ಬೀದರ್

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕಾಮಶೆಟ್ಟಿ ಚಿಕಬಸೆ ಸಲಹೆ

ಬೀದರಃ-11, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಬೈಕ್ ಸವಾರರ ಸುರಕ್ಷತೆಯ ಕವಚವಾಗಿದೆ. ಹಾಗಾಗಿ ಪ್ರತಿಯೊಬ್ಬ ಬೈಕ್ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕು. ಮತ್ತು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ತನ್ನ ಸುತ್ತಮುತ್ತಲಿನ ಜನರಿಗೆ ಗೆಳಯರಿಗೆ ತಿಳಿಸಿಹೇಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ಅವರು ಸಲಹೆ ನೀಡಿದರು.
ಅವರು ದಿನಾಂಕ 13-8-2023 ರಂದು ಬೀದರ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಚಿಟ್ಟಾ ಕ್ರಾಸ್‍ವರೆಗೆ ಸೂರ್ಯನಮಸ್ಕಾರ ಸಂಘದಿಂದ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದರು. ‘ಹೆಲ್ಮೆಟ್ ಧಿರಿಸಿ ಪ್ರಾಣ ಉಳಿಸಿ’ ಘೊಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ಮುಖಾಂತರ ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಮುಂದುವರೆದು ಮಾತನಾಡಿ, ಒಂದು ಮೊಬೈಲ್‍ಗೂ ಸಹ ಸುರಕ್ಷತೆಯ ಕವಚ ಹಾಕುತ್ತೇವೆ. (ಸ್ಕ್ರೀನ್ ಗಾರ್ಡ್, ಹಾಗೂ ಬ್ಯಾಕ್ ಕವರ್) ಆದರೆ ನಾವು ಮಾತ್ರ ಹೆಲ್ಮೆಟ್ ಧರಿಸದೆ ಬೈಕ್ ನಡೆಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದರು.
ಮುಖ್ತ ಅತಿಥಿಗಳಾಗಿ ಆಗಮಿಸಿದ ಚಿಂತಾಕಿ ಪೋಲಿಸ್ ಠಾಣೆಯ ಮುಖ್ಯ ಪೇದೆ ರಾಜಕುಮಾರ ಬಿರಾದಾರ ಅವರು ಮಾತನಾಡಿ ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳು ಸಂಭವಿಸಿದಾಗ ಸುರಕ್ಷತೆ ನೀಡುತ್ತದೆ. ಯಾವುದೇ ಕಾರಣಕ್ಕೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಬಾರದು. ‘ನಮ್ಮ ಜೀವ ನಮ್ಮ ಕೈಯಲ್ಲಿ’ ಎನ್ನುವಂತೆ ನಾವು ಹೆಲ್ಮೆಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು ಮತ್ತು ಜೊತೆಗೆ ವಾಹನ ಚಾಲನಾ ಪರವಾನಿಗೆ ಪತ್ರ ಮತ್ತು ದ್ವಿಚಕ್ರವಾಹನದ ಎಲ್ಲ ಕಾಗದ ಪತ್ರಗಳು ಸರಿಯಾಗಿ ಇಟ್ಟುಕೊಳ್ಳುವ ಮೂಲಕ ರಸ್ತೆಯ ಸುರಕ್ಷತೆಯ ನಿಯಮಗಳ ಪಾಲನೆ ಮಾಡಬೇಕು ಎಂದರು.
ಕಾರ್ಯಕ್ರಮದ ನಿರೂಪಣೆ ಅನೀಲ ಸೋರಳ್ಳಿಕರ ಮಾಡಿದರೆ ಮೊದಲಿಗೆ ಸಂತೋಷ ಬೆಲ್ದಾಳೆ ಅವರು ಸ್ವಾಗತಿಸಿದರು. ಬಸವರಾಜ ದಾನಿ ಅವರು ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವೇಕ, ಸಂತೋಷ ಶೇರಿಕಾರ, ವಿಜಯಕುಮಾರ ರಾಥೋಡ, ನವನೀತ ಪಾಟೀಲ, ಪ್ರದೀಪ ಪಾಂಚಾಳ, ಸಂಜುಕುಮಾರ, ಶಿವರಾಜ, ಭದ್ರು ಸ್ವಾಮಿ, ಲೋಕೇಶ, ವಿನೀತ್ ಪಸರ್ಗೆ, ರಾಮಕೃಷ್ಣಾ, ನಾಗರಾಜ ರಾಗಾ, ಸಂಜೀವ, ರಾಜಶೆಖರ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!