ಬೀದರ್

ಶಬರಿ ಮಾತಾ ಬೀದರಕ್ಕೆ ಪಾದಾರ್ಪಣೆ ಮಾಡಿದ 27 ವಾರ್ಷಿಕೋತ್ಸವ ನೆನಪಲ್ಲಿ ಸಂಗೀತ ಸಮಾರಂಭ*

ಶಬರಿ ಮಾತರವರು ಮೊದಲ ಸಲ ಬೀದರ ಪಾದಾರ್ಪಣೆ ಮಾಡಿದ ೨೭ ನೇ ವರ್ಷದ ಸವಿ ನೆನಪಿನಲ್ಲಿ  ಸಂಗಿತೋತ್ಸವವು ಬಸಸ್ಟ್ಯಾಂಡ ಹತ್ತಿರದ ದೇವಿ ಕಾಲೋನಿಯ ದೇವಿ ಮಂದಿರದ ಸಮೀಪವಿರುವ ಬಸವರಾಜ ಶಿಲವಂತರ ಮನೆಯಲ್ಲಿ ವಿಜ್ರಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು,
ನಾಡಿನ ಪ್ರಖ್ಯಾತ ಗಾಯಕಿ ಮತ್ತು ವೈಲಿನ ಕಲಾವಿದರು ಆಗಿರುವಂತಹ ವೀಣ ಮಠ ಧಾರವಾಡ ಅವರು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ  ಸಂಗೀತ ಜಾತಿ ವರ್ಗ ಭಾಷೆ ದೇಶಗಳ ಗಡಿ ದಾಟಿ ಎಲ್ಲರ ಮನ ಸೂರೆಗೊಳ್ಳುತ್ತದೆ ಎಲ್ಲರು ತಲೆ ಬಾಗುವಂತೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ತುಂಬಾ ಮಾರ್ಮಿಕ ವಿದ್ವತ್ತು ಪೂರ್ಣ ಮಾತುಗಳನ್ನಾಡಿದರು,
ಅವರ ಮಾತಿನಲ್ಲಿ ಅವರ ಅಧ್ಯಯನ ಮತ್ತು ಸಂಗೀತದ ಪ್ರತಿ ಸಮರ್ಪಣೆ ಕಾಣುತಿತ್ತು ,
ಸಂಗೀತ ಬರಿ ಮನುಷ್ಯರಿಗಷ್ಟೇ ಅಲ್ಲಾ ಜೀವ ಚರಗಳು ಸಸ್ಯಗಳು ಮರಗಳು ಸಹ ಸಂಗಿತಕ್ಕೆ ಅರಳುತ್ತವೆ, ಉತ್ಕೃಷ್ಟ ಫಲ ಕೊಡುತ್ತವೆ ಎಂದು ವಿಜ್ಞಾನ ವು ಸಹ ಒಪ್ಪಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಂಗೀತದ ಏಳು ಬೀಳುಗಳನ್ನು ಮೇಲಕು ಹಾಕಿದರು
ಇಂತಹ ಸಂಗೀತದ ಸೇವೆಯನ್ನು ಶಬರಿ ಮಾತರವರ ಪರಮ ಶಿಷ್ಯ ಅವರೊಡನಾಡಿ ಅವರಿಂದ. ದೀಕ್ಷೆಯ ಪಡೆದಿರುವಂತ ಬಸವರಾಜ ಶಿಲವಂತರವರು ಆಯೋಜಿಸಿದ್ದು ಅವರ ಗುರು ಭಕ್ತಿಗೆ ಸಾಕ್ಷಿ ಎಂದರು
ಶಿವಕುಮಾರ ಪಾಂಚಾಳ ಮಾತನಾಡುತ್ತ ಭಸವರಾಜರ ಶಬರಿ ಮಾತೆಯ ಪ್ರತಿ ಸಮರ್ಪಣೆ ಭಾವ ಇತ್ತು ಗುರು ಶಿಷ್ಯರ ಈ ಅನನ್ಯತೆಯ ಸಂಬಂಧ ನಮಗೆಲ್ಲರಿಗೂ ಮಾದರಿ ಎಂದರು.
ಪ್ರಸ್ತಾವಿಕವಾಗಿ ಬಸವರಾಜ ಶಿಲವಂತರವರು ಮಾತನಾಡಿದರು ಈ ಕಾರ್ಯಕ್ರಮದ ಉದ್ದೇಶ  ಪ್ರಸ್ತುತ ಪಡಿಸಿದರು ಶಬರಿ ಮಾತಾರವರು ಮೊದಲ ಸಲ ನಮ್ಮ ಮನೆಗೆ  ಭೇಟಿ ನೀಡಿ ೨೭ ವರ್ಷಗಳು ಗತಿಸಿದವು ಅವರೊಡನೆ ಕಳೆದ ದಿನಗಳು ಪರಮಾನಂದವಾಗಿದ್ದವು ಅವರ ಕೃಪಾದೃಷ್ಟಿ ಗೆ ಭಾಜನವಾಗಿದ್ದು ನನ್ನ ಸೌಭಾಗ್ಯ ಎಂದರು, ಅವರ ಪಾದ ಸ್ಪರ್ಶ ಈ ಬೀದರ ಭೂಮಿಗೆ ಆಗಿ ಈಗ ಇಪ್ಪತೇಳು ವರ್ಷಗಳು ಗತಿಸಿದರಿಂದ ಆ ಸ್ಮರಣೆಗಾಗಿಯೇ ಈ ಸಮಾರಂಭ ಎಂದು ಹೇಳಿದರು,
ಪ್ರಭಾವತಿ ಶಿಲವಂತರವರು ಸ್ವಾಗತ ಕೋರಿದರು, ಶ್ರೀಮತಿ ಸರಸ್ವತಿ ಅಂಬರೀಶ್  ಶಿಲವಂತರವರು ವಂದಿಸಿದರು
ಸಂಗೀತ ಉತ್ಸವದಲ್ಲಿ ಪಂಡಿತ ವೆಂಕಟೇಶ ಹಾಲಕೂಡ ಅವರು  ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಅತ್ಯದ್ಭುತವಾಗಿ ನಡೆಸಿಕೊಟ್ಟರು  ಸಭಿಕರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿದ್ದು ವಿಶೇಷ ವಾಗಿತ್ತು  ಶಿವಕುಮಾರ್ ಪಂಚಾಳ ಸುಗಮ ಗಾಯನ್ ಅತ್ಯುತ್ತಮ ವಾಗಿ ಹಾಡಿ ಸಭಿಕರಿಂದ ಸೈ ಎನ್ನಿಸಿಕೊಂಡರುಅಲ್ಲದೆ ನಾಡಿನ ಮತ್ತು ಸ್ಥಳಿಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರುಸ್ಥಳೀಯ ಸಂಗೀತ ಆಸಕ್ತರು ಹೆಚ್ಚಿನ ಸಂಖೆಯಲ್ಲಿ ಸೇರಿದ್ದು ವಿಶೇಷ ವಾಗಿತ್ತು ಇಡೀ ರಾತ್ರಿಯಲ್ಲಿ ಸಂಗೀತ ಸುಧೆ ಹರಿಯಿತು ಸಭೆಯಲ್ಲಿ ಒಬ್ಬರು ಸಹ ಏಳದಿರುವುದು ಎಲ್ಲರ ಗಮನ ಸೇಳೆಯಿತು ,

Ghantepatrike kannada daily news Paper

Leave a Reply

error: Content is protected !!