ಬೀದರ್

ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ : ಶಾಸಕರಾದ  ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ  ಗ್ರಾಮದಲ್ಲಿ ತುರ್ತಾಗಿ ಅವಶ್ಯಕತೆ  ಇರುವ ಕಾಮಗಾರಿಗಳ ಮಾಹಿತಿ ನೀಡಬೇಕು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆ ಮಳೆಗಾಲ ಇರುವ ಕಾರಣ ಸರ್ಕಾರಿ  ಶಾಲೆ, ಆಸ್ಪತ್ರೆಗಳ  ಕಟ್ಟಡ ಸೋರಿಕೆ ಸಮಸ್ಯೆಗಳನ್ನು ಶೀಘ್ರದಲ್ಲಿ ರೀಪೇರಿ ಪೂರ್ಣಗೊಳಿಸಬೇಕು ನೀರಲಕ್ಷö್ಯ ವಹಿಸಿದರೆ ಸಹಿಸಲ್ಲ ಸಾರ್ವಜನಿಕರ   ಸಮಸ್ಯೆಗಳು ಬಗೆಹರಿಸುವುದು ನಮ್ಮ ಮೊದಲ ಆಧ್ಯತೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ನಗರದ  ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ  ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಕೆಆರ್‌ಡಿಬಿ ಸಲಹಾ ಸಮಿತಿ  ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಹೊಸ ಕಟ್ಟಡದ ವ್ಯವಸ್ಥೆ ಮತ್ತು ಸ್ಮಾರ್ಟ ಕ್ಲಾಸ್ ಮಾಡುವ ಉದ್ದೇಶದಿಂದ ಹೆಚ್ಚಿನ ಒತ್ತು ನೀಡಲಾಗುವುದು.  ರೈತರ ಸಹಾಯಕ್ಕಾಗಿ ಇರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಉತ್ತಮವಾಗಿರಬೇಕು ರೈತರಿಗೆ ಕಟ್ಟಡ ಸೋರಿಕೆ  ಇದ್ದರೆ ಮಳೆಗಾಲದಲ್ಲಿ ಬೀಜ ವಿತರಣೆ ಮತ್ತು ಸಲಕರಣೆ ವಿತರಣೆಯಲ್ಲಿ ತೊಂದರೆಯಾಗುತ್ತದೆ ರೈತರಿಗೆ ಯಾವುದೆ ತೊಂದರೆಯಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶೌಚಾಲಯ ವ್ಯವಸ್ಥೆ ಮತ್ತು ಜನರ ಚಿಕಿತ್ಸೆಗಾಗಿ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಕೆಕೆಆರ್‌ಡಿಬಿ ಅನುದಾಲದಲ್ಲಿ ಅವಶ್ಯಕತೆ ಇರುವ ಶೌಲಭ್ಯಗಳು ತುರ್ತಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಯಾವುದೆ ಸೌಕರ್ಯಗಳ ಅವಶ್ಯಕತೆ ಇದ್ದಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಶಿಕ್ಷಣಾಧಿಕಾರಿ, ವೈಧ್ಯರು, ಪಶು ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು  ಶಾಸಕರಿಗೆ ಮನವಿ ಸಲ್ಲಿಸಿದರು.
ಬಳಿಕ ಶಾಸಕರು ಮಾತನಾಡಿ ಎಲ್ಲಾ ಮನವಿಯನ್ನು ಪರಿಶೀಲಿಸಿ  ಕಾಮಗಾರಿ ಪಟ್ಟಿ  ಬೀದರ್ ಹಾಗೂ ಚಿಟ್ಟಗುಪ್ಪಾ ತಾಪಂ ಅಧಿಕಾರಿಗಳ ಜತೆ ಚರ್ಚಿಸಿ ಪಟ್ಟಿ ಸಿದ್ದಪಡಿಸಲಾಗುವುದು ಎಂದರು. ಎರಡಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಯಾವುದೇ ಹಾನಿ ಸಂಭವಿಸದAತೆ ಎಲ್ಲರು ಎಚ್ಚರ ವಹಿಸಿ ಜನರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಈ  ಸಂದರ್ಭದಲ್ಲಿ ಬೀದರ್‌ತಾಪಂ ಇಓ ಕಿರಣಕುಮಾರ ಪಾಟೀಲ್, ಚಿಟ್ಟಗುಪ್ಪಾ ಇಓ ಅಕ್ರಮಪಾಶಾ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!