ಬೀದರ್

ಬೀದರ-ಯಶವಂತಪೂರ ವಾಯಾ ಹುಮನಾಬಾದ ಕಲಬುರಗಿ ರವಿವಾರ ದಿ. 29ರಂದು ಚಾಲನೆ

ನಮ್ಮ ಜನತೆಯ ಮಹಾದಾಸೆಯಾಗಿದ್ದ, ಬೀದರ-ಯಶವಂತಪೂರ ವಾಯಾ ಹುಮನಾಬಾದ ಕಲಬುರಗಿ ಹೊಸ ರೈಲು ಮಂಜೂರಾತಿಯಾಗಿರುವ ಹಿನ್ನಲೆಯಲ್ಲಿ ಈ ರೈಲಿಗೆ ಕೇಂದ್ರ ಸಚಿವ ಭಗವಂತ ಖೂಬಾರವರು ಅಧಿಕಾರಿಗಳೊಂದಿಗೆ ಅವರ ಬೀದರ ಗೃಹ ಕಚೇರಿಯಲ್ಲಿ ಸಭೆಯನ್ನು ತೆಗೆದುಕೊಂಡು ಮಾಹಿತಿಯನ್ನು ಪಡೆದುಕೊಂಡು, ಕಾರ್ಯಕ್ರಮದ ರೂಪುರೇಷಗಳ ಕುರಿತು ಚರ್ಚಿಸಿದರು ಹಾಗೂ ವಿವಿಧ ರೈಲ್ವೆ ಸಂಬಂಧಿತ ಕೆಲಸಗಳ ಮಾಹಿತಿಯನ್ನು ಪಡೆದುಕೊಂಡರು.

ಸದರಿ ಮಾರ್ಗದ ಮೂಲಕ ಹೊಸ ರೈಲು ಚಾಲನೆಯೂ ಬರುವ ರವಿವಾರ ದಿ. 29ರಂದು ನೇರವೆರಲಿದೆ, ಈ ಕಾರ್ಯಕ್ರಮವು ರವಿವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು ಸಾ. 04.30 ಗಂಟೆಗೆ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹೊಸ ರೈಲಿಗೆ ಹಸಿರು ನಿಶಾನೆ ತೊರಲಿದ್ದಾರೆ, ಜೊತೆಗೆ ಇದೇ ರೈಲಿನಲ್ಲಿ ಸಚಿವ ಭಗವಂತ ಖೂಬಾ ಬೀದರ ನಿಂದ ಹುಮನಾಬಾದವರೆಗೆ ಪ್ರಯಾಣಿಸಲಿದ್ದಾರೆ, ಹುಮನಾಬಾದ ರೈಲ್ವೆ ನಿಲ್ದಾಣದದಲ್ಲಿಯೂ ಹುಮನಾಬಾದನ ಜನತೆ, ಪಕ್ಷದ ಮುಖಂಡರು ಹೊಸ ರೈಲಿಗೆ ಸ್ವಾಗತಿಸಿಕೊಂಡು ಪೂಜೆಯನ್ನು ನೆರವೇರಿಸಲಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ದತೆಗಳು ಮಾಡಿಕೊಳ್ಳಲು ಸಚಿವ ಖೂಬಾರವರು ರೈಲ್ವೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಇದರ ಜೊತೆಗೆ ರೂ. 25 ಕೋಟಿ ಅನುದಾನದಲ್ಲಿ ಅಮೃತ ಭಾರತ ಯೋಜನೆಯಡಿ ಅಭಿವೃದ್ದಿಗೊಳ್ಳುತ್ತಿರುವ ಬೀದರ ರೈಲ್ವೆ ನಿಲ್ದಾಣದ ಕಾಮಗಾರಿಯ ಪ್ರಗತಿಯ ವರದಿ ಪಡೆದುಕೊಂಡು, ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟದ ಕಾಮಗಾರಿ ನಡೆಯಬೇಕು, ವಾರಕ್ಕೊಮ್ಮೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀದರ ಮತ್ತು ಜಹೀರಾಬಾದ ಲೋಕಸಭಾ ಕ್ಷೇತ್ರಗಳ ನಡುವೆ ಇರುವ ಮೇಟಾಲಕುಂಟಾ ಆರ್.ಯು.ಬಿ.ಯ ಕುರಿತು ಕೇಳಿದಾಗ, ಸದರಿ ಆರ್.ಯು.ಬಿ. ಯೋಜನೆಯ ವಿವರವಾದ ವರದಿಯನ್ನು ಸಿದ್ದಪಡಿಸಿ, ಪ್ರಧಾನವ್ಯವಸ್ಥಾಪಕರು, ದಕ್ಷೀಣ ಮಧ್ಯ ರೈಲ್ವೆಗೆ ಕಳುಹಿಸಿರುವ ಬಗ್ಗೆ ತಿಳಿಸಿದಾಗ, ಸಚಿವರು ಜಿ.ಎಮ್. ರವರಿಗೆ ಮಾತನಾಡಿ ಶಿಘ್ರದಲ್ಲಿ ಯೋಜನಾ ವರದಿಗೆ ಮಂಜೂರಾತಿ ನೀಡಬೆಕೆಂದು ದೂರವಾಣಿ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಮಧ್ಯೆ ರೈಲ್ವೆಯ ಎ.ಡಿ.ಆರ್.ಎಮ್. ಶ್ರೀ ಪ್ರದೀಪ ರಾಠೋಡ, ಸಿನಿಯರ್ ಡಿ.ಇ.ಎನ್. ಶ್ರೀ ಶ್ರೀನಿವಾಸ, ಬೀದರ ಎ.ಇ.ಎನ್ ಭಿಕ್ಷಾಪತಿ ಇನ್ನಿತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!