ಬೀದರ್

ಸಾರ್ವಜನಿಕರು ನಿಗದಿಪಡಿಸಿರುವ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಮನವಿ

ಬೀದರ, ಜುಲೈ 26 – ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿö್ಮÃ ಯೋಜನೆಯು ಜುಲೈ 20 ರಿಂದ ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ಸದರಿ ಯೋಜನೆಯಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬAಧ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಐದು ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.
ನೋಂದಣಿ ಕೇಂದ್ರಗಳ ವಿವರ: ವಾರ್ಡ ಸಂಖ್ಯೆ: 8,9,10,11,12,13 ಮತ್ತು 17 ರಲ್ಲಿಯ ಸಾರ್ವಜನಿಕರು ನಗರಸಭೆ ಮುಖ್ಯ ಕಾರ್ಯಾಲಯ ಹಳೆ ಬಸ್ ನಿಲ್ದಾಣದ ಎದುರುಗಡೆ ಬೀದರ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಉಮಾದೇವಿ (ಮೊ. 9480298508) ದಶವಂತಿ (ಮೊ.9611794540) ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ವಾರ್ಡ ಸಂಖ್ಯೆ: 14,15,16, 18 ಮತ್ತು 19 ರಲ್ಲಿಯ ಸಾರ್ವಜನಿಕರು ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿ ಮುಖ್ಯ ರಸ್ತೆ ನೌಬಾದ ಬೀದರ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಶಿವಕುಮಾರ (ಮೊ.6364163895), ಫಿರದೋಸ (ಮೊ.6363944367) ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ವಾರ್ಡ ಸಂಖ್ಯೆ: 1,2,3,4,5,6 ಮತ್ತು 7 ರಲ್ಲಿಯ ಸಾರ್ವಜನಿಕರು ಉಸ್ಮಾನ ಗಂಜ ಆರೋಗ್ಯ ನಿರೀಕ್ಷಕರ ಕಾರ್ಯಾಲಯ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಪಾರ್ವತಿ (ಮೊ.8095535203), ಅಬ್ದುಲ್ ಬಾರಿ (ಮೊ.8951312526) ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ವಾರ್ಡ ಸಂಖ್ಯೆ: 29,30,31,32,33,34 ಮತ್ತು 35 ರಲ್ಲಿಯ ಸಾರ್ವಜನಿಕರು ಸಿ.ಎಂ.ಸಿ.ಶಾಲೆ ಮಂಗಲಪೇಟ್ ಕಮಾನ ಹತ್ತಿರ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ರೋಬಿನ್ ಜವಾನ (ಮೊ.8904411123), ಎಂ.ಡಿ.ಆರೀಫ್ (ಮೊ.7204904911) ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ವಾರ್ಡ ಸಂಖ್ಯೆ: 20,21,22,23,24,25,26,27 ಮತ್ತು 28 ರಲ್ಲಿಯ ಸಾರ್ವಜನಿಕರು ಗಾಂಧಿ ಗಂಜ ಆರೋಗ್ಯ ನಿರೀಕ್ಷಕರ ಕಾರ್ಯಾಲಯ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಶಿವರಾಜ ನೀ.ಸ.ಸಾ.(ಮೊ.9880120119), ಶ್ರೀದೇವಿ (ಮೊ.8217494645) ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.
ಪ್ರಯುಕ್ತ ಸಾರ್ವಜನಿಕರು ಈ ಮೇಲೆ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಫಲಾನುಭವಿಗಳು ಗೃಹಲಕ್ಷಿö್ಮÃ ಯೋಜನೆಯಡಿ ನೋಂದಾಯಿಸಿಕೊಳ್ಳುವAತೆ ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!