ರೈತರಿಗೆ ಸಿಗುತ್ತಿರುವ ಪ್ರೋತ್ಸಾಹ ಧನ ನಿಲ್ಲಿಸಬಾರದೆಂದು :ಸಚಿವ ಭಗವಂತ ಖೂಬಾ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯದ ರೈತರಿಗೆ ನಮ್ಮ ಬಿಜೆಪಿ ಸರ್ಕಾರದಿಂದ ಕೇಂದ್ರದ ಪ್ರೋತ್ಸಾಹಧನದ ಜೊತೆಗೆ ರಾಜ್ಯದಿಂದ ನೀಡುತ್ತಿದ್ದ 4 ಸಾವಿರ ರೂಪಾಯಿಗಳ ಹೆಚ್ಚುವರಿ ಪ್ರೋತ್ಸಾಹಧನವನ್ನು ನಿಲ್ಲಿಸಿರುವ ಕಾಂಗ್ರೇಸ್ ಸರ್ಕಾರದ ನಿರ್ಣಯ ರೈತ ವಿರೋಧಿü ಹಾಗು ಖಂಡನಿಯವಾಗಿದೆ. ಯಾವೂದೇ ಕಾರಣಕ್ಕೂ ರೈತರಿಗೆ ಸಿಗುತ್ತಿರುವ ಪ್ರೋತ್ಸಾಹ ಧನ ನಿಲ್ಲಿಸಬಾರದೆಂದು ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಕೇಂದ್ರ ಸಚಿವ ಭಗವಂತ ಖೂಬಾರವರು ಒತ್ತಾಯಿಸಿದ್ದಾರೆ.
ನಿನ್ನೆ ಅಧಿವೇಶನದಲ್ಲಿ ಪಿ.ಎಮ್.ಕಿಸಾನ್ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಮುಂದುವರೆಸುತ್ತಿರಾ ಅಥವಾ ನಿಲ್ಲಿಸುತ್ತಿರಾ ಎಂದು ನಮ್ಮ ಶಾಸಕರು ಕೇಳಿರುವ ಪ್ರಶ್ನೆಗೆ ಉತ್ತಿರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡವರಿಸಿ, ಸಮರ್ಪಕವಾದ ಉತ್ತರ ನೀಡಿಲಿಲ್ಲಾ, ಅವರ ಮಾತಿನಲ್ಲಿ ನಿಲ್ಲಿಸಲಿದ್ದೇವೆ ಎನ್ನುವ ಉತ್ತರ ಸ್ಪಷ್ಟವಾಗಿ ಕಂಡು ಬಂದಿದೆ, ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನ್ಯಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತಿರುವ 6000 ರೂಪಾಯಿ ಜೊತೆಗೆ ನಮ್ಮ ಬಿಜೆಪಿ ಸರ್ಕಾರ ನೀಡುತ್ತಿದ್ದ 4000 ರೂಪಾಯಿಗಳಿಂದ ಪ್ರತಿ ರೈತನಿಗೆ 10,000 ಪ್ರೊತ್ಸಾಹಧನ ಸಿಗುತ್ತಿತ್ತು ಇದರಿಂದ ರಾಜ್ಯದ ರೈತರಿಗೆ ತುಂಬಾ ಅನುಕೂಲವಾಗುತ್ತಿತ್ತು, ಪ್ರತಿ ವರ್ಷ ರಾಜ್ಯದ ಒಟ್ಟು 57 ಲಕ್ಷ ರೈತರಿಗೆ 5900 ಕೋಟಿ ರೂಪಾಯಿ ಪ್ರೋತ್ಸಾಹಧನ ರಾಜ್ಯ ಸರ್ಕಾರದಿಂದ ಬಂದಿದೆ, ಇದರಲ್ಲಿ ಬೀದರ ಲೋಕಸಭಾ ಕ್ಷೇತ್ರದ 2,62,392 ರೈತರಿಗೆ ಒಟ್ಟು 220.60 ಕೋಟಿ ಪ್ರೋತ್ಸಾಹ ಧನ ರೈತರ ಖಾತೆಗೆ ನೇರವಾಗಿ ಜಮೆಯಾಗಿರುತ್ತದೆ.
ರಾಜ್ಯ ಕಾಂಗ್ರೇಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿರುವ ಸಚಿವರು, ರೈತರ ಪ್ರೋತ್ಸಾಹಧನವನ್ನು ನಿಲ್ಲಿಸುವ ಕ್ರಮವನ್ನು ರಾಜ್ಯದ ಎಲ್ಲಾ ರೈತ ಮುಖಂಡರು ವಿರೋಧಿಸಬೇಕು, ಯಾವೂದೆ ಕಾರಣಕ್ಕೂ ರಾಜ್ಯ ಸರ್ಕಾರದ ಈ ಕ್ರಮವನ್ನು ಒಪ್ಪಿಕೊಳ್ಳಬಾರದು ಹಾಗೂ ಯಥಾ ಸ್ಥಿತಿ ಮುಂದುವರೆಸಿ ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಅಗತ್ಯ ಎಚ್ಚರಿಕೆಯನ್ನ ರಾಜ್ಯ ಸರ್ಕಾರಕ್ಕೆ ನೀಡಬೇಕೆಂದು ಕೇಂದ್ರ ಸಚಿವರು ರಾಜ್ಯದ ಎಲ್ಲಾ ರೈತ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಜಿಲ್ಲೆಯ ಇಬ್ಬರು ಸಚಿವರು ಏನು ಮಾಡುತ್ತಿದ್ದಾರೆ, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರೈತರ ಪರವಾಗಿ ನಿಲ್ಲಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ನಿಮಗೆ ಜಿಲ್ಲೆಗೆ ಬರಲು ಬಿಡುವುದಿಲ್ಲ
ನೆನಪಿಡಿ ಎಂದು ಸಚಿವರು ಎಚ್ಚರಿಸಿದ್ದಾರೆ. ಹಾಗೆ ನೀವು ಸುಮ್ಮನಿದ್ದರೆ ಜಿಲ್ಲೆಯ ರೈತರಿಗೆ ಮಾಡಿದ ಘೋರ ಅನ್ಯಾಯವಾಗುತ್ತದೆ.
ರೈತರಿಗೆ ಸಿಗುತ್ತಿದ್ದ ಪ್ರೋತ್ಸಾಹ ಧನ ನೀಡುವುದು ನಿಲ್ಲಿಸಿದರೆ, ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.