ಕಲಬುರಗಿ

ಕಲಬುರ್ಗಿ:69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು ಇದರಲ್ಲಿ ಕಾಸರಗೋಡು ಕನ್ನಡಿಗರಾದ ಹಿರಿಯ ಸಿನಿಮಾ ವರದಿಗಾರ ಸುಬ್ರಮಣ್ಯ ಬಾಡೂರು ಮತ್ತು 777 ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಅವರಿಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಸಿನಿಮಾರಂಗವನ್ನು ಉತ್ತುಂಗಕ್ಕೇರಿಸಲು ಕಾರಣರಾದ ಬಿ ಎಂ ಸುಬ್ರಹ್ಮಣ್ಯ ಮತ್ತು ಕಿರಣ್ ರಾಜ್ ಅವರ ಕೊಡುಗೆ ಅಪಾರವಾಗಿದೆ ಮತ್ತು ಪತ್ರಿಕೋದ್ಯಮ ರಂಗದಲ್ಲಿ ಮಹತ್ವದ ಮಹತ್ವದ ಕಾಣಿಕೆ ಸಲ್ಲಿಸುತ್ತಿದ್ದು ಕಾಸರಗೋಡಿನ ಕನ್ನಡಿಗರು ಹೆಮ್ಮೆ ಪಡುವಂತಾಗಿದೆ ಎಂದು ಡಾ.ಪೆರ್ಲ ತಿಳಿಸಿದರು.

ಬಾನಾಸು:
ಕನ್ನಡ ಸಿನಿಮಾರಂಗದಲ್ಲಿ ಬಾನಾಸು(ಬಾಡೂರು ನಾರಾಯಣ ಆಚಾರ್ಯ ಸುಬ್ರಹ್ಮಣ್ಯ) ಎಂಬ ಕಾವ್ಯನಾಮದೊಂದಿಗೆ ಕಳೆದ 43 ವರ್ಷಗಳಿಂದ ಸತತವಾಗಿ ಸಿನಿಮಾ ಪತ್ರಿಕೋದ್ಯಮ ರಂಗದ ಅಂತರಂಗವನ್ನು ಬಗೆದು ಕನ್ನಡಿಗರಿಗೆ ನೀಡಿದ ಬಿ .ಎನ್. ಸುಬ್ರಹ್ಮಣ್ಯ ಅವರು ಮಹತ್ವದ ಸಿನಿಮಾ ಪತ್ರಕರ್ತ. ಕಾಸರಗೋಡು ಜಿಲ್ಲೆಯ ಬಾಡೂರು ಎಂಬ ಗ್ರಾಮದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ಲ ಸತ್ಯನಾರಾಯಣ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ನಂತರ ಕಾಸರಗೋಡಿನಲ್ಲಿ ಸರಕಾರಿ ಮಹಾ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಮಾಡಿ ಕಲ್ಲಿಕೋಟೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಮ್ಮೆ ಕನ್ನಡ ಪದವಿ ಏನು 1976 ರಲ್ಲಿ ಮುಗಿಸಿದರು. ಸಿನಿಮಾ ರಂಗ ಆಕರ್ಷಿಸಿದ ಅವರು


ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾ ಪತ್ರಿಕೆಗಳಿಗೆ ವರದಿಗಾರರಾಗಿ ಪ್ರಾಮಾಣಿಕವಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಅವರ ಈ ಅಪ್ರತಿಮ ಕೊಡುಗೆಗಾಗಿ ರಾಷ್ಟ್ರೀಯ ಮಟ್ಟದ ಪುರಸ್ಕಾರ ಸಂದಿದೆ ಎಂದು ಡಾ . ಸದಾನಂದ ಪೆರ್ಲ ಹೇಳಿದರಲ್ಲದೆ ಕನ್ನಡ ಸಿನಿಮಾ ರಂಗಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಕಿರಣರಾಜ್ :

ಕಾಸರಗೋಡಿನ ರಂಗಭೂಮಿಯಲ್ಲಿ ನಂತರ ಸಿನಿಮಾ ಜಗತ್ತನ್ನು ಪ್ರವೇಶಿಸುವ ಹಂಬಲತೊಟ್ಟು ಬರೆದ ಮೊಟ್ಟಮೊದಲ ಕಥೆಯನ್ನು ಸಿನಿಮಾ ತಯಾರಿಸಲು ಅವಕಾಶ ಸಿಕ್ಕಾಗ ”777 ಚಾರ್ಲಿ” ಜಯಭೇರಿ ಬಾರಿಸಿತು.
ಕಿರಣ್ ರಾಜ್ ಅವರು ಸಮೀಪದ ಮಲ್ಲಮೂಲೆಯ ದಿ.ಅಚ್ಚುತ ಮಣಿಯಾಣಿ ಯವರ ಸುಪುತ್ರನಾಗಿದ್ದು ಮಲ್ಲಮೂಲೆ ಹಾಗೂ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದವರು. ನಂತರ ರಂಗಭೂಮಿಗೆ ಆಕರ್ಷಿತರಾಗಿ ಕಾಸರಗೋಡಿನ ರಂಗಭೂಮಿಯಲ್ಲಿ ಖ್ಯಾತ ರಂಗನಿರ್ದೇಶಕ ಕಾಸರಗೋಡು ಉಮೇಶ ಸಾಲಿಯಾನ ಅವರ ಜೊತೆ ರತ್ನಾಕರ ಮಲ್ಲಮೂಲೆ ಅವರು ಬರೆದ “ಮಳೆ ನಿಂತ ಮೇಲೆ” ನಾಟಕದಲ್ಲಿ ಅಭಿನಯಿಸಿ ರಂಗಭೂಮಿ ಪ್ರವೇಶಿಸಿದರು.
ಆನಂತರ ಬೆಂಗಳೂರಿನ ಆದರ್ಶ ಫಿಲಂ ಮಾಡಿದರು. ಇವರು “ಕಾವಳ” ಎಂಬ ಟೆಲಿ ಫಿಲಂ ಮಾಡಿ ಜನಪ್ರಿಯರಾದರು. ಆನಂತರ ರಿಷಭ್ ಶೆಟ್ಟಿ ಅವರ “ಕಿರಿಕ್ ಪಾರ್ಟಿ” ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಗಳಿಸಿಕೊಂಡರು. ಬಳಿಕ ‘777 ಚಾರ್ಲಿ’ ಸಿನಿಮಾ ಕಥೆ ಹಾಗೂ ನಿರ್ದೇಶಕನಾಗಿ ಮತ್ತು ಅದರಲ್ಲೇ
ನಟನಾಗಿ ಮಿಂಚಿ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವುದು ಕಾಸರಗೋಡಿನ ಕನ್ನಡಿಗರಿಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಡಾ. ಪೆರ್ಲ ತಿಳಿಸಿದ್ದಾರೆ. ಕಾಸರಗೋಡಿನ ಸಾಹಿತಿಗಳು, ಪತ್ರಕರ್ತರು,ರಂಗಭೂಮಿ ನಟರು ಕನ್ನಡ ಸಿನಿಮಾ , ಪತ್ರಿಕೋದ್ಯಮ ರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅನುಪಮವಾದ ಕೊಡುಗೆ ನೀಡುತ್ತಿರುವುದು ಕಾಸರಗೋಡಿನ ಕನ್ನಡಿಗರ ಸ್ವಾಭಿಮಾನವನ್ನು ಹೆಚ್ಚಿಸಿದೆ ಮಾತ್ರವಲ್ಲ ಕಾಸರಗೋಡಿನಲ್ಲಿ ಇನ್ನೂ ಕನ್ನಡ ಜೀವಂತವಿದೆ ಮತ್ತು ಎತ್ತರದ ಸ್ಥಾನಕ್ಕೆ ಏರಬಲ್ಲರು ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

Ghantepatrike kannada daily news Paper

Leave a Reply

error: Content is protected !!