ಬೀದರ್

ಕರ್ನಾಟಕ ಸಾಹಿತ್ಯ ಸಂಘದಲ್ಲಿ ಗಾಯನ, ನೃತ್ಯ ಉತ್ಸವ

ಬೀದರ್: ಜಾನಪದ ಕಲೆ, ಹಾಡು, ನೃತ್ಯ ಮುಂತಾದವುಗಳ ಸಂರಕ್ಷಣೆಗೆ ಸರಕಾರದ ಜೊತೆಗೆ ಸಮಾಜವೂ ಶ್ರಮಿಸಬೇಕು. ಕಲಾವಿದರಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸುವ ಸಂಸ್ಥೆಗಳಿಗೆ ಬೆಂಬಲ ನೀಡಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ  ಸಾಹಿತ್ಯ ಸಂಘವು ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ಹಾಗೂ ಕೇಂದ್ರದ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಜಾನಪದ ಹಾಡುಗಳ ಉತ್ಸವದಲ್ಲಿ ಅವರು ಮಾತನಾಡಿದರು.
ಜಾನಪದ ಕಲೆಗಳನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ಜೋಗುಳ, ಕುಟ್ಟುವ, ಬೀಸುವ ಪದಗಳ ಮೂಲಕ ಮಹಿಳೆಯರು ಜಾನಪದ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಈಗ ಅಪರೂಪವಾಗಿರುವ ಈ ಕಲೆಗಳನ್ನು, ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಕರ್ನಾಟಕದ ಸಾಹಿತ್ಯ ಸಂಘದ ಮೂಲಕ ಡಾ. ಜಗನ್ನಾಥ ಹೆಬ್ಬಾಳೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಡಾ. ಸಿದ್ದಾರೆಡ್ಡಿ ಫೌಂಡೇಶನ್ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್ ಮಾತನಾಡಿ, ನೆಲಮೂಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ಡಾ. ಜಗನ್ನಾಥ ಹೆಬ್ಬಾಳೆ, ಡಾ. ರಾಜಕುಮಾರ ಹೆಬ್ಬಾಳೆ ಈ ದಿಸೆಯಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಅದ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಅತ್ಯಂತ ಕಾಳಜಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಅಖಿಲ ಭಾರತ ಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ರಾಜ್ಯಗಳ ಕಲಾವಿದರನ್ನು ಆಹ್ವಾನಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಗತ್ಯ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಲಾವಿದರಿಗೆ ವೇದಿಕೆ ಒದಗಿಸಿ, ಪ್ರೋತ್ಸಾಹಿಸಿದಾಗಲೇ ಕಲೆ ಉಳಿಯಬಲ್ಲದು. ಸಾಹಿತ್ಯ ಸಂಘವು ವಿವಿಧ ಸಂಸ್ಥೆ, ಸರಕಾರದ ಇಲಾಖೆಗಳ ಸಹಕಾರದಿಂದ ಈ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ದಿಶಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃಧ್ಧಿ ಜನಜಾಗೃತಿ ವೇದಿಕೆ  ಅದ್ಯಕ್ಷ ವಿರುಪಾಕ್ಷ ಗಾದಗಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುನೀಲ ಬಚ್ಚನ್, ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್ ಅಧ್ಯಕ್ಷ ಶಂಕರರಾವ್ ಹೊನ್ನಾ, ಪ್ರೊ. ಎಸ್.ಬಿ. ಬಿರಾದಾರ್, ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ನಿರ್ದೇಶಕ ಕಲ್ಯಾಣರಾವ್ ಚಳಕಾಪುರೆ ಮಾತನಾಡಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ನಾಗಪುರ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು.

ಸಾಂಸ್ಕೃತಿಕ ವೈಭವ
ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರು ನಡೆಸಿಕೊಟ್ಟ ಜಾನಪದ ನೃತ್ಯ ಪ್ರದರ್ಶನ ಎಲ್ಲರ ಮನಸ್ಸು ಗೆದ್ದುಕೊಂಡಿತು. ಮದ್ಯಪ್ರದೇಶದ ಸಂಜಯ ಮಹಾಜನ್ ಅವರ ನೇತೃತ್ವದಲ್ಲಿ ಗಣಗೌರ ಲೋಕನೃತ್ಯ ನಡೆಯಿತು. ಶಿವ ಮತ್ತು ಪಾರ್ವತಿಯ ಆರಾಧನೆಯ ಈ ಗೀತನೃತ್ಯವು ಜನಮನ ರಂಜಿಸಿತು. ಇದಕ್ಕೂ ಮುನ್ನ ಸಂಜಯ ಮಹಾಜನ್ ಅವರು  ತುಳಸಿದಾಸ ರಚಿತ  ಶ್ರೀರಾಮ ಸ್ತುತಿ ಗೀತ ನೃತ್ಯ ನಡೆಸಿಕೊಟ್ಟರು.
ಛತ್ತಿಸಘಡ ಕಲಾವಿದರು ನಡೆಸಿಕೊಟ್ಟ ಗೌರಮಾಡಿಯಾ ಗೀತ ನೃತ್ಯವು ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದಿತ್ತು. ಆಂಧ್ರಪ್ರದೇಶದ ಥಪೇಟಗುಲ್ಲು ನೃತ್ಯವು ಹೊಸ ಅನುಭವ ನೀಡಿತು. ಕರ್ನಾಟಕದ ಡೊಳ್ಳು ಕುಣಿತವನ್ನು ಹೋಲುವ  ಈ ನೃತ್ಯವನ್ನು ಯುವ ಕಲಾವಿದರು ನಡೆಸಿಕೊಟ್ಟರು. ಕಾಲು, ತೊಡೆಗೆ ಗೆಜ್ಜೆ ಕಟ್ಟಿಕೊಂಡು, ಎದೆ ಮೇಲೆ ಕಟ್ಟಿಕೊಂಡಿದ್ದ ತಮಟೆ ಬಾರಿಸುತ್ತ, ಹಾಡಿಗೆ ಅನುಗುಣವಾಗಿ ಹೆಜ್ಜೆ ಹಾಕಿ ರಂಜಿಸಿದರು.
ಮಹಾರಾಷ್ಟçದ ತಂಡದಿAದ ಲಾವಣಿ,  ಬಸವಕಲ್ಯಾಣ ತಾಲೂಕಿನ ಕಲಖೋರಾ ತಂಡದಿAದ ಲಂಬಾಣಿ ನೃತ್ಯ,  ಜಾನಪದ ವಿವಿ ಪಿ.ಜಿ. ಸೆಂಟರ್ ತಂಡದಿAದ ಜೋಗತಿ ಯಲ್ಲಮ್ಮ ನೃತ್ಯ, ವಿಶಾಲ ಡಾನ್ಸ್ ಅಕಾಡೆಮಿಯಿಂದ ಸುಗ್ಗಿ ಕುಣಿತ, ಉಷಾ ಪ್ರಭಾಕರ ತಂಡದಿAದ ಜಾನಪದ ನೃತ್ಯ, ಶೇಷಾರಾವ್ ಬೆಳಕುಣಿಕರ್ ತಂಡದಿAದ ಬುದ್ಧ ಭಜನೆ,  ಮರಕಲ್‌ನ ನಾಗಮ್ಮ ಮತ್ತು ಸಂಗಡಿಗರಿAದ ಸೋಬಾನೆ ಪದಗಳ ಗಾಯನ, ಶಿವಕುಮಾರ ಅಣದೂರವಾಡಿ ತಂಡದಿAದ ಸುಗ್ಗಿ ಕುಣಿತ ನಡೆಯಿತು. ಸ್ಥಳೀಯ ಕಲಾವಿದರು, ಕಲಾ ತಂಡಗಳು ಗಾಯನ, ನೃತ್ಯ ಪ್ರದರ್ಶನ ನೀಡಿದವು. ಎಸ್.ಬಿ. ಕುಚಬಾಳ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!