ಬೀದರ್

ಮಹಾನ ನಾಯಕರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ – ಅಬ್ದುಲ್ ರಸೀದ ಖಾದ್ರಿ

ಬೀದರಃ-16, ಅನೇಕ ಮಹಾನ ನಾಯಕರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಇಂದು 76ನೇಯ ವರ್ಷಾಚಾರಣೆ ಸಂದರ್ಭದಲ್ಲಿ ಅಮೃತ ಮಹೋತ್ಸವದ ಜೊತೆಗೆ ಸ್ವಾತಂತ್ರ್ಯ ಸೇನಾನಿಗಳ ಆದರ್ಶ ವಾಣಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಒಂದೇ ಭಾರತೀಯರೆಂಬ ಭಾವನೆ ಮೂಡಿಸಬೇಕೆಂದು ಪದ್ಮಶ್ರೀ ಪಸ್ರಶಸ್ತಿ ಪುರಸ್ಕøತ ಅಬ್ದುಲ್ ರಸೀದ ಖಾದ್ರಿ ಬಿದ್ರಿರವರು ಕರೆ ನೀಡಿದರು.
ಅವರು ದಿ. 15 ರಂದು ಬೀದರ ನಗರದ ಉಸ್ಮಾನ ಗಂಜನಲ್ಲಿ ಬೀದರ ಜ್ವೇಲರ್ಸ್ ಅಸೊಸಿಯೆಷÀನ ಏರ್ಪಡಿಸಿದ 76ನೇಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸನ್ಮನಿತರಾಗಿ ಮಾತನಾಡುತಿದ್ದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಮಗೆ ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದಕ್ಕೆ ಕೃತಘ್ನನಾಗಿದ್ದೇನೆಂದರು.
ಈ ಕಾರ್ಯಕ್ರಮದಲ್ಲಿ ಸಂಘದಿಂದ ನಗರಸಭೆಯ ಕಾರ್ಮಿಕರಾದ ಅವಿನಾಶ ಮೌಖಾರಿ, ಮಾರುತಿ, ಮಾಣಿಕ, ಸುರೇಶ, ಝರಣಪ್ಪಾ, ಶ್ರೀಮತಿ ಕಸ್ತೂರಿ ಜಗನ್ನಾಠ, ಶ್ರೀಮತಿ ಶೋಭಾ ರಾಜಸಿಂಗ್ ಅವರನ್ನು ಸಂಘದ ಶಂಕರಲಾಲ ನಂದಕಿಶೋರ ವರ್ಮಾ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಶಂಕರಲಾಲ, ಉಪಾಧ್ಯಕ್ಷ ವಸಂತ ಭೊಸ್ಲೆ, ಕಾರ್ಯದರ್ಶಿ ರಾಜಕುಮಾರ ಮಲಿಗಿ, ಜಂಟಿ ಕಾರ್ಯದರ್ಶಿ ಟಿ. ರಮೇಶ, ಖಜಾಂಚಿ ಬಸವರಾಜ ಪಾಟೀಲ ಗುಮ್ಮಾ ಅವರುಗಳಿಗೆ ರಾಜಸ್ಥಾನಿ ಸಮಾಜ ಬೀದರನ ಅಧ್ಯಕ್ಷ ಎನ್. ಆರ್. ವರ್ಮಾ, ಕಾರ್ಯದರ್ಶಿ ಶಾಮಸುಂದರ ಲೋಯಾ ಮತ್ತು ಕ್ರಾಂತಿ ಗಣೇಶ ಸೇವಾ ಸಮಿತಿಯ ಅಧ್ಯಕ್ಷ ರಾಜಕುಮಾರ ಶೀಲವಂತ, ಕಾರ್ಯದರ್ಶಿ ವಿಜಯ ವಗದಾಳೆ ಅವರುಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

Ghantepatrike kannada daily news Paper

Leave a Reply

error: Content is protected !!