ಕಲಬುರಗಿ

ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಘಟಕ ಉದ್ಘಾಟನೆ, ಪುಟ್ಟರಾಜ ಗುರು ಸಾಹಿತ್ಯ ಪ್ರಚಾರ ಅಭಿಯಾನ ಮತ್ತು ಗುರು ಸೇವಾ ದೀಕ್ಷಾ ಸಮಾರಂಭ

ಕಲಬುರ್ಗಿ: ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆ ಸಂದೇಶ ಪ್ರಚಾರ ಮತ್ತು ಪ್ರಸಾರದ ಉದ್ದೇಶದಿಂದ ಗುರು ಮತ್ತು ಗುರು ಸಂಸ್ಥೆಯ ಸೇವೆಗೆ ಸಮರ್ಪಿಸಿಕೊಂಡು ೨೩ ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿರುವ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಗದುಗಿನ ಮೂಲದ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು, ರಾಜ್ಯದಾದ್ಯಂತ ಇರುವ ಪೂಜ್ಯರನ್ನು ಒಂದೇ ವೇದಿಕೆ ತಂದು ಇನ್ನಷ್ಟು ಅರ್ಥಪೂರ್ಣ ಸೇವೆ ಸಲ್ಲಿಸುವ ಸೇವೆಗೆ ಮುಂದಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಘಟಕಗಳನ್ನು ಅಸ್ಥಿತ್ವಕ್ಕೆ ತರುತ್ತಿದೆ ಅದರಭಾಗವಾಗಿ ಕಲಬುರ್ಗಿ ಜಿಲಾ ಘಟಕವು ಅಸ್ತಿತ್ವಕ್ಕೆ ತರಲಾಗಿದೆ  ೩೦-ಜುಲೈ-೨೦೨೩ ರವಿವಾರ ಬೆಳಿಗ್ಗೆ ೧೦-೩೦ ಕನ್ನಡ ಭವನ ಕನ್ನಡ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತ ಕಲಬುರ್ಗಿ ಇಲ್ಲಿ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭ ಎರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾವಿರದ ಸಾಹಿತ್ಯ ಸಾವಿರ ಸಾವಿರ ಮನ ಮನೆಗಳಿಗೆ ಪುಟ್ಟರಾಜ ಗುರು ಸಾಹಿತ್ಯ ಪ್ರಚಾರ ಅಭಿಯಾನ, ಪದಾಧಿಕಾರಿಗಳಿಗೆ ಗುರು ಸೇವಾ ಧೀಕ್ಷೆ, ಸ್ವರಚಿತ ವಚನ ಮತ್ತು ಭಕ್ತಿಗೀತೆ ಗೋಷ್ಠಿ ಗುರು ವಚನ ಪ್ರಭಾ ವಚನ ಗಾಯನ ಮತ್ತು ಗುರು ಸೇವಾ ಸತ್ಕಾರ ಕಾರ್ಯಕ್ರಮ ಆಯೋಜಿಸಿದೆ. ಸಮಾರಂಭದ ದಿವ್ಯ ಸಾನಿಧ್ಯನ್ನು ಷ. ಬ್ರ. ಶ್ರೀ ಚನ್ನಬಸವ ಶಿವಾಚಾರ್ಯರರು ಸಂಸ್ಥಾನ ಹಿರೇಮಠ ಕೆಂಭಾವಿ ಗೌರವಾಧ್ಯಕ್ಷರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ಗದಗ ಇವರು ವಹಿಸಿಕೊಳ್ಳುವರು. ಸಮಾರಂಭದ ಉದ್ಘಾಟನೆಯನ್ನು ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸಂಸ್ಥಾಪಕ ರಾಜ್ಯಾಧ್ಯಕ್ಷರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇವರು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಶ್ರೀ ರೇವಣಸಿದ್ಧಯ್ಯ ಹಿರೇಮಠ ಚಿಂಚೋಳಿ ಜಿಲ್ಲಾ ಅಧ್ಯಕ್ಷರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಇವರು ವಹಿಸಿಕೊಳ್ಳುವರು ಮುಖ್ಯಅತಿಥಿಗಳಾಗಿ ಶ್ರೀ ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾ ಅಧ್ಯಕ್ಷರು: ಕನ್ನಡ ಸಾಹಿತ್ಯ ಪರಿಷತ್ತು ಕಲಬುರ್ಗಿ, ಶ್ರೀ ಅಣವೀರಯ್ಯ ಪ್ಯಾಟಿಮನಿ ಯುವ ಮುಖಂಡರು ಕಲಬುರ್ಗಿ, ಶ್ರೀ ಜಗದೀಶ ಮರಪಳ್ಳಿ ಪ್ರಥಮ ದರ್ಜೆಗುತ್ತೆದಾರರು ಕಲಬುರ್ಗಿ, ಶ್ರೀ ಮಡಿವಾಳಯ್ಯ ಹಿರೇಮಠ ಕೊರಳ್ಳಿ ಕಲಬುರ್ಗಿ ಇವರುಗಳು ಆಗಮಿಸುವರು. ಡಾ. ವಿಜಯಕುಮಾರ ಪರುತೆ ಹಿರಿಯ ಸಾಹಿತಿಗಳು ಕಲಬುರ್ಗಿ, ಸೇವಾ ನಿವೃತ್ತಿ ನಿಮಿತ್ಯ ಅಭಿನಂದನೆ,  ಗುರು ಸೇವೆ ಮತ್ತು ಸಂಸ್ಕೃತಿ ಸಲ್ಲಿಸುತ್ತಿರುವ  ಶ್ರೀ ರೇವಯ್ಯ ವಸ್ತ್ರದಮಠ  ಹಿರಿಯ ಸಂಗೀತ ಕಲಾವಿದರು ಕಲಬುರ್ಗಿ, ಶ್ರೀ ದಯಾನಂದ ಸ್ವಾಮಿ ಹಿರೇಮಠ ತಬಲಾ ವಾದಕರು ಕಲ್ಲೂರು, ಶ್ರೀ ಸಿದ್ಧಣ್ಣ ದೇಸಾಯಿ ಕಲ್ಲೂರು ಹಿರಿಯ ಸಂಗೀತ ಕಲಾವಿದರು ಕಲಬುರ್ಗಿ, ಶ್ರೀ ಅಮರಪ್ರೀಯ ಹಿರೇಮಠ ಸಂಗೀತ ನಿರ್ದೇಶಕರು ಕಲಬುರ್ಗಿ, ಶ್ರೀ ಶಿವಶಂಕರ ಬಿರಾದಾರ ಸಂಗೀತ ಶಿಕ್ಷಕರು ಕಲಬುರ್ಗಿ, ಶ್ರೀ ಅಣ್ಣಾವ ಮತ್ತಿಮಡು ಸಂಗೀತ ಕಲಾವಿದರು ಕಲಬುರ್ಗಿ, ಶ್ರೀ ಬಾಬುರಾವ ಖೋಬಾಳ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರು ಕಲಬುರ್ಗಿ, ಇವರುಗಳಿಗೆ ಸನ್ಮಾನಿಸಲಾಗುವುದು. ಅತಿಥಿಗಳಿಂದ , ಸಾವಿರದ ಸಾಹಿತ್ಯ ಸಾವಿರ ಸಾವಿರ ಮನೆ ಮನಗಳಿಗೆ ‘ಪುಟ್ಟರಾಜ ಗುರು ವಚನ ಪ್ರಭಾ’ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ವಚನ ಸಂಗೀತ: ‘ಅಮರ ಕಲಾ ವೃಂದ’ ಕಲಾ ರಾಜಾಪುರ ಕಲಬುರ್ಗಿ ಇವರಿಂದ ಗುರು ವಚನ ಪ್ರಭಾ ಸಮೂಹ ವಚನ ಗಾಯನ ಎರ್ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಆಧುನಿಕ ವಚನ ಮತ್ತು ಭಕ್ತಿಗೀತೆ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಶ್ರೀ ಬಸವರಾಜ ಕೋರಳ್ಳಿ, ಶ್ರೀ ಮುರಗೆಪ್ಪ ಆರ್.ಹೆಚ್. ಹಣಮನಹಳ್ಳಿ, ಶ್ರೀ ಕರಿಬಸವರಾಜ ಕೆ. ಅಗಸಲ ತಾಂಡಾ , ಶ್ರೀ ಮೃತ್ಯುಂಜಯ ಕಳ್ಳಿಮಠ ಅಫಜಲಪುರ, ಶ್ರೀಮತಿ ಸುರೇಖಾ ಎಂ. ಜೇವರ್ಗಿ, ಶ್ರೀಮತಿ ಬಸಮ್ಮ ಸಜ್ಜನ ಕಲಬುರ್ಗಿ, ಶ್ರೀ ಶರಣರೆಡ್ಡಿ ಕೊಡ್ಲಾ ಸೇಡಂ, ಶ್ರೀ ಬಸವರಾಜ ಐನೋಳ್ಳಿ ಚಿಂಚೊಳಿ, ಶ್ರೀ ರೇವಣಸಿದ್ಧಯ್ಯ ಹಿರೇಮಠ ಚಿಂಚೋಳಿ, ಶ್ರೀ ಭಿಮರಾಯ ಹೇಮನೂರು ಕಲಬುರ್ಗಿ, ಶ್ರೀ ಶರಣಗೌಡ ಪಾಟೀಲ್ ಕಲಬುರ್ಗಿ, ಕು. ಸುನಂದಾ ಕಲ್ಲಾ ಜೇವರ್ಗಿ, ಶ್ರೀ ಸಿದ್ಧರಾಮ ಸರಸಂಬಿ ಕಾರಭೋಸಗಾ, ಡಾ. ರೇಣುಕಾ ಹಾಗರಗುಂಡಗಿ ಕಲಬುರ್ಗಿ, ಶ್ರೀ ಶಿವಯ್ಯ ಮಠಪತಿ ಕಲಬುರ್ಗಿ, ಶ್ರೀ ವಿಶ್ವನಾಥ ಬಕರೆ ಕಲಬುರ್ಗಿ, ಶ್ರೀ ಶ್ರೀಶೈಲ ಮದಾಣಿ ಕಲಬುರ್ಗಿ, ಶ್ರೀ ಚಂದ್ರಶೇಖರ ಆವಂಟಿ ಸೇಡಂ, ಶ್ರೀಮತಿ ಶಿವಲೀಲಾ ಧನ್ನಾ ಕಲಬುರ್ಗಿ, ಶ್ರೀ ಸುಧೀರ ಆನೂರಕರ್ ಕಲಬುರ್ಗಿ, ಶ್ರೀ ಪವನಕುಮಾರ ಚಿಗನೂರು ಕಲಬುರ್ಗಿ, ಶ್ರೀ ನಾಗೇಂದ್ರಪ್ಪ ಜಿ.ಮಾಡ್ಯಾಳ ಕಲಬುರ್ಗಿ, ಕು. ಸ್ವಾತಿ ಬಿ. ಕೋಬಾಳ ಕಲಬುರ್ಗಿ, ಶ್ರೀ ಮಹಾಂತಯ್ಯ ಕೆ. ಮಠ ಶರಣ ಸಿರಸಗಿ, ಶ್ರೀಮತಿ ಭಾಗ್ಯಶ್ರೀ ಭೀಮಳ್ಳಿ  ಕಲಬುರ್ಗಿ, ಶ್ರೀ ಶಿವಕವಿ ಜೋಗುರು  ಕಲಬುರ್ಗಿ ಇವರುಗಳು ತಾವು ರಚಿಸಿದ ವಚನ ಮತ್ತು ಭಕ್ತಿ ಗೀತೆಯನ್ನು ವಾಚಿಸಲಿದ್ದಾರೆ ಸಮಾರಂಭದ ನಂತರ ಪ್ರಸಾದ ವ್ಯೆವಸ್ಥೆ  ಮಾಡಲಾಗಿದ್ದು ಪ್ರಸಾದ ಭಕ್ತಿ ಸೇವೆಯನ್ನು ವೇ. ಮಡಿವಾಳಯ್ಯ ಸ್ವಾಮಿ ಕೊರಳ್ಳಿ ಕಲಬುರ್ಗಿ ಇವರು ವಹಿಸಿಕೊಂಡಿದ್ದಾರೆ. ಕಾರಣ ಈ ಕಾರ್ಯಕ್ರಮಕ್ಕೆ ಪೂಜ್ಯರ ಅಭಿಮಾನಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಜಿಲ್ಲಾ ಘಟಕ ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹಿತಿ ವಚನಕಾರ ಭೀಮರಾಯ ಹೇಮನೂರು ಇವರು ಪ್ರತಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!