ಬೀದರ್

ಬೀದರ ಜಿಲ್ಲೆಯ ಪವಿತ್ರ ಮಣ್ಣು, ನವದೇಹಲಿಯ ಕರ್ತವ್ಯ ಪಥದ ಅಮೃತ ವಾಟಿಕಕ್ಕೆ – ಭಗವಂತ ಖೂಬಾ

ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಕನಸಿನ ಅಮೃತ ವಾಟಿಕಕ್ಕೆ, ಆಚಾರ್ಯರ, ಸಂತರ, ಶರಣರ, ಸೂಫಿ ನಾಡಿನ ಪವಿತ್ರ ಮಣ್ಣನ್ನು ನವದೇಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸುತ್ತಿರುವ ಅಮೃತ ವಾಟಿಕಕ್ಕೆ, ಜಿಲ್ಲೆಯ ಈ ಒಂದು ಪವಿತ್ರ ಮಣ್ಣು ಸೇರುವುದು ಬೀದರ ಜಿಲ್ಲೆಗೆ ಅಭಿಮಾನದ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.
ಅಮೃತ ಕಳಸ ಅಭಿಯಾನದ ಯಾತ್ರಾವು ದೇಶದಲ್ಲಿ, ದೇಶಾಭಿಮಾನ ಹಾಗೂ ರಾಷ್ಟ್ರೀಯತೆ ಕುರಿತು ಜಾಗೃತಿ ಮೂಡಿಸಿರುವುದು ಶ್ಘಾಘನೀಯ ಕಾರ್ಯವಾಗಿದೆ, ಪ್ರಧಾನಿಗಳು ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯ ಯುವಕರಿಗೆ ಕರೆಕೊಟ್ಟಿರುವುದು ನಮಗೇಲ್ಲಾ ಸಂತಸ ತಂದಿದೆ ಎಂದು ಸಚಿವರು ತಿಳಿಸಿದರು.
ನೇಹರು ಯುವ ಕೇಂದ್ರದ ವತಿಯಿಂದ ಬೀದರ ಜಿಲ್ಲೆಯಿಂದ ದೇಹಲಿಗೆ ತೆರಳುತ್ತಿರುವ ಅಮೃತ ಕಳಸದ ಯುವಕ/ಯುವತಿಯರ ತಂಡಕ್ಕೆ, ಗೃಹ ಕಚೆರಿಯಲ್ಲಿ ಪೂಜಿಸಿ, ಯವಕರ ತಂಡಕ್ಕೆ ಶುಭ ಹಾರೈಸಿ, ನವದೇಹಲಿಗೆ ಬಿಳ್ಕೋಟ್ಟರು.
ನವದೇಹಲಿಯಲ್ಲಿ ಮೂರು ದಿವಸದ ಕಾರ್ಯಕ್ರಮಕ್ಕೆ ವಿಶೇಷ ರೈಲಿನ ಮೂಲಕ ದೇಹಲಿಗೆ ತೆರಳಿ, ಜಿಲ್ಲೆಯ ಯುವಕರು ಆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಜಿಲ್ಲೆಯ ಯುವಕರಿಗೆ ಆದರ್ಶವಾಗಿದೆ ಎಂದರು. ಜಿಲ್ಲೆಯಿಂದ ಒಟ್ಟು 25 ಯುವಕ ಹಾಗೂ ಯುವತಿಯರು ತೆರಳುತ್ತಿದ್ದು, ದಿನಾಂಕ: 30, 31 ಹಾಗೂ ನವೆಂಬರ 1 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಅಭಿವೃದ್ದಿ ಸಮನ್ವಯ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಶಿವಯ್ಯ ಸ್ವಾಮಿ, ನೇಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಮಯೂರಕುಮಾರ ಗೊರ್ಮೆ, ಜಿಲ್ಲಾ ಪಂಚಾಯತ ಲೆಕ್ಕಸಹಾಯಕ ಪ್ರವಿಣ ಸ್ವಾಮಿ, ಎನ್.ಎಚ್.ಎಮ್. ಜಿಲ್ಲಾ ಸಂಯೋಜಕರಾದ ಶಿವಶಂಕರ ಬೆಮಳಗಿ, ಸೊಮನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!