ಬೀದರ್

ಆರೋಗ್ಯವಂತ ಸಮಾಜಕ್ಕೆ ಆಹಾರ ಸಂಸ್ಕತಿಯೆ ಬುನಾದಿ : ಡಾ. ಭವಾನಿ ಕೆ

ಸಿರಿಧಾನ್ಯದ ಖಿಚಡಿ, ರಾಗಿ ಜಾಮುನ, ಕೊರಲಿನ ಮೊಸರನ್ನ, ಥಾಲಿಪಿಟ ಹೀಗೆ ಸಿಹಿ ಮತ್ತು ಮಸಾಲೆ ಖಾರಗಳನ್ನು ಬೆರೆಸಿ ತಯಾರಿಸಿದ ಖಾದ್ಯಗಳ ಮೌಲ್ಯಮಾಪನ ಸ್ಪರ್ಧಾತ್ಮಕವಾಗಿತ್ತು ಹಾಗೂ ಇಂತಹ ವೈವಿಧ್ಯಮಯ ಆಹಾರ ಸಂಸ್ಕತಿ ನಮ್ಮ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರವಹಿಸಿದೆ ಎಂದು ಡಾ. ಭವಾನಿ ಕೆ, ಪ್ರಾಧ್ಯಾಪಕರು, ಕೃಷಿ ಸಂಶೋಧನಾ ಕೇಂದ್ರ, ಬೀದರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು. ಜನವಾಡಾ ಹತ್ತಿರದ ಬೀದರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಗಸ್ಟ್ 18 ರಂದು ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಖಾದ್ಯಗಳ ಸ್ಪರ್ಧೆಯನ್ನು ಬೆಳಿಗ್ಗೆ 10 ಗಂಟೆಗೆ ಏರ್ಪಟಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ. ಶಿವಕುಮಾರ ಯಲಾಲ, ಸಹಾಯಕ ಯೋಜನಾ ಅಧಿಕಾರಿ, ಜಿಲ್ಲಾ ಪಂಚಾಯತ್, ಬೀದರ ಇವರು ಮಹಿಳೆಯರು ಸ್ವಸಹಾಯ ಸಂಘಗಳ ಮುಖಾಂತರ ಸಿರಿಧಾನ್ಯ ಆಧಾರಿತ ಮೌಲ್ಯವರ್ಧೀತ ಆಹಾರ ಉತ್ಪನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವಲ್ಲಿ ಎನ್.ಆರ್.ಎಲ್.ಎಮ್ ಯೋಜನೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ನೆರವು ಪಡೆಯುವಂತೆ ಕರೆನೀಡಿದರು. ಇದೆ ಸಂದರ್ಭದಲ್ಲಿ ಇನ್ನೊರ್ವ ಮುಖ್ಯ ಅತಿಥಿಗಳಾದ ಶ್ರೀ. ಶಶಿಧರ ಬಾಸನ ರವರು ಸಿರಿಧಾನ್ಯ ಉತ್ಪನಗಳ ತಯಾರಿಕೆಗೆ ಹಾಗೂ ಮಾರುಕಟ್ಟೆಗ್ಗೆ ನೆರವು ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷಕಿಯ ಭಾಷಣದಲ್ಲಿ ಡಾ. ಸುನೀಲಕುಮಾರ ಎನ್.ಎಮ್ ರವರು ಮಾತನಾಡುತ್ತ ಸಿರಿಧಾನ್ಯ ಆಧಾರಿತ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ಅನೇಕ ಉದಾಹರಣೆಗಳು ಜಿಲ್ಲೆಯಲ್ಲಿವೆ. ಅವರಲ್ಲಿ ಅನೇಕರು ಕೆವಿಕೆಯಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ಪಡೆದು ಇತರರಿಗೂ ಮಾರ್ಗದರ್ಶಕರಾಗಿ ನಿಲ್ಲುವ ಮಟ್ಟಿಗೆ ಬೆಳೆದಿದ್ದಾರೆ. ಅಂತಹವರ ಸಾಲಿನಲ್ಲಿ ತಾವು ಕೂಡಾ ಗುರುತಿಸಿಕೊಳ್ಳಬಹುದು ಹಾಗೂ ಈ ನಿಟ್ಟಿನಲ್ಲಿ ಕೆವಿಕೆಯು ಸಂಪೂರ್ಣ ಸಹಕಾರ ನೀಡುತ್ತದೆ ಎಂದರು ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 15 ಸ್ಪರ್ಧಾಳುಗಳು ಭಾಗವಹಿಸಿ ಸುಮಾರು 47 ಸಿರಿಧಾನ್ಯ ಖಾದ್ಯಗಳನ್ನು ತಯಾರಿಸಿ ಸ್ಪರ್ದೇಯಲ್ಲಿಟ್ಟಿದರು. ತಿರ್ಪುಗಾರರಾಗಿ ಡಾ. ಭವಾನಿ ಕೆ, ಪ್ರಾಧ್ಯಾಪಕರು, ಕೃಷಿ ಸಂಶೋಧನಾ ಕೇಂದ್ರ, ಬೀದರ, ಡಾ. ಶಶಿಕಲಾ ರುಳಿ, ಸಹಾಯಕ ಪ್ರಾಧ್ಯಾಕರು (ಕೃಷಿ ವಿಸ್ತರಣೆ), ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಮತ್ತು ಶ್ರೀಮತಿ. ಆರತಿ ಪಾಟೀಲ, ಕೃಷಿ ಅಧಿಕಾರಿಗಳು, ಕೃಷಿ ಇಲಾಖೆ, ಬೀದರ ರವರು ಭಾಗವಹಿಸಿದರು.

ಸ್ಪರ್ಧೆಯಲ್ಲಿ ಮೊದಲ ಬಹುಮಾನ ಶ್ರೀಮತಿ ಸುರೇಖಾ ಶೇಷಪ್ಪಾ ಹಣಕೂಣಿ ರವರು ರಾಗಿ ಜಾಮುನಗಾಗಿ, ದ್ವಿತಿಯ ಬಹುಮಾನ ಶ್ರೀಮತಿ ಪ್ರಭಾವತಿ ದೇವೆಂದ್ರ ರವರು ಸಿರಿಧಾನ್ಯಗಳ ಲಡ್ಡು ಹಾಗೂ ತೃತಿಯ ಬಹುಮಾನ ಶ್ರೀಮತಿ. ನೀಲಾಂಬಿಕೆ ಪಾಖಲ್ ರವರು ಸಿರಿಧಾನ್ಯ ಖಿಚ್ಚಡಿಗಾಗಿ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸತ್ಕರಿಸಿ ಪ್ರಮಾಣ ಪತ್ರ ವಿತರಿಸಲಾಯಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ಸ್ವಾಗತಿಸಿದರು, ಡಾ ಜ್ಞಾನದೇವ ಬುಳ್ಳಾ ವಂದಿಸಿದರು. ಜಿಲ್ಲಾ ಪಂಚಾಯತನ ಶ್ರೀ. ಆಕಾಶ ಮಠಪತಿ, ಕೃಷಿ ಇಲಾಖೆಯ ಶ್ರೀ. ವಿಜಯಕುಮಾರ ಸಿರಂಜೆ ಹಾಗೂ ಕೆವಿಕೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!