ರಾಜ್ಯ

‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಕಾರ್ಯಕ್ರಮ

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಅಂಕಿತ ಪ್ರಕಾಶನದಿಂದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ಕೊಡಮಾಡುವ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಕಾರ್ಯಕ್ರಮವು ನಗರದ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ 2023 ಆಗಸ್ಟ್ 18, ಗುರುವಾರದಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಸತೀಶಕುಮಾರ ಎಸ್. ಹೊಸಮನಿ, ”ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ದಿನಗಲ್ಲಿ ಕತೆ, ಕವನ, ಹಾಗೂ ಬರಹಗಳನ್ನು ರಚಿಸಲಾಗುತ್ತಿದೆ. ಕರ್ನಾಟಕದ ಸಾರ್ವಜನಿಕ ಗ್ರಂಥಾಲಯಗಳು ಸೇರಿ ಅಂಗೈಯಲ್ಲಿ ಅರಮನೆ ಅನ್ನುವ ಹಾಗೆ ಮೊಬೈಲ್ ಲೈಬ್ರೇರಿಯನ್ನು ಪ್ರಾರಂಭಿಸಿದೆ. ಭಾರತ ದೇಶದಲ್ಲಿ ಯಾವ ರಾಜ್ಯದ ಗ್ರಂಥಾಲಯಗಳು ಮಾಡದಂತಹ ಕೆಲಸವನ್ನು ನಮ್ಮ ರಾಜ್ಯದ ಗ್ರಂಥಾಲಯಗಳು ಮಾಡುತ್ತಿದೆ ಎಂದರು. ಇಲ್ಲಿರುವ ಲೇಖಕರು ಅಥವಾ ಪ್ರಕಾಶಕರು ತಮ್ಮಲ್ಲಿರುವ ಕೃತಿಗಳ ಸಾಫ್ಟ್ ಕಾಪಿಯನ್ನು ನಮಗೆ ನೀಡಿದರೆ, ನಾವು ಅದನ್ನು ಡಿಜಿಟಲ್ ಆಗಿ ಪರಿವರ್ತಿಸುತ್ತೇವೆ,” ಎಂದು ತಿಳಿಸಿದರು.

A group of men standing together

Description automatically generated

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ ಜೋಶಿ, “ಸದ್ಬೋಧ ಚಂದ್ರಿಕೆ ಪತ್ರಿಕೆಯು ನನ್ನ ಜೀವನದಲ್ಲಿ ಮರೆಯಲಾರದಂತಹ ಒಂದು ಪತ್ರಿಕೆ. ಕಾರಣ ಅಮೂಲ್ಯ ವಿಚಾರಗಳನ್ನು ಪತ್ರಿಕೆಯು ಹೊಂದಿದೆ. ಏಕೀಕರಣಕ್ಕಾಗಿ ಹೋರಾಡಿದ ಗಳಗನಾಥರು ಇದರ ಹುಟ್ಟಿಗೆ ಕಾರಣರಾದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಶ್ರೇಷ್ಠ ಬರಹಗಳು, ಬರಹಗಾರರು ಕಾಣಸಿಗುವುದು ವಿರಳ. ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಓದುವಿಕೆಯ ಹೊರತು ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ಇದು ಬೇಸರದ ಸಂಗತಿ. ಪ್ರಕಾಶ್ ಹಾಗೂ ಅವರ ಪತ್ನಿ ಪ್ರಭಾ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ನೀಡುತ್ತಿದ್ದು, ಬರಹಗಾರರಿಗೆ, ಪ್ರಕಾಶರಿಗೆ ಒಂದೊಳ್ಳೆಯ ವೇದಿಕೆಯಾಗಿದೆ,” ಎಂದು ತಿಳಿಸಿದರು.

ಲೇಖಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ”ಪ್ರಾರಂಭದಲ್ಲಿ ಕನ್ನಡದಲ್ಲಿ ಪ್ರಕಾಶಕರಿಲ್ಲ ಎನ್ನುವ ಕೊರತೆ ಇತ್ತು. ನಂತರದಲ್ಲಿ ಲೇಖಕರಿಲ್ಲ ಎನ್ನುವ ಮಾತು ಬಂತ್ತು. ಆದರೆ ಇದೀಗ ಲೇಖಕರು ಹಾಗೂ ಪ್ರಕಾಶಕರು ಸೇರಿ ಓದುಗರನ್ನು ಹುಡುಕುತ್ತಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಪ್ರಕಾಶಕರ ಸಂಘ ಎಲ್ಲಿದೆ ಎನ್ನುವ ಹುಟುಕಾಟವು ಶುರುವಾಗಿದೆ. ಪ್ರಕಾಶಕರ ಸಂಘವು ನಿಸ್ವಾರ್ಥದಿಂದ ಕೃತಿಗಳನ್ನು ಪ್ರಕಾಶಿಸುತ್ತಿದೆ. ಆದರೆ ಕೃತಿಗಳ ಕೊಳ್ಳುವಿಕೆಯ ಸಂಖ್ಯೆ ಮಾತ್ರ ಕ್ಷೀಣಿಸುತ್ತಿದೆ,” ಎಂದು ತಿಳಿಸಿದರು.

2022ನೇ ಸಾಲಿನ ‘ಅಂಕಿತ ಪುರಸ್ಕಾರ’ ದತ್ತಿ ಪ್ರಶಸ್ತಿಯು ಬೆಂಗಳೂರಿನ ರವೀಂದ್ರ ಪುಸ್ತಕಾಲಯ ಹಾಗೂ 2023ನೇ ಸಾಲಿನ ಅಂಕಿತ ಪುರಸ್ಕಾರವನ್ನು ‘ಛಂದ ಪುಸ್ತಕ’ವು ಪಡೆದುಕೊಂಡಿತು.ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಮಾಲೀಕ ಪ್ರಕಾಶ್ ಕಂಬತ್ತಳ್ಳಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು

Ghantepatrike kannada daily news Paper

Leave a Reply

error: Content is protected !!