ಬೀದರ್

ದೇಶ ಸೇವೆಗಾಗಿ ಮುಂದಾಗಬೇಕು  —ಅನೀಲ್ ಕುಮಾರ ಬೇಲ್ದಾರ್

ಡಾ. ಬಿ.ಆರ್. ಅಂಬೇಡ್ಕರ ಕಲ್ಚರಲ್ & ವೆಲ್‌ಫೇರ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ನವಜೀವನ ವಿಶೇಷ ಮಕ್ಕಳ ವಸತಿ ಶಾಲೆ, ಆಸ್ತಾ ಉದ್ಯೋಗಸ್ಥ ವಿಕಲಚೇತನ ಮಹಿಳೆಯರ ವಿದ್ಯಾರ್ಥಿನಿಯಲ ಮತ್ತು ತರಬೇತಿದಾರರ ವಸತಿ ನಿಲಯ, ಮಹಾತ್ಮಾ ಜ್ಯೋತಿಬಾ ಫುಲೆ ಹಿರಿಯ ನಾಗರಿಕ (ವೃದ್ಧಾಶ್ರಮ) ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ವತಿಯಿಂದ 77ನೇ ಸ್ವತಂತ್ರö್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಗರದ ನವಜೀವನ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಅತಿಥಿಯವರಿಂದ ಧ್ವಜಾರೋಹಣ ಮಾಡಿ, ನಂತರ ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರು ಅನೀಲಕುಮಾರ ಬೆಲ್ದಾರ್ ರವರು ಕಾರ್ಯಕ್ರಮವನ್ನುದ್ದೇಶಿಸಿ, ಸ್ವಾತಂತ್ರö್ಯ ದಿನವು ಭಾರತದ ರಾಷ್ಟಿçÃಯ ಹಬ್ಬಗಳಲ್ಲಿ ಒಂದಾಗಿದ್ದು, 15-08-1947 ರಂದು ಭಾರತವು ಬ್ರಿಟೀಷ್ ಆಳ್ವಿಕೆಯಿಂದ ಸ್ವತಂತ್ರವಾಯಿತು. ಅದಕ್ಕಾಗಿ ನಾವು ಅಗಸ್ಟ್ 15 ರಂದು ಸ್ವತಂತ್ರ ದಿನವನ್ನಾಗಿ ಆಚರಿಸುತ್ತೇವೆ. ಈ ದಿನ ಸ್ವತಂತ್ರ ಹೋರಾಟಗಾರರ ಕನಸು ನನಸಾದ ದಿನವಾಗಿದ್ದು, ನಾವು ಬಂಧನದಿAದ ಬಿಡುಗಡೆ ಹೊಂದಿದ ದಿನವಾಗಿದೆ. ದೇಶಕ್ಕಾಗಿ ಸೇವೆಯನ್ನು ಸಲ್ಲಿಸುವುದರಲ್ಲಿ ಯಾವುದೇ ಮುಜುಗರವನ್ನು ಪಡಬಾರದು, ಎಲ್ಲರು ದೇಶ ಸೇವೆಗಾಗಿ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಶರ್ಮಾ ಸ್ವೀಟ್ ಹೌಸ್ ಮಾಲೀಕರಾದ ರಾಜೇಂದ್ರ ಶರ್ಮಾ ರವರು ಕಾರ್ಯಕ್ರಮವನ್ನುದ್ದೇಶಿಸಿ, 77ನೇ ಸ್ವತಂತ್ರೋತ್ಸವದ ಶುಭಾಷಯಗಳನ್ನು ಕೋರುತ್ತಾ, ಸಾಮಾನ್ಯ ಮಕ್ಕಳ ಪಾಲನೆ, ಶಿಕ್ಷಣ ಕೊಡುವುದು ಸರಳವಾಗಿರುತ್ತದೆ. ಆದರೆ  ವಿಶೇಷ ಮಕ್ಕಳ ಶಿಕ್ಷಣ, ಪಾಲನೆ, ಪೋಷಣೆ ಮಾಡುವುದು ಬಹಳ ಕಠಿಣವಾಗಿದ್ದು, ಇಂತಹ ಒಂದು ಸೇವೆಯನ್ನು ಅನೀಲಕುಮಾರ ಬೆಲ್ದಾರ್ ರವರು ನೆರವೇರಿಸುತ್ತಿದ್ದಾರೆ. ಇವರಿಗೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬರೋಡಾ ಬ್ಯಾಂಕ್‌ನ ಸಿಬ್ಬಂದಿಯವರಾದ ವೇಣುಗೋಪಾಲ ರೆಡ್ಡಿ ಹಾಗೂ ಸಿದ್ರಾಮ ರವರು ವಿಶೇಷ ಮಕ್ಕಳ ಆರೋಗ್ಯದ ಕುರಿತು ಹೇಳಿದರು ಹಾಗೂ ನೀರಿನ ಫಿಲ್ಟರ್‌ನ್ನು ಕಾಣಿಕೆಯಾಗಿ ನೀಡಿದರು, ನವೀನ ವಲ್ಲಾಪೂರೆ ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕ ನುಡಿ ಮಾತನಾಡಿದರು.
ಪ್ರಭು ಸಮಾಜ ಸೇವಕ ರವರು ವಿಶೇಷ ಮಕ್ಕಳು ಪಾಲಕರಿಗೆ ಶಾಪ ಅಂದುಕೊಳ್ಳದೇ, ದೇವರು ಕೊಟ್ಟ ವರ ಎಂದು ತಿಳಿದುಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿ ವಾಸವಾಗಿರುವ ಅಶೋಕ ಕುಲಕರ್ಣಿ ರವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಮಹಾತ್ಮಾ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಮೇಲ್ವಿಚಾರಕರಾದ ಬಾಲಜಿ ಪಿ. ರವರು ಕಾರ್ಯಕ್ರಮದ ಸ್ವಾಗತ ಭಾಷಣವನ್ನು ನೆರವೇರಿಸಿಕೊಟ್ಟರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ವಿಶೇಷ ಮಕ್ಕಳ ವಸತಿಯುತ ಶಾಲೆಯ ಶಾಲೆಯ ಶಿಕ್ಷಕಿಯಾದ ಶ್ರೀಮತಿ ವಿಜಯಲಕ್ಷಿö್ಮ ನೆರವೇರಿಸಿಕೊಟ್ಟರು ಹಾಗೂ ಕಾರ್ಯಕ್ರಮದ ವಂದನಾರ್ಪಣೆಯನ್ನು ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ಮಲಾಕಿ ಮೈಕಲ್ ರವರು ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರವೀಣ ಪಾಟೀಲ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಸಂತೋಷ ಬಿರಾದಾರ, ಸುಭಾಷ ರೆಡ್ಡಿ, ಸುಮನ್, ನಾಗನಾಥ, ಚಂದ್ರಶೇಖರ, ಮಾರುತಿ ಕಾಂಬಳೆ, ರೈಚಲ್ ರಾಣಿ, ಜೈಶ್ರೀ, ನೀಲಮ್ಮ, ಹಿರಿಯ ನಾಗರಿಕರು ಹಾಗೂ ಅಂಗವಿಕಲ ವಿದ್ಯಾರ್ಥಿಗಳು ಹಾಗೂ ವಿಶೇಷ ಮಕ್ಕಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!