಬಿನ ಬಿಲ್‍ನ್ನು ಪ್ರತಿ 15 ದಿನಗಳಿಗೊಮ್ಮೆ ತಪ್ಪದೆ ಪಾವತಿಸಲಾಗುವುದು

ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭದ ಪೂಜಾ ಕಾರ್ಯಕ್ರಮವನ್ನು ಜಿಲ್ಲೆಯ ಪರಮಪೂಜ್ಯ ಸ್ವಾಮಿಜಿಗಳ ನೇತ್ರತ್ವದಲ್ಲಿ ಕಾರ್ಖಾನೆಯ ಅಧ್ಯಕ್ಷ ಶ್ರೀ ಡಿ.ಕೆ.ಸಿದ್ರಾಮ ರವರು ಅತಿ ವಿಜ್ರಂಭಣೆಯಿಂದ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ ಕಾರ್ಖಾನೆಯ ಪ್ರಾರಂಭದಿಂದ ಕಬ್ಬು ಪೂರೈಸಿದ ರೈತರ ಕಬ್ಬಿನ ಬಿಲ್ಲನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ, ಯಾವುದೇ ಹಂಗಾಮಿನ ಕಬ್ಬಿನ ಬಿಲ್ ಉಳಿಸಿಕೊಂಡಿರುವುದಿಲ್ಲ ರೈತ ಬಾಂಧವರು ಹಿಂದಿನ ವರ್ಷಗಳಂತೆ ಈ ವರ್ಷವು ಸಹ ಕಾರ್ಖಾನೆಗೆ ಎಂದಿನಂತೆ ಕಬ್ಬು ಪೂರೈಸಲು ವಿನಂತಿಸಿದರು. ಸದ್ಯಕ್ಕೆ ಎಫ್.ಆರ್.ಪಿ ದರದಂತೆ ಕಬ್ಬಿನ ಬಿಲ್ ಪಾವತಿಸಲಾಗುವುದು ಮುಂದೆ ಜಿಲ್ಲೆಯ ಇತರೆ ಸಕ್ಕರೆ ಕಾರ್ಖಾನೆಗಳು ಸೇರಿ ನಿರ್ಣಯಿಸುವ ಕಬ್ಬಿನ ಬಿಲ್‍ನ್ನು ಪ್ರತಿ 15 ದಿನಗಳಿಗೊಮ್ಮೆ ತಪ್ಪದೆ ಪಾವತಿಸಲಾಗುವುದು ಈ ಕುರಿತು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ. 2022-23 ರ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ದಿನಾಂಕ 08.11.2023 ರಿಂದ ಸಕ್ಕರೆ ವಿತರಿಸಲಾಗುವುದೆಂದು ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಲಿಂಗ ಪಟ್ಟದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು, ಭಾತಂಬ್ರಾ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳು, ಹುಲಸೂರ, ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜೇಶ್ವರ ಶಿವಾಚಾರ್ಯರು, ಮೇಹಕರ, ಪರಮಪೂಜ್ಯ ಶ್ರೀ ಶ್ರೀ ಶ್ರೀ ರುದ್ರಮಣಿ ಪಟ್ಟದೇವರು, ಹೀರೆಮಠ, ಚಾಂಬೋಳ ಮತ್ತು ಪರಮಪೂಜ್ಯ ಶ್ರೀ ಶ್ರೀ ಶ್ರೀ ಅವಧೂತಗಿರಿ ಮಹಾರಾಜರು ದತ್ತಪೀಠ, ಬರದಿಪೂರ ರವರು ಹಾಗೂ ಅಪೆಕ್ಸ್ ಬ್ಯಾಂಕ್, ಬೆಂಗಳೂರು ನಿರ್ದೇಶಕರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ ಯವರು, ಕಾರ್ಖಾನೆಯ ಉಪಾಧ್ಯಕ್ಷರಾದ ಶ್ರೀ ಬಾಲಾಜಿ ಚ್ವಹಾಣ, ಕಾರ್ಖಾನೆಯ ನಿರ್ದೇಶಕರಾದ ಶ್ರೀ ಝರೆಪ್ಪಾ ಮಮದಾಪೂರೆ, ಶ್ರೀ ರಾಜಕುಮಾರ ಕರಂಜಿ, ಶ್ರೀ ಶಿವಬಸಪ್ಪಾ ಚನ್ನಮಲ್ಲೆ, ಶ್ರೀ ಸಿದ್ರಾಮ ವಾಗಮಾರೆ, ಶ್ರೀ ವಿಜಯಕುಮಾರ ಪಿ.ಪಾಟೀಲ, ಶ್ರೀ ಸಿತಾರಾಮ ಖೇಮಾ, ಶ್ರೀಮತಿ ಶೋಭಾವತಿ ಪಾಟೀಲ, ಶ್ರೀಮತಿ ಮಲ್ಲಮ್ಮಾ ಪಾಟೀಲ, ಶ್ರೀ ಶಶಿಕುಮಾರ ಪಾಟೀಲ, ಶ್ರೀ ವೀರಶೆಟ್ಟಿ ಪಟ್ನೆ, ಶ್ರೀ ನಾಗರಡ್ಡಿ ಯಾಚೆ, ಪತ್ರಕರ್ತ ಬಂಧುಗಳು, ಕಾರ್ಖಾನೆಯ ಹಿತೈಷಿಗಳು, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ.ಎಸ್.ಅಪರಂಜಿ ಇಲಾಖಾ ಮುಖ್ಯಸ್ಥರು, ಕಾರ್ಖಾನೆಯ ಸಿಬ್ಬಂದಿ ವರ್ಗ ಹಾಗೂ ಕಾರ್ಖಾನೆಯ ಸುತ್ತ ಮುತ್ತಲಿನÀ ರೈತ ಬಾಂಧವರು ಹಾಜರಿದ್ದರು.

ಮುಂದುವರೆದು, ಮಾನ್ಯ ಅಧ್ಯಕ್ಷರು ಮಾತನಾಡುತ್ತಾ ನಮ್ಮ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ಮಂಜೂರಾದ 60 ಕೆ.ಎಲ್.ಪಿ.ಡಿ ಸಾಮಥ್ರ್ಯದ ಇಥೆನಾಲ ಘಟಕದ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದಿ. ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಯವರ ಜನ್ಮದಿನ ದಿನಾಂಕ 11.11.2023 ರಂದು ಮಧ್ಯಾನ 1.00 ಗಂಟೆಗೆ ಕೇಂದ್ರ ಸರ್ಕಾರದ ಸಚಿವರಾದ ಸನ್ಮಾನ್ಯ ಶ್ರೀ ಭಗವಂತ ಖೂಬಾ ಹಾಗೂ ಇನ್ನಿತರ ಗಣ್ಯಮಾನ್ಯರ ಅಮೃತ ಹಸ್ತದಿಂದ ಕಾರ್ಖಾನೆಯ ಆವರಣದಲ್ಲಿ ನೆರವೇರಿಸಲಾಗುವುದು ಹಾಗೂ ಅಂದೇ ಶ್ರೀ ದಿ. ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಯವರ ಜನ್ಮದಿನವನ್ನು ಕಾರ್ಖಾನೆಯ ಆಡಳಿತ ಕಛೇರಿ ಆವರಣದಲ್ಲಿ ಅಧ್ಧೂರಿಯಾಗಿ ಆಚರಿಸಲು ನಿರ್ಣಯಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ನಾಗಮಾರಪಳ್ಳಿ ಪರಿವಾರದ ಹಿತೈಷಿಗಳು, ಕಾರ್ಖಾನೆಯ ಸರ್ವ ಸದಸ್ಯ ಬಾಂಧವರು ಹಾಗೂ ರೈತಬಾಂಧವರು ಹಾಗೂ ಅಭಿಮಾನಿಗಳು ಕಾರ್ಖಾನೆಯ ಆವರಣದಲ್ಲಿ ಉಪÀಸ್ಥಿತರಿರಲು ವಿನಂತಿಸಿದರು.

Ghantepatrike kannada daily news Paper

Leave a Reply

error: Content is protected !!