ಬೀದರ್

ಲಿಂಗಾಯತ ಧರ್ಮವು ಪ್ರಗತಿಪರ ಶಾಂತಿ, ಸಮೃದ್ಧಿ, ವೈಜ್ಞಾನಿಕತೆಯ ಶ್ರೇಷ್ಠ ಧರ್ಮವಾಗಿದೆ -ರಾಜೇಂದ್ರಕುಮಾರ ಗಂದಗೆ

ಬೀದರಃ-ಜು. 19, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಲೋಕಕ್ಕೆ ಉತ್ತಮ ಸಂಸ್ಕøತಿ, ಆಚಾರ ದಯಾಪರತೆ, ಕಾಯಕ ದಾಸೋಹ, ಸ್ತ್ರೀ ಸ್ವಾತಂತ್ರತೆ, ಸಮಾನತೆ, ಜಾತಿ ರಹಿತ ವರ್ಗರಹಿತ, ಮಾನವೀಯತೆ, ಸಕಲ ಜೀವಿಗಳ ಕಲ್ಯಾಣಪರ ಕಾಳಜಿ, ಸಹಜ ಪ್ರಗತಿಪರ ಶಾಂತಿ, ಸಮೃದ್ಧಿ ಮತ್ತು ವೈಜ್ಞಾನಿಕತೆಯ ಶ್ರೇಷ್ಠ ಧರ್ಮವಾಗಿದೆ ಎಂದು ಸರ್ಕಾರಿ ನೌಕರರ ಸಂಘÀದ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಅವರು ನುಡಿದರು.
ಅವರು ದಿನಾಂಕ 17-7-2023 ರಂದು ಸಂಜೆ 6-00 ಗಂಟೆಗೆ ನಗರದ ಡಾ. ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಅಕ್ಕಮಹಾದೇವಿ ಮಹಿಳಾ ಸಾಂಸ್ಕøತಿಕ ಸಂಘವು ಹಮ್ಮಿಕೊಂಡ ಜಯದೇವಿ ತಾಯಿ ಲಿಗಾಡೆಯವರ ಬದುಕು-ಬರಹ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ ಆ ದಿಶೆಯಲ್ಲಿ ಜಯದೇವಿ ತಾಯಿ ಲಿಗಾಡೆಯವರು ಬಹುಮುಖ ರೀತಿಯಲ್ಲಿ ಬಸವತತ್ವವವನ್ನು ಅಪ್ಪಿಕೊಂಡು ಸೇವೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿರುವ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ 12ನೆಯ ಶತಮಾನದಲ್ಲಿ ಮಹಾತಾಯಿ ಅಕ್ಕಮಹಾದೇವಿಯವರು ಸ್ತ್ರೀ ಜನಾಂಗಕ್ಕೆ ಪ್ರೇರಣಾದಾಯಕರಾಗಿದ್ದ ಹಾಗೆ 21ನೆಯ ಶತಮಾನದಲ್ಲಿ ಜಯದೇವಿ ತಾಯಿ ಲಿಗಾಡೆಯವರು ಸ್ತ್ರೀ ಕುಲಕ್ಕೆ ಪ್ರೇರಣಾದಾಯಕರಾಗಿದ್ದಾರೆ. ಲಿಗಾಡೆಯವರು ಶರಣತತ್ವವವನ್ನು ಮೈಗೂಡಿಸಿಕೊಂಡಿದ್ದರು. ಅವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದ್ದುಕೊಂಡು ಕನ್ನಡದ ನೆಲ, ಜಲ, ಭಾಷೆಯ ಮೇಲೆ ಅಪಾರ ಭಕ್ತಿಯಿಟ್ಟುಕೊಂಡಿದ್ದರು. ಅಪ್ಪಟ ಬಸವತತ್ವರಾಗಿರುವವರು, ಶ್ರೀಮಂತಿಕೆಯ ಐಶಾರಾಮಿ ಬದುಕನ್ನು ತ್ಯಜಿಸಿ ಸರಳತೆ ಮತ್ತು ಶರಣ ತತ್ವದ ಮಾರ್ಗದಲ್ಲಿ ಸಾಗಿದ್ದರು.
ಬೆಮಳಖೇಡದ ಆದರ್ಶ ವಿದ್ಯಾಲಯದ ಪ್ರಭಾರಿ ಮುಖ್ಯ ಗುರುಗಳಾದ ಸರಿತಾ ಹುಡಗಿಕರರವರು ಜಯದೇವಿ ತಾಯಿ ಲಿಗಾಡೆಯವರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ಮಂಡಿಸುತ್ತಾ, ತಾಯಿಯವರು ಉತ್ತಮ ಶರಣ ಸಂಸ್ಕøತಿ ಮತ್ತು ಶ್ರೇಷ್ಠ ಮನೆತನದವರಾಗಿದ್ದು, ಕೇವಲ 6ನೇ ತರಗತಿಯವರೆಗೆ ಶಿಕ್ಷಣ ಪಡೆದರೂ ಸ್ವಧ್ಯಯನದಿಂದ ಸರ್ವಜ್ಞನು ರಚಿಸಿದ ತ್ರಿಪದಿಗಳಂತೆ ಸುಮಾರು ನಾಲ್ಕು ಸಾವಿರ ತ್ರಿಪದಿಗಳ ಸಾಹಿತ್ಯ ಲಿಗಾಡೆ ತಾಯಿಯವರು ರಚಿಸಿದ್ದಾರೆ. ಕನ್ನಡ ನಾಡು ನುಡಿಗಾಗಿ, ಕರ್ನಾಟಕ ಏಕೀಕರಣದಲ್ಲಿ ಸಕ್ರೀಯವಾಗಿ ಭಾಗವಹಿಸಿ ಹೋರಾಟ ಮಾಡಿದ್ದಾರೆ. ಸ್ತ್ರೀ ಶಿಕ್ಷಣಕ್ಕಾಗಿ ಭಾರತೀಯ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಕನ್ನಡ ಶಾಲೆಗಳನ್ನು ಸ್ವಂತ ಖರ್ಚಿನಿಂದ ಸ್ಥಾಪಿಸಿದ್ದಾರೆ. ಕನ್ನಡ ಶಾಲೆಗೆ 400 ಶಿಕ್ಷಕರ ನೇಮಕ ಮಾಡಿ ಅವರಿಗೆ ಸಂಬಳ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಔದ್ಯೋಗಿಕ ಸಂಸ್ಥೆ ಸ್ಥಾಪಿಸಿ ಸಾಕ್ಷರತಾ ಕೇಂದ್ರವನ್ನಾಗಿ ಮಾಡಿರುವ ಹಿರಿಮೆ ಅವರದ್ದಾಗಿದೆ ಎಂದರು. 7 ಕನ್ನಡ ಭಾಷೆಯಲ್ಲ್ಲಿ 7 ಮರಾಠಿ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದು ವಿವರಿಸಿದರು.
ನ್ಯಾಯವಾದಿಗಳಾದ ಚೇತನಾ ವೀರಶೆಟ್ಟಿ ಪಾಟೀಲರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ತಾಯಿಯವರು ಮರಾಠಿ ಭಾಷೆಯಲ್ಲಿ ರಚಿಸಿದ ಸಿದ್ಧರಾಮೇಶ್ವರ ಪುರಾಣದಲ್ಲಿ ಕಂಡುಬರುವುದೇನೆಂದರೆ ಕಾವ್ಯ ಸೌಂದರ್ಯ ಜಾನಪದ ಧಾಟಿಯ ಸೊಗಸು ಸಿದ್ಧರಾಮರ ಅನುಭಾವ ಅಷ್ಟಾವರಣ ಪಂಚಾಚಾರ ಮತ್ತು ಷಟಸ್ಥಲಗಳ ವರ್ಣನೆ ಪುರಾಣದಲ್ಲಿ ಕಂಡುಬರುತ್ತದೆ. ಕರ್ಮಯೋಗಿ ಸಿದ್ಧರಾಮರ ಶಿವಯೋಗದ ನಿಲುವನ್ನು ಜಗತ್ತಿಗೆ ತಿಳಿಸಿಕೊಟ್ಟವರು ಲಿಗಾಡೆ ತಾಯಿಯವರು ಎಂದರು.
ಶಕುಂತಲಾ ಬೆಲÁ್ದಳೆಯವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೇದಿಕೆಯ ಮೇಲೆ ಕಸ್ತೂರಿಬಾಯಿ ಬಿರಾದಾರ, ಸುವರ್ಣ ಚಿಮಕೋಡೆ, ಅವರು ಗೌರವ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಹಿಳಾ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಪಾಟೀಲ ಅಧ್ಯಕ್ಷತೆ ವಹಿಸಿದರು. ಪ್ರೇಮಾ ಮುಚಳಂಬೆ ಸ್ವಾಗತ ಕೊರಿದರೆ, ಲಕ್ಷ್ಮಿಬಾಯಿ ಬಿರಾದಾರ ನಿರೂಪಿಸಿದರು. ಮಹಾನಂದಾ ಸ್ವಾಮಿ ವಂದಿಸಿದರು.
ಪ್ರಮುಖರಾದ ಶರಣೆ ಶಕುಂತಲಾ ಮಲಕಪನೋರ, ಮಲ್ಲಿಕಾರ್ಜುನ ಹುಡಗೆ, ಉಮಾಕಾಂತ ಮೀಸೆ, ಶ್ರೀಕಾಂತ ಬಿರಾದಾರ, ಸಂಗ್ರಾಮ ಎಂಗಳೆ, ಸಂಗ್ರಾಮಪ್ಪ ಬಿರಾದಾರ ಶ್ರೀಕಾಂತ ಸ್ವಾಮಿ, ಸಂಜುಕುಮಾರ ಅತಿವಾಳೆ, ಶಿವಕುಮಾರ ಭಾಲ್ಕೆ, ಲಿಂಗಶೆಟ್ಟಿ ಬಿರಾದಾರ, ಯಾದಪ್ಪ ಮಡಿವಾಳ, ರಾಮನಗೌಡ, ಮತ್ತು ಪದಧಿಕಾರಿಗಳಾದ ಮಾಲಾಶ್ರೀ ಸವಿತಾ, ಅಕ್ಕಮಹಾದೇವಿ, ವಿಜಯಲಕ್ಷ್ಮಿ ಹುಗ್ಗೆಳ್ಳಿ, ರುಕ್ಮಿಣಿ, ಜಗದೇವಿ ಕಾಬಾ, ಮತ್ತು ಅನುಭವ ಮಂಟಪದ ಸಂಸೃತಿ ವಿದ್ಯಾಲಯದ ಮಕ್ಕಳು ಹಾಗೂ ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದ ವಿದ್ಯಾರ್ಥಿಗಳು ಹಾಗೂ ಶರಣ ಶರಣೆಯರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!