ಬೀದರ್

ಸಾಹಿತ್ಯ ರತ್ನ ಅಣ್ಣಾಭಾವು ಸಾಠೆಯವರ 103ನೇ ಜಯಂತಿ ಸಾಧಕರಿಗೆ ಸನ್ಮಾನ

ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಂಚ್ ಟ್ರಸ್ಟ್ ಬೀದರ ಹಾಗೂ ಕರ್ನಾಟಕ ರಾಜ್ಯ ಮಾದಿಗರ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ದಿನಾಂಕ: 06-08-2023 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆಯವರ 103ನೇ ಜಯಂತಿ ಅಂಗವಾಗಿ ಸಂವಿಧಾನ ಜಾಗೃತಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಮತ್ತು ಪಿ.ಜಿ.ಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುತ್ತದೆ ಹಾಗೂ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರ, ಪತ್ರಿಕಾ ಕ್ಷೇತ್ರ, ಸಾಹಿತ್ಯಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಸಂಘಟನಾ ಕ್ಷೇತ್ರದಲ್ಲಿ ದುಡಿದ ಮಹನಿಯರಿಗೆ ವಿಶೇಷ ಸನ್ಮಾನ ಕೂಡ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಬೀದರ ಜಿಲ್ಲೆಯ ಅರಣ್ಯ, ಪರಿಸರ, ಜೀವಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆಯವರು ಉದ್ಘಾಟಿಸಲಿದ್ದಾರೆ, ಸಚಿವರಾದ ಕೆ.ಎಚ್. ಮುನಿಯಪ್ಪಾ, ಡಾ. ಎಚ್.ಸಿ. ಮಹಾದೇವಪ್ಪಾ, ಶ್ರೀ ಪ್ರೀಯಾಂಕ ಖರ್ಗೆ, ಶ್ರೀ ರಹೀಂ ಖಾನ್, ಶ್ರೀ ಆರ್.ಬಿ. ತಿಮ್ಮಾಪೂರ ಇವರು ಭಾಗವಹಿಸುವರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ರಾಜ್ಯಸಭೆ ಸದಸ್ಯರಾದ ಡಾ. ಎಲ್. ಹಣಮಂತಯ್ಯನವರು ಉಪನ್ಯಾಸ ನೀಡುವರು.
ಮಧ್ಯಾಹ್ನ 2 ಗಂಟೆಗೆ ಸಂವಿಧಾನ ಸರ್ವಸಮಾನವೆಂಬ ನಾಟಕವನ್ನು ಕಾರ್ಮೇಲ್ ಸೇವಾ ಟ್ರಸ್ಟ್ ಇವರು ಪ್ರಸ್ತುತಪಡಿಸುವರು, ಮಧ್ಯಾಹ್ನ 2.30 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ ರಸಗೊಬ್ಬರ ಸಚಿವರಾದ ಶ್ರೀ ಭಗವಂತ ಖೂಬಾ ಇವರು ಉದ್ಘಾಟಿಸುವರು, ಇನ್ನೋರ್ವ ಕೇಂದ್ರ ಸಚಿವರಾದ ಎ. ನಾರಾಯಣ ಸ್ವಾಮಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಬೀದರ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಮಾರೋಪದಲ್ಲಿ ಭಾಗವಹಿಸುವರು.
ವಿಶೇಷವಾಗಿ ಅಣ್ಣಾಭಾವು ಸಾಠೆಯವರು 01-08-1920 ರಂದು ಮಹಾರಾಷ್ಟç ಸಾಂಗ್ಲಿ ಜಿಲ್ಲೆಯ ವಾಟೆಗಾಂವ ಗ್ರಾಮದಲ್ಲಿ ಜನಿಸಿದ ಇವರು ಕೇವಲ ಒಂದು ದಿನ ಮಾತ್ರ ಶಾಲೆಗೆ ದಾಖಲಾಗಿ, ನಂತರ ಶಾಲೆ ಬಿಟ್ಟು ಅವರು ಬಾಂಬೆಯಲ್ಲಿ ಬಟ್ಟೆ ತಯಾರಿಸುವ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದರು. 1944 ರಲ್ಲಿ ಕೆಂಬಾವುಟ ಹೆಸರಿನ ಕಲಾ ತಂಡ ಕಟ್ಟಿ, ಅಣ್ಣಾಭಾವು ಸಾಠೆಯವರು ಮಹಾರಾಷ್ಟç ರಾಜ್ಯಾದ್ಯಂತ ಕಾರ್ಮಿಕರನ್ನು ಸಂಘಟಿಸಿದರು. 1961 ರಲ್ಲಿ ಇಂಡೊ ಸೊವಿಯತ್ ಕಲ್ಚರಲ್ ಸೊಸೈಟಿ ವತಿಯಿಂದ ಸಾಠೆಯವರಿಗೆ ರಷ್ಯಾ ದೇಶಕ್ಕೆ ಹೋಗಿ, ಆಕಾಶವಾಣಿಯಲ್ಲಿ ಭಾಷಣ ಮಾಡಲು ಅವಕಾಶ ಸಿಕ್ಕಿತ್ತು. 35 ಕಾದಂಬರಿ, 15 ಕಥಾ ಸಂಕಲನ, 10 ಲಾವಣಿಗಳು, 3 ನಾಟಕಗಳು, 11 ಪವಾಡ ಗೀತೆಗಳು, 1 ಪ್ರವಾಸ ಕಥನ, 12 ವಗನಾಟ್ಯ ಹೀಗೆ 100 ಕ್ಕೂ ಮೇಲ್ಪಟ್ಟು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳು 27 ಭಾಷೆಗಳಲ್ಲಿ ಅನುವಾದಗೊಂಡಿವೆ, 12 ಚಿತ್ರಗೀತೆಗಳು ಬಿತ್ತವಾಗಿವೆ, ಫಕೀರ ಎಂಬ ಮಹಾನ ಕಾದಂಬರಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಸಮರ್ಪಿಸಿ ಬರೆದ ಕಾದಂಬರಿ, ಜಾಗತಿಕ ಮಟ್ಟದಲ್ಲಿ ರಷ್ಯಾದ ಗಾರ್ಕಿ, ಚೀನಾದ ಲೂಷುನರ್ ಮಟ್ಟದ ಕ್ಲಾಸಿಕ್ ಕೃತಿಗಳನ್ನು ಕಟ್ಟಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಅಣ್ಣಾಭಾವು ಸಾಠೆ ಟ್ರಸ್ಟ್ ಅಧ್ಯಕ್ಷರಾದ ಎಂ.ಎಸ್. ಮನೋಹರ ರವರು ಹೇಳಿದರು.
ಈಗಾಗಲೇ ಕಳೆದ ಎರಡು ಷರ್ವಗಳಿಂದ ಮನೆ ಮನೆಗೆ ಸಂವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬ ಯುವಕರಿಗೂ ಅರ್ಥವಾಗುವಂತೆ ತಿಳಿಸುವುದಕ್ಕಾಗಿ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂವಿಧಾನ ಪೀಠಿಕೆಯನ್ನು ನೀಡಲಾಗುತ್ತಿದೆ ಎಂದು ಮಾದಿಗ ನೌಕರ ಸಂಘದ ಅಧ್ಯಕ್ಷರಾದ ಸುಮಂತ ಕಟ್ಟಿಮನಿಯವರು ಹೇಳಿದರು.
ಮೊದಲಿಗೆ ಪ್ರವೀಣ ಮೀರಾಗಂಜ್‌ಕರ್ ಸ್ವಾಗತಿಸಿದರು, ವೇದಿಕೆಯ ಮೇಲೆ ಡಾ. ದೇವಿದಾಸ ತುಮಕುಂಟೆ, ಸುಭಾಷ ದೊಡ್ಡಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸುಭಾಷರತ್ನ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!