ಬೀದರ್

ಬೀದರ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ : ವಿವಿಧ ಪದವಿಗಳನ್ನು ನೀಡಲು ಅನುಮತಿ

ಯುಜಿಸಿ ಮಾನ್ಯತೆ ಪಡೆದ ಪದವಿಗಳನ್ನು ನೀಡಲು ಬೀದರ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(Uಉಅ)ನವದೆಹಲಿಯಿಂದÀ ಅಧಿಕೃತ ಮಾನ್ಯತೆ ದೊರೆತಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (Uಉಅ) ತನ್ನ ಅಧಿನಿಯಮ 1956ರ ಪ್ರಕರಣ 2(ಎಫ್) ಅಡಿಯಲ್ಲಿ ಬೀದರ ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ನೀಡಿ 02-08-2023ರÀಂದು ಅಧಿಕೃತ ಆದೇಶ ನೀಡಿ ಪ್ರಕಟಣೆ ಹೊರಡಿಸಿದೆ. ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಬೀದರ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆದಿರುವ ವಿವಿಧ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆಯನ್ನು ಪಡೆದಂತಾಗಿದೆ. ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಬೀದರ ವಿಶ್ವವಿದ್ಯಾಲಯ ಸ್ಥಾಪನೆಯು ರಾಜ್ಯದ ಬೇರೆ  ಜಿಲ್ಲೆಗಳಲ್ಲಿಯ ವಿಶ್ವವಿದ್ಯಾಲಯಗಳಿರುವಂತೆ  ಕರ್ನಾಟಕದ ಕಿರೀಟ, ಗಡಿ ಜಿಲ್ಲೆ ಬೀದರಗೆ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂಬ ಬಹುದಿನಗಳ ಬೇಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ)ಯ ಜ್ಞಾನಕಾರಂಜಿ ಸ್ನಾತಕೋತ್ತರ ಕೇಂದ್ರದಲ್ಲಿ ಬೀದರ ವಿಶ್ವವಿದ್ಯಾಲಯವು ಕಾರ್ಯಾರಂಭ ಮಾಡಬೇಕೆಂಬ ಕೋರಿಕೆೆಯನ್ನು ಮನ್ನಿಸಿ ಕರ್ನಾಟಕ ಸರ್ಕಾರವು 10-10-2022ರಂದು ರಾಜ್ಯದ ನೂತನ ಏಳು ವಿಶ್ವವಿದ್ಯಾಲಯಗಳಲ್ಲಿ ಬೀದರ ವಿಶ್ವವಿದ್ಯಾಲಯದ ಸ್ಥಾಪನೆಯ ಘೋಷಣೆ ಮಾಡಿತ್ತು.
ಅದರಂತೆ ಬೀದರ ವಿಶ್ವವಿದ್ಯಾಲಯವು ದಿನಾಂಕ 28-03-2023ರಂದು ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಂಡು ಪ್ರಸ್ತುತ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊAಡಿವೆ. ಇಲ್ಲಿಯವರೆಗೆ 124 ಮಹಾವಿದ್ಯಾಲಯಗಳು ಬೀದರ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊAಡು ಕಾರ್ಯನಿರ್ವಹಿಸುತ್ತಿವೆ.

Ghantepatrike kannada daily news Paper

Leave a Reply

error: Content is protected !!