ಬೀದರ್

ರಾಷ್ಟ್ರೀಯ ಮೂಳೆ ಮತ್ತು ಕೀಲುಗಳ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಬೀದರ್ ಆ. 1 ರಾಷ್ಟ್ರೀಯ ಮೂಳೆ ಮತ್ತು ಕೀಲುಗಳ ದಿನಾಚರಣೆ ಅಂಗವಾಗಿ ಆ. 1ರಿಂದ 6ರ ವರೆಗೆ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ, ಸಾಮಾನ್ಯ ಜನರಿಗೆ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಳೆ ಚಿಕಿತ್ಸಕ ಸಂಘದ ಜಿಲ್ಲಾಧ್ಯಕ್ಷ ಡಾ. ರಾಜಶೇಖರ ಸೇಡಂಕರ್ ಹಾಗೂ ಕಾರ್ಯದರ್ಶಿ ಡಾ. ವೈಭವ ಭದಭದೆ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪ್ರಕಟಣೆ ನೀಡಿ ಭಾರತೀಯ ಮೂಳೆ ಚಿಕಿತ್ಸೆ ಸಂಘವು ಪ್ರತಿಯೊಬ್ಬರ ಜೀವವನ್ನು ಉಳಿಸಲು ತರಬೇತಿ ನೀಡುತ್ತಾರೆ ಅಲ್ಲದೇ ಉದ್ದೇಶದಂತೆ ನಡೆಯುತ್ತಾರೆ. ಈ ವರ್ಷ ಅಪಘಾತ ಮತ್ತು ಅಪಘಾತಗಳಿಂದ ಸಂಭವಿಸುವ ಸಾವುಗಳ ಮೇಲೆ ಕೇಂದ್ರಿಕರಿಸಿದೆ.

ಭಾರತವು ರಸ್ತೆ ಅಪಘಾತಗಳಲ್ಲಿ ವಿಶ್ವದ ಅಂಕಿ-ಅಂಶಗಳ 2018ರ ಪ್ರಕಾರ ಚೀನಾ, ಯುಎಸ್‍ಎ ನಂತರದ ಸ್ಥಾನದಲ್ಲಿ ಬರುತ್ತದೆ. ಅಂದಾಜು 4,49000 ರಸ್ತೆ ಅಪಘಾತಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 2019ರಲ್ಲಿ 1 ಲಕ್ಷ 51113 ಜನರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 4 ಲಕ್ಷ 51,361 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 18ರಿಂದ 45 ವಯಸ್ಸಿನವರು ಶೇ. 69 ರಷ್ಟಿದ್ದಾರೆ. 18ರಿಂದ 60 ವಯಸ್ಸಿನವರು ಶೇ. 84.3 ಜನ ಮರಣ ಹೊಂದಿದ್ದಾರೆ.

ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಪಡೆಯಲಾಗದೆ ಅನೇಕರು ಸಾವನಪ್ಪಿದ್ದಾರೆ. ಹೀಗಾಗಿ ಜಿಲ್ಲಾ ಮೂಳೆ ಹಾಗೂ ಕೀಲು ಚಿಕಿತ್ಸಕ ಸಂಘದಿಂದ ಆ. 1ರಿಂದ 6ರ ವರೆಗೆ ವಾಹನ ಚಾಲಕರು, ಸಂಚಾರಿ ಪೆÇಲೀಸರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರಿಗೆ ಮೂಳೆ ಮತ್ತು ಕೀಲು ವೈದ್ಯಕೀಯ ತರಬೇತಿ ನೀಡಲು ಸಜ್ಜಾಗಿದೆ. ಎಲುಬು ಕೀಲುಗಳ ಆರೋಗ್ಯ ಮತ್ತು ಗಟ್ಟಿತನ ಕುರಿತು ಶಿಕ್ಷಣ ನೀಡಲಾಗುವುದು.

ಬೀದರ್ ನಗರದ ಗುರುನಾನಕ ಸ್ಕೂಲ್, e್ಞÁನಸುಧಾ ಶಾಲೆ, ಶಾಹೀನ್ ಸ್ಕೂಲ್ ಹಾಗೂ ಮಿಲೇನಿಯಂ ಶಾಲೆಯಲ್ಲಿ ಮಕ್ಕಳಿಗೆ ಅರಿವು ಹಾಗೂ ತರಬೇತಿ ನೀಡಿ ಯಾರೇ ಅಪಘಾತಕ್ಕಿಡಾದರು ಈ ಹಿಂದೆ ಸಹಾಯ ಮಾಡಿವರನ್ನೆ ಪೆÇಲೀಸರು ವಿಚಾರಣೆ ನಡೆಸುತ್ತಿದ್ದರು ಆದರೆ ಆ ಕಾನೂನಿನಲ್ಲಿ ಬದಲಾವಣೆಯಾಗಿದೆ ಹೀಗಾಗಿ ಅಪಘಾತಕ್ಕಿಡಾದವರನ್ನು ಮೊಬೈಲ್‍ನಲ್ಲಿ -ÉÇೀಟೋ ತೆಗೆದುಕೊಳ್ಳದೆ ಕೂಡಲೇ ಅವರ ಸಹಾಯಕ್ಕೆ ಬನ್ನಿ ಎಂದು ಡಾ. ರಾಜಶೇಖರ ಸೇಡಂಕರ್ ಮನವಿ ಮಾಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!