ರಾಜ್ಯ

ಧ್ವನಿ ಸಾಂದ್ರಿಕೆ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭ

ಬೆಂಗಳೂರು: ಜಾನಪದ ವಿಶ್ವ ಪ್ರತಿಷ್ಠಾನ ಮತ್ತು ಅಭಿನವ ಬಳಗ ಹಾಗೂ ಬುಕ್‌ ಬ್ರಹ್ಮಪ್ರಣತಿ ದೊಡ್ಡಹೊಂಡ ವತಿಯಿಂದ ಜನಪದ ದೀಪಾರಾಧನೆ ಹಾಗೂ ಪ್ರಶಸ್ತಿ ಪ್ರದಾನಧ್ವನಿ ಸಾಂದ್ರಿಕೆ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭವು ಮಂಗಳವಾರದಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಭಾರತ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆ ಉದ್ಘಾಟಿಸಿದರು.

2023ನೇ ಸಾಲಿನ ‘ಕುವೆಂಪು ದೀಪ’ ಪ್ರಶಸ್ತಿಗೆ ಬಹುಮುಖಿ ಚಿಂತಕಲೇಖಕವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಹಾಗೂ ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಸಿ. ನಾಗಭೂಷಣ ಹಾಗೂ ‘ಕಲಾದೀಪ ಪ್ರಶಸ್ತಿ’ಗೆ ಕಲಾವಿದ ಎಚ್. ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಶ್ರೀನಿಧಿ ಪ್ರಕಾಶ್ ಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎನ್.ಆರ್. ನಾಯಕ ಮತ್ತು ಶಾಂತಿ ನಾಯಕ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ರೂ 6,000 ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ.

ಎನ್. ಆರ್. ನಾಯಕ್ ಅವರ ಬದುಕು ಮಹಾಕಾವ್ಯದ ಗೀತೆಗಳನ್ನು ಎಂ. ಡಿ. ಪಲ್ಲವಿ ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ಅಭಿನವ ಮತ್ತು ಜಾನಪದ ಪ್ರಕಾಶನ ಪ್ರಕಟಿಸಿರುವ ‘ಮಕ್ಕಳೇ ದೇವರು’ (ಎನ್. ಆರ್. ನಾಯಕರ ಆಯ್ದ ಮಕ್ಕಳ ಕವಿತೆಗಳು) ಸಂ: ಆನಂದ ಪಾಟೀಲ. ಎನ್. ಆರ್. ನಾಯಕರ ಕಾವ್ಯದ ಛಂದೋವಿನ್ಯಾಸ ಒಂದ ನೋಟ: ಪ್ರೊ.ಆರ್. ಎಸ್. ನಾಯಕಮುಖ್ಯಸ್ಥರುಕನ್ನಡ ವಿಭಾಗಅಂಜುಮಾನ್ ಕಾಲೇಜು ಭಟ್ಕಳಉ. ಕ. ಕೃತಿಗಳನ್ನು ಗಾಯಕಿ ಎಂ. ಡಿ. ಪಲ್ಲವಿ ಸಂಗೀತ ಸಂಯೋಜಿಸಿರುವ ಕಾದಲರು‘ ನಾಯಕರ ಬದುಕು ಮಹಾಕಾವ್ಯದ ಗೀತೆಗಳು) ಧ್ವನಿಸಾಂದ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆಅಭಿನವ ಪ್ರಕಾಶನದ ನ. ರವಿಕುಮಾರ್‌ಎಚ್. ಎನ್. ಸುರೇಶ್ ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದರು.

Ghantepatrike kannada daily news Paper

Leave a Reply

error: Content is protected !!