ಬೀದರ್

ವಿಜ್ಞಾನಿಗಳಿಂದ ಬೆಳೆ ಸಮೀಕ್ಷೆ ಹೆಸರು ಹಾಗೂ ಸೋಯಾ ಅವರೆಯಲ್ಲಿ ಹಳದಿ ನಂಜು ರೋಗ

ಕೃಷಿ ವಿಜ್ಞಾನ ಕೇಂದ್ರ ಬೀದರ್ ನ ವಿಜ್ಞಾನಿಗಳ ತಂಡ ಬೀದರ್ ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ಗ್ರಾಮಗಳ ಭೇಟಿ ನೀಡಲಾಗಿ ಹೆಸರು ಹಾಗೂ ಸೋಯಾ ಅವರಿಯಲ್ಲಿ ಹಳದಿ ನಂಜು ರೋಗದ ಬಾಧೆ ಕಂಡುಬಂದಿದೆ.
ಹಳದಿ ನಂಜು ರೋಗ ಪಸರಿಸಲು ಬಿಳಿ ನೊಣ (ಬೆಮೆಸಿಯೊ ಟೇಬ್ಯಾಸಿ) ಕಾರಣವಾಗಿದ್ದು ಈ ಕೀಟದ ಪ್ರೌಢ ಮತ್ತು ಅಪ್ಸರೆ ಕೀಟಗಳು ಗಿಡಗಳ ಎಲೆಗಳಿಂದ ಹಾಗೂ ಇತರೆ ಭಾಗಗಳಿಂದ ರಸ ಹೀರಿ ನೇರವಾಗಿ ಹಾಗೂ ತನ್ನ ಜೊಲಿನ ಮೂಲಕ ಹಳದಿ ನಂಜು ರೋಗದ ವೈರಸ್ ನಂಜನವನ್ನು ಗಿಡದಲ್ಲಿ ಸೇರಿಸಿ ಪರೋಕ್ಷವಾಗಿಯು ಕೂಡ ಬಾಧೆ ಉಂಟುಮಾಡುತ್ತದೆ.
ಬಾಧೆ ಲಕ್ಷಣಗಳು : ಮೊದಲು ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು, ನಂತರ ಇವು ಹೆಚ್ಚಾಗಿ ಹಳದಿ ಹಸಿರು ಲಕ್ಷಣಗಳು ಕಂಡುಬರುತ್ತವೆ. ಕೊನೆಗೆ ಇಡೀ ಗಿಡದ ಎಲೆಗಳು ಮತ್ತು ಕಾಯಿಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಬಾಧೆ ಉಂಟು ಮಾಡುತ್ತದೆ. ಬಾಧೆ ತೀವ್ರವಾಗಿದ್ದಲ್ಲಿ ಇಡೀ ಹೊಲ ಹಳದಿ ಬಣ್ಣಕ್ಕೆ ತಿರುಗುತ್ತದೆ, ಇದರಿಂದಾಗಿ ಗಿಡದಲ್ಲಿ ಹೂ ಇರದೆ ಕಾಯಿಗಳು ಕಾಳು ಕಟ್ಟದೆ ಸಂಪೂರ್ಣವಾಗಿ ಹಳದಿ ಆಗುವುದನ್ನು ಕಾಣುತ್ತೆವೆ.
ನಿರ್ವಹಣಾ ಕ್ರಮಗಳು : ಹಳದಿ ನಂಜು ರೋಗ ಬಾಧಿತ ಗಿಡಗಳನ್ನು ಹೊಲದಿಂದ ಕಿತ್ತು ಸುಟ್ಟು ನಾಶಪಡಿಸಿ ಹೊಲದಲ್ಲಿ ಪ್ರತಿ ಎಕರೆಗೆ 8 ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ ಒಂದು ಅಡಿ ಮೇಲೆ ಇರುವಂತೆ ಹಾಕಿರಿ, ಸಿಂಪರಣೆಗಾಗಿ ಅಂರ್ತವ್ಯಾಪಿ ಕೀಟನಾಶಕ ಇಮಿಡಾಕ್ಲೋಪ್ರೀಡ್ 17.5 ಎಸ್ ಎಲ್ @ 0.3 ಮೀ.ಲೀ ಅಥವಾ ಥಾಯೋಮೀಥ್ಯಾಕ್ಸಮ್ @ 0.3 ಗ್ರಾಂ ಅಥವಾ ಅಸಿಫೇಟ್ @1.0 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳಬೇಕು ಇದೇ ಸಿಂಪಡಣೆಯನ್ನು 15 ದಿವಸಗಳ ನಂತರ ಮತ್ತೊಮ್ಮೆ ಕೈಗೊಳ್ಳಬೇಕಾಗುತ್ತದೆ.
ಇದಲ್ಲದೆ, ಹುಮನಾಬಾದ ತಾಲೂಕಿನ ಕೆಲವೊಂದು ರೈತರ ಹೊಲದಲ್ಲಿ ಹೆಸರು ಬೆಲೆಯಲ್ಲಿ ಎಲೆ ಚುಕ್ಕೆ ರೋಗದ ಬಾಧೆ ಕಂಡುಬಂದಿದೆ. ನಿರ್ವಹಣೆಗಾಗಿ ರೈತ ಬಾಂಧವರು ಶೀಲಿಂದ್ರನಾಶಕ ಹೆಕ್ಸಾಕೊನೊಝೊಲ್ @ 1.0 ಮೀ.ಲೀ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು.
ತಂಡದಲ್ಲಿ : ಕೃಷಿ ವಿಜ್ಞಾನ ಕೇಂದ್ರ ಬೀದರ್‍ನ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್, ಡಾ. ಜ್ಞಾನದೇವ ಬುಳ್ಳಾ, ಡಾ. ಅಕ್ಷಯಕುಮಾರ್ ಇದ್ದರು. – ಬೀದರ ತಾಲೂಕಿನ ಔರಾದ ಎಸ್ ಗ್ರಾಮದ ರೈತರ ಹೊಲದಲ್ಲಿ ಸಮೀಕ್ಷೆ ಮಾಡುತಿರುವುದು.

Ghantepatrike kannada daily news Paper

Leave a Reply

error: Content is protected !!