ಬೀದರ್

ಜಂಟಿ ಕಾರ್ಯಾಚರಣೆ. ಶ್ರೀಗಂಧ ಕಳ್ಳ ಸಾಗಾಣಿಕೆ ಆರೋಪಿ ವಶ

ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ, ಇತ್ತೀಚೆಗೆ ಬೀದರ ಜಿಲ್ಲೆಯಲ್ಲಿ ಶ್ರೀಗಂಧ ಕಳ್ಳತನದ ಪ್ರಕರಣ ದಾಖಲಾಗಿದ್ದರಿಂದ ಬೀದರ ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಹಯೊಗದೊಂದಿಗೆ ಹುಮನಾಬಾದ ವಲಯ ಅರಣ್ಯಾಧಿಕಾರಿ ಶ್ರೀ, ಶಿವಕುಮಾರ, ರವರ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಮತ್ತು ಬೀದರ ಜಿಲ್ಲಾ ಪೊಲೀಸ್ ನ ಶ್ರೀ, ಉಪೇಂದ್ರಕುಮಾರ, ಪಿ.ಎಸ್.ಐ, ಶ್ರೀ, ಸಂತೋಷ ತಾವರಖೇಡ್, ಪಿ.ಎಸ್.ಐ ರವರನ್ನೊಳಗೊಂಡ ತಂಡವು ರಚಿಸಿದ್ದು, ದಿನಾಂಕ: 20/07/2023 ರಂದು ಹುಮನಾಬಾದ ಕನಕಟ್ಟಾ ರಸ್ತೆಯ ಎಡಭಾಗದ ದ್ರಾಕ್ಷಿ ತೋಟದ ಪಕ್ಕದ ಜಮೀನಲ್ಲಿ ಸುಮಾರು ಜನರು ಶ್ರೀಗಂಧದ ಗಿಡಗಳನ್ನು ಕಡೆಯುತ್ತಿರುವ ಖಚಿತ ಮಾಹಿತಿಯಂತೆ, ಎರಡೂ ತಂಡದವರು ಜಂಟಿಯಾಗಿ ಕಾರ್ಯಾಚರಣೆ ಕೈಕೊಂಡು ಒಟ್ಟು 8 ಜನ ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ 9 ಶ್ರೀಗಂಧದ ತುಂಡುಗಳು, 2 ದ್ವೀಚಕ್ರ ವಾಹನ, 9 ಮೊಬೈಲ್ ಫೋನ್ಗಳು ಹಾಗೂ ಗಿಡ ಕಡಿಯಲು ಬಳಸಿದ 2 ಕೊಡ್ಲಿಗಳು ಹೀಗೆ ಒಟ್ಟು ಮೌಲ್ಯ 4,52,000=00 ರೂಪಾಯಿಯ ಮಾಲನ್ನು ವಶಕ್ಕೆ ಪಡೆದು ಹುಮನಾಬಾದ ಅರಣ್ಯ ಕಛೇರಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಶ್ರೀಗಂಧ ಕಳ್ಳರನ್ನು ಬಂಧಿಸಿದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಹರ್ಷವ್ಯಕ್ತ ಪಡಿಸಿ ಶ್ರೀಮತಿ, ವಾನತಿ, ಐ.ಎಫ್.ಎಸ್, ಉಪ -ಅರಣ್ಯ ಸಂರಕ್ಷಾಣಾಧಿಕಾರಿಗಳು ಬೀದರ ರವರು ಪ್ರಶಂಸನೆ ಪತ್ರದೊಂದಿಗೆ ಬಹುಮಾನವನ್ನು ಘೋಷಿಸಲಾಗಿದೆ.ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.

Ghantepatrike kannada daily news Paper

Leave a Reply

error: Content is protected !!