ಬೀದರ್

ದ್ವೇಷ ಅಸೂಯೆ ಸಮಾಜಕ್ಕೆ ಮಾರಕ : ಷಾ ರಶೀದ್ ಅಹಮದ್ ಖಾದ್ರಿ

ಔರಾದ್ : ದ್ವೇಷ, ಅಸೂಯೆ, ಬದಿಗಿಟ್ಟು ನಾಡು ಕಟ್ಟುವ ಕೆಲಸ ಮಾಡಬೇಕು ಎಂದು ಬಿದ್ರಿ ಕಲೆಯ ಕುಶಲಕರ್ಮಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಷಾ ರಶೀದ್ ಅಹಮದ್ ಖಾದ್ರಿ ಮಕ್ಕಳಿಗೆ ಕರೆ ನೀಡಿದರು.
ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಅಸೂಯೆಯಿಂದ ವರ್ತಿಸುವವರು ತಮ್ಮ ವಿವೇಚನೆ ಕಳೆದುಕೊಂಡು ಕೆಟ್ಟ ಆಲೋಚನೆ ಮಾಡುತ್ತ ಸಮಾಜಕ್ಕೆ ಮಾರಕವಾಗುವ ಚಿಂತನೆ ಮಾಡುತ್ತಾರೆ.
ಶಿಕ್ಷಣ ಬೆಳೆದಂತೆ ಅಕ್ಷರಸ್ಥರಲ್ಲಿ ಅಸೂಯೆ, ಸಂಶಯ ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸ ಕಾಣುತ್ತಿರುವುದು ದುರಾದೃಷ್ಟ. ಮಕ್ಕಳು ದೇಶದ ಜವಾಬ್ದಾರಿಯುತ ನಾಗರೀಕರಾಗಿ ಬೆಳೆಯುವಂತಹ ಸಂಸ್ಕಾರಯುತ ಶಿಕ್ಷಣ ಪ್ರಸ್ತುತ ಕಾಲದ ಅನಿವಾರ್ಯತೆಯಾಗಿದ್ದು, ಶಿಕ್ಷಕರು ಇದರತ್ತ ಗಮನ ಹರಿಸಬೇಕು ಎಂದರು.
ಶಾಲೆಯ ವಾತಾವರಣ ಮೆಚ್ಚಿರುವ ಅವರು, ಖಾಸಗಿ ಶಾಲೆಗಳಿಗೂ ಮೀರಿಸುವ ನಿಟ್ಟಿನಲ್ಲಿ ಶಾಲೆಯನ್ನು ಸುಂದರಗೊಳಿಸಿದ್ದು, ಇಲ್ಲಿಯ ಮಕ್ಕಳು ಕೂಡ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಗೊಂಡ ಬಾಬುರಾವ, ಪಿಡಿಒ ವಿಜಯಲಕ್ಷಿö್ಮÃ ಪಾಟೀಲ್, ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ, ಗಜಾನನ ಮಳ್ಳಾ ಮಾತನಾಡಿದರು.
ಎಕಲಾರ ಗ್ರಾಮದ ಸಾಧಕರಾದ ಗೊಂಡ್ ಬಾಬುರಾವ, ಪ್ರೌಢಶಾಲೆಯ ಮುಖ್ಯಶಿಕ್ಷಕ ಜ್ಞಾನದೇವ ಪಾಂಚಾಳ ಅವರಿಗೆ ಸನ್ಮಾನಿಸಲಾಯಿತು. ಹತ್ತನೇ ತರಗತಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಆದಿತ್ಯ ಮಜಗೆ, ಶಿವಕರ್ಣಾ ಬಿರಾದಾರ, ಹಾಗೂ ವೈಷ್ಣವಿ ಪಾಟೀಲ್ ಅವರಿಗೆ ಶಾಲೆ ವತಿಯಿಂದ ಪ್ರತಿಭಾರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪೂರೆ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪೂರೆ, ಮುಖ್ಯಶಿಕ್ಷಕ ಪ್ರಭು ಬಾಳೂರೆ, ಬಕ್ಕಪ್ಪ, ಗಣಪತರಾವ ಜೀರ್ಗೆ, ರಾಜಕುಮಾರ ಮೇತ್ರೆ, ಗಣಪತಿ ಕಾವೇರಿ, ಕಲ್ಲಪ್ಪ ಮುದಾಳೆ, ಈರಪ್ಪ ವಡೆಯರ್, ರಾಮಚಂದ್ರ, ರಮೇಶ ಅಡಸಾರೆ, ಸಂತೋಷ ಕೋಳಿ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಜಯಸಿಂಗ್ ಠಾಕೂರ್, ಅಂಕುಶ ಪಾಟೀಲ್, ಕಿರಣ ಹಿಪ್ಪಳಗಾವೆ, ರೂಪಾ, ಸಿದ್ದೇಶ್ವರಿ ಸೇರಿದಂತೆ ಇನ್ನಿತರರಿದ್ದರು.

Ghantepatrike kannada daily news Paper

Leave a Reply

error: Content is protected !!