ಬೀದರ್

ಯೂರಿಯಾ ರಸಗೊಬ್ಬರ ಬದಲಿಗೆ ನ್ಯಾನೋ ಯೂರಿಯಾ ಬಳಸಿ


ಬೀದರ, ಜುಲೈ 28-ಬೀದರ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚಾಗಿ ಮಳೆಯಾಗಿರುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಜಾಸ್ತಿ ಆಗಿರುವುದರಿಂದ ಸೋಯಾ,ಅವರೆ, ಉದ್ದು, ಹೆಸರು, ತೊಗರಿ ಹಾಗೂ ಇತರೆ ಬೆಳೆಗಳಿಗೆ ರೈತರು ಯೂರಿಯಾ ರಸಗೊಬ್ಬರವನ್ನು ಮೇಲಗೊಬ್ಬರವಾಗಿ ಒದಗಿಸುತ್ತಿದ್ದು, ಯೂರಿಯಾ ರಸಗೊಬ್ಬರದ ಬದಲಿಗೆ ಒಂದು ಎಕರೆ ಬೆಳೆಗೆ ಒಂದು ಬಾಟೆಲ್ ನ್ಯಾನೋ ಯೂರಿಯಾ (500 ಮಿ.ಲೀ) ಬಳಸಬೇಕು. ನ್ಯಾನೋ ಯೂರಿಯಾವು ಪ್ರಧಾನ ಪೋಷಕಾಂಶವಾದ ಸಾರಜನಕದ ಮೂಲ ದ್ರವ ರೂಪ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಬೆಳೆಗಳಲ್ಲಿ ಕಳೆಗಳ ನಿರ್ವಹಣೆಯಾಗುವುದರ ಜೊತೆಗೆ ಉತ್ತಮ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ. ನ್ಯಾನೋ ಯೂರಿಯಾ ಬೆಳೆಗಳಿಗೆ ಸಾರಜನಕ ಪೋಷಕಾಂಶವನ್ನು ಪರಿಣಾಮಕಾರಿಯಾಗಿ ಒದಗಿಸುವುದರ ಜೊತೆಗೆ ಕಡಿಮೆ ಮಾಲಿನ್ಯ ಮತ್ತು ಯೂರಿಯಾ ಹರಳು ರೂಪದ ಗೊಬ್ಬರದ ದೊಡ್ಡ ಪ್ರಮಾಣದ ಸಾಗಾಣಿಕೆಯ ಹೊರೆಯನ್ನು ಕಡಿಮೆಗೊಳಿಸುವುದರ ಮೂಲಕ ಬೆಳೆ ಉತ್ಪಾದನಾ ವೆಚ್ಚವನ್ಮ್ನ ತಕ್ಕ ಮಟ್ಟಿಗೆ ಕಡಿಮೆಗೊಳಿಸುತ್ತದೆ. ಇದಲ್ಲದೆ ನ್ಯಾನೋ ಯೂರಿಯಾ ಸಿಂಪರಣೆಯು ಬೆಳೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಬೆಳೆಗಳ ಉತ್ಪಾದಕತೆ ಹೆಚ್ಚಿಸಲು ಸಹ ಸಹಕಾರಿಯಾಗುತ್ತದೆ. ಒಂದು ಬಾಟೆಲ್ ನ್ಯಾನೋ ಯೂರಿಯಾ (500 ಮಿ.ಲೀ) ವು ಒಂದು ಚೀಲ ಹರಳು ರೂಪದ ಯೂರಿಯಾಗೆ ಸಮವಾರುತ್ತದೆ. ಒಂದು ಬಾಟಲ್ ಯೂರಿಯಾ ದರ ರೂ.240 ಇದ್ದು, ಸಬ್ಸಿಡಿ ರಹಿತವಾಗಿರುತ್ತದೆ. ಹರಳು ರೂಪದ ಯೂರಿಯಾ ದರವು ಸಬ್ಸಿಡಿ ಒಳಗೊಂಡAತೆ ರೂ. 266 ಇದೆ, ಕೇಂದ್ರ ಸರ್ಕಾರದ ಆಮದು ಮೂಲಕ ದೇಶಕ್ಕೆ ಸಬ್ಸಿಡಿ ರೂಪದಲ್ಲಿ ಆಮದು ಹೆಚ್ಚಿನ ಹೊರೆಯಾಗುತ್ತಿದೆ ಹಾಗೂ ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಕೆಯು ಸಬ್ಸಿಡಿ ಹೊರೆಯನ್ನು ತಗ್ಗಿಸುವುದರ ಜೊತೆಗೆ ವಿದೇಶಿ ವಿನಿಮಯದ ಉಳಿಕೆಗೆ ಸಹ ಉತ್ತೇಜನ ನೀಡುತ್ತಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಶ್ರೀ ರತೇಂದ್ರನಾಥ ಸೂಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!