ಬೀದರ್

ರಾಜ್ಯಮಟ್ಟದ ರೈಫಲ್ ಶೂಟಿಂಗ್‌ನಲ್ಲಿ ವೀರೇಶ ಮಲ್ಲಿಕಾರ್ಜುನ ಜೂಜಾ ಚಿನ್ನದ ಪದಕ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಅಡಿಯಲ್ಲಿ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಶನ್ ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ ೨೦೨೪ನೇ ಸಾಲಿನ ರಾಜ್ಯಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬೀದರ ಜಿಲ್ಲೆಯ ಹಳ್ಳಿಖೇಡ ಬಿ ಪಟ್ಟಣದ ವೀರೇಶ ಮಲ್ಲಿಕಾರ್ಜುನ ಜೂಜಾ ಚಿನ್ನದ ಪದಕ ವಿಜೇತರಾದ ಪ್ರಯುಕ್ತ ಇಂದು ಬೀದರನ ಸಂತೋಷ ಫ್ಯಾಮಿಲಿ ಧಾಬಾ ಸಭಾಂಗಣದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಈ ಕುರಿತು ಸುದ್ದಿ ಸಮಯದೊಂದಿಗೆ ಮಾತನಾಡಿದ ಚಿನ್ನದ ಪದಕ ವಿಜೇತ ವೀರೇಶ ಜೂಜಾ ಅವರು ಜುಲೈ ೭ರ ೨೦೨೪ ರಂದು ಬೆಂಗಳೂರಿನಲ್ಲಿ ಜರುಗಿದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಸತತ ಪ್ರಯತ್ನದಿಂದಾಗಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ಇದಕ್ಕೆ ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆಂಪುರ ಹಾಗೂ ರೈಫಲ್ ತರಬೇತುದಾರರಾದ ಟಿಸಿ ಪಲಂಗಪ್ಪ ಅವರ ತರಬೇತಿಯೇ ಮೂಲ ಕಾರಣವಾಗಿದೆ ಎಂದರು.

ತಾಯಿ ವಿಜಯಲಕ್ಷಿö್ಮÃ ಹಾಗೂ ತಂದೆ ಮಲ್ಲಿಕಾರ್ಜುನ ಅವರು ಸಾಕಷ್ಟು ಸಹಕಾರ ನೀಡಿದ್ದಾರೆ. ನಾನು ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಶಾಲೆಯ ಅಧ್ಯಕ್ಷರು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಮಕ್ಕಳನ್ನು ಕೊಂಡೊಯ್ಯುತ್ತಾರೆ. ಸೈನ್ಯದಲ್ಲಿ ಭರ್ತಿ, ರೈಫಲ್ ತರಬೇತಿ, ಅರೆಸೇನಾ ಪಡೆಗಳ ತರಬೇತಿ, ಗಡಿ ರಕ್ಷಣಾ ಪಡೆಯ ತರಬೇತಿ ನೀಡುತ್ತಾರೆ. ಟಿಸಿ ಫಲಂಗಪ್ಪ ಸರ್ ಅವರು ನನಗೆ ರೈಫಲ್ ತರಬೇತಿ ಅಚ್ಚುಕಟ್ಟಾಗಿ ನೀಡಿದ್ದಾರೆ. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ವೀರೇಶ ತಿಳಿಸಿದರು. ಅಲ್ಲದೇ ಮುಂದೆ ನಾನು ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಪ್ರಯತ್ನ ಮಾಡುತ್ತಿದ್ದೇನೆ. ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದೇ ನನ್ನ ಮೂಲ ಗುರಿಯಾಗಿದೆ ಎಂದು ವಿದ್ಯಾರ್ಥಿ ವೀರೇಶ ಹೆಮ್ಮೆಯಿಂದ ಹೇಳಿದ್ರು.
ವೀರೇಶ ಜೂಜಾ ಅವರ ತಂದೆ ಮಲ್ಲಿಕಾರ್ಜುನ ಜೂಜಾ ಮಾತನಾಡಿ ನನ್ನ ಮಗ ವೀರೇಶನಿಗೆ ಮೊದಲಿನಿಂದಲೂ ಕ್ರೀಡೆಯಲ್ಲಿ ಬಹಳ ಆಸಕ್ತಿ. ಹೀಗಾಗಿ ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಅಭ್ಯಾಸ ಮಾಡುವುದರ ಜೊತೆಗೆ ರೈಫಲ್ ತರಬೇತಿಯನ್ನು ಬಹಳ ಅಚ್ಚುಕಟ್ಟಾಗಿ ನಿಡಿದ್ದಾರೆ. ಆದ್ದರಿಂದಲೇ ನನ್ನ ಮಗ ರಾಜ್ಯಮಟ್ಟದ ರೈಫಲ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ಆದ್ದರಿಂದ ಗ್ಲೋಬಲ್ ಸೈನಿಕ್ ಅಕಾಡೆಮಿ ಅಧ್ಯಕ್ಷರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ರು.
ಇದೇ ವೇಳೆ ಪ್ರಮುಖರಾದ ನಿವೃತ್ತ ಪ್ರಾಚಾರ್ಯರಾದ ಎಸ್‌ವಿ ಜೂಜಾ, ಸೂರ್ಯಕಾಂತ ಜೂಜಾ, ಸೂರ್ಯಕಾಂತ ಖೇಳಗೆ, ಸಾಹಿತಿ ಕೀರ್ತಿಲತಾ ಹೊಸಳೆ, ದಶರಥ ಕೋಟೆ, ಬಸಪ್ಪ ಸಜ್ಜನಶೆಟ್ಟಿ, ಶೀಲಾ ಜೂಜಾ, ಲಲಿತಾ ಸ್ವಾಮಿ, ವಿಮಲಾ ಜೂಜಾ, ಸಂಗಮೆಶ ಮುರ್ಕಿ, ಪ್ರಶಾಂತ ದ್ಯಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿ ವೀರೇಶ ಮಲ್ಲಿಕಾರ್ಜುನ ಜೂಜಾಗೆ ಸನ್ಮಾನಿಸಿ ಗೌರವಿಸಲಾಯಿತು.

Ghantepatrike kannada daily news Paper

Leave a Reply

error: Content is protected !!