ವೀರ ಕನ್ನಡಿಗರ ಸೇನೆ ಕೇಂದ್ರ ಕಛೇರಿ ಉಧ್ಘಾಟನೆ
ವೀರ ಕನ್ನಡಿಗರ ಸೇನೆ ಕಲ್ಯಾಣ ಕರ್ನಾಟಕ ವಿಭಾಗದ ಕೇಂದ್ರ ಕಛೇರಿಯನ್ನು ಭಾನುವಾರ 30-7-2023 ರಂದು ಮಧ್ಯಾಹ್ನ 1 ಗಂಟೆಗೆ ಏಷಿಯನ್ ಬಿಜನೆಸ್ ಸೆಂಟರ ಕಲಬುರಗಿಯಲ್ಲಿ ವೀರ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಮೃತ ಪಾಟೀಲ್ ಸಿರನೂರು ರವರ ನೇತ್ರತ್ವದಲ್ಲಿ ನಡೆಯಲಿದೆ ಕಲ್ಯಾಣ ಕರ್ನಾಟಕ ಭಾಗದ ಬೀದರ, ಕಲಬುರುಗಿ ರಾಯಚೂರು ಯಾದಗಿರಿ ಬಳ್ಳಾರ ವಿಜಯನಗರ ವಿಜಾಪೂರ ಕೊಪ್ಪಳ ಜಿಲ್ಲೆಯ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು, ಬೀದರ ಜಿಲ್ಲೆಯ ಹುಮನಾಬಾದ ಬಸವಕಲ್ಯಾಣ ಭಾಲ್ಕಿ ಔರಾದ (ಬಿ) ಹುಲಸೂರು ಕಮಲನಗರ ಬೀದರ ಉತ್ತರ ದಕ್ಷಣ ಎಲ್ಲಾ ತಾಲ್ಲೂಕ ಅಧ್ಯಕ್ಷರು ಪದಾಧಿಕಾರಿಗಳು ತಪ್ಪದೆ ಭಾಗವಹಿಸಲು ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್ ಜಂಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರಜಾಶಕ್ತಿ ಸಮಿತಿ ಸಂಘಟನೆಗಳ ರಾಜ್ಯಾಧ್ಯಕ್ಷರಾದ ಚಲನಚಿತ್ರ ನಟ, ಗಾಯಕರು ನಿರ್ಮಾಪಕ ಡಾ. ವಿಶ್ವನಾಥ ಜಿ ಪಿ ಬೆಂಗಳೂರು ದಿವ್ಯ ಸಾನಿಧ್ಯ ನಾಗಲಿಂಗ ಶರಣರುಚರಲಿಂಗ ಮಹಾಸ್ವಾಮಿ ಸಂಗನಬಸವ ಸ್ವಾಮಿ ಡಾ. ಗುರುಮೂರ್ತಿ ಶಿವಚಾರ್ಯ ಶಾಂತ ಸೋಮನಾಥ ಶಿವಚಾರ್ಯ ಚನ್ನವೀರ ಮಹಾ ಸ್ವಾಮಿಗಳು ವಹಿಸಲಿದ್ದು ಮಹಾ ಪೌರ ವಿಶಾಲ ದರ್ಗಿ ಉದ್ಘಾಟನೆ ಮಾಡಲಿದ್ದುಮ, ಮುಖ್ಯ ಅತಿಥಿಗಳಾಗಿ ಶಾಸಕರಾದ ಅಲ್ಲಂ ಪ್ರಭು ಪಾಟೀಲ್ ಶಶಿಲಕುಮಾರ ನಮೋಸಿ ಬಸವರಾಜ ಮತ್ತಿಮೊಡ್ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಹಿರಿಯ ಹೋರಾಟಗಾರರಾದ ಶರಣು ಗದಗಿ ವೈದ್ಯರಾದ ಡಾ. ಶರಣಬಸಪ್ಪಾ ಹರವಾಳ ಡಾ. ಪ್ರಶಾಂತ ಡಾ. ಬಸವರಾಜ ಮರತೂರ ಕಾಂಗ್ರೇಸ ಮುಖಂಡರಾದ ನೀಲಕಂಠರಾವ ಮೂಲಗೆ ಭಾಗವಹಿಸಲಿದ್ದು ಅಧ್ಯಕ್ಷತೆ ಸಮಾಜ ಸೇವಕರಾದ ಶರಣು ಪಪ್ಪಾ ವಹಿಸಲಿದ್ದು ಈ ವರ್ಷ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಆಗ್ರಶ್ರೇಣಿಯಲ್ಲಿ ಪಾಸಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು. ವೀರ ಕನ್ನಡಿಗರ ಸೇನೆ ರಾಜ್ಯ ಉಪಾಧ್ಯಕ್ಷರಾದ ರವಿ ವಂಟೆ ಶಿವಾಜ ಚೌವ್ಹಾಣ ಕಲಬುರಿಗಿ ಮುಂತಾದವರು ಕಾರ್ಯಕ್ರಮ ಆಯೋಜನೆಯಲ್ಲಿ ಭಾಗವಹಿಸುವುರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.