ರಾಜ್ಯದಲ್ಲಿ ಇರುವ 5491 ಪ್ಯಾಕ್ಸಗಳನ್ನು ಗಣಕೀಕರಣ ಮಾಡಲು ಉದ್ದೇಶಿಸಲಾಗಿದೆ : ಬಸವರಾಜ ಕಾಮಶೆಟ್ಟಿ
ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ, ಬೀದರ ನಬಾರ್ಡ ಬೆಂಗಳೂರು ಮತ್ತು ಸಹಕಾರ ಇಲಾಖೆ, ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಸವಕಲ್ಯಾಣ ತಾಲೂಕಿನಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಎರಡು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಶಿಬಿರವನ್ನು ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ, ಬೀದರನಲ್ಲಿ ನಡೆಸಲಾಯಿತು.
ಸಮಾರಂಭದ ಉದ್ಘಾಟನೆ £ರವೇರಿಸಿ ಮಾತನಾಡಿದ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಸವರಾಜ ವಿಶ್ವನಾಥ ಕಾಮಶೆಟ್ಟಿಯವರು ಪ್ಯಾಕ್ಸಗಳ ಗಣಕೀಕರಣವು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು ರಾಜ್ಯದಲ್ಲಿ ಇರುವ 5491 ಪ್ಯಾಕ್ಸಗಳನ್ನು ಗಣಕೀಕರಣ ಮಾಡಲು ಉದ್ದೇಶಿಸಲಾಗಿದೆ. ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಸಂಘಘಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯ ವೇದಿಕೆಗೆ ತರಲು ಮತ್ತು ಅವರ ದಿನನಿತ್ಯದ ವ್ಯವಹಾರದ ಸಾಮಾನ್ಯ ಲೆಕ್ಕಪತ್ರಗಳ ಏಕರೂಪದ ವ್ಯವಸ್ಥೆಯನ್ನು ಹೊಂದಲು ಇದು ಸಹಕಾರಿಯಾಗಲಿದೆ. ಸಂಘಗಳ ದಕ್ಷತೆಯನ್ನು ಹೆಚ್ಚಿಸುವುದು ಅದರ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವುದು ಮತ್ತು ಸದಸ್ಯರಿಗೆ ಎಲ್ಲಾ ರೀತಿಯ ಸಾಮಾನ್ಯ ಸೇವೆಗಳು ಬಹು ಚಟುವಟಿಕೆಗಳನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ. ಸೆಪ್ಟೆಂಬರ ಕೊನೆಯ ಒಳಗೆ ಬೀದರ ಜಿಲ್ಲೆಯ ಎಲ್ಲಾ ಪ್ಯಾಕ್ಸಗಳನ್ನು ಗಣಕೀಕರಣಗೊಳಿಸಿÁನ್ಲೈನ್ ವ್ಯವಹಾರಕ್ಕೆ ತೆರೆಯಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ಯಾಕ್ಸಗಳ ಮುಖ್ಯಕಾರ್ಯನಿರ್ವಾಹಕರು ಮುತುವರ್ಜಿ ವಹಿಸಿ ದಾಖಲೆ ನಿರ್ವಹಣೆ ಮಾಡಬೇಕು. ಜನರಿಗೆ ಅನುಕೂಲವಾಗುವ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕು. ಸರಿಯಾದ ಮಾಹಿತಿಗಳನ್ನು ಅಪ್ ಲೋಡ ಮಾಡುವುದರ ಮೂಲಕ ಜನರಿಗೆ ಮುಂದೆ ನೇರ ಹಣ ವರ್ಗಾವಣೆ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಬೇಕು ಎಂದು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾದಿಕಾರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಮಂಜುಳಾ ಆರ್‍ರವರು ಮಾತನಾಡಿ ಸಹಕಾರ ಸಂಘಗಳು ಇರುವುದರಿಂದ ಗ್ರಾಮೀಣ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯಗಳು ಮತ್ತು ಕೃಷಿ ಆಧಾರಿತ ಸೇವೆಗಳು ದೊರಕುತ್ತಿವೆ. ಲಿಂತಹ ಉತ್ತಮ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸುವಲ್ಲಿ ಮತ್ತು ಜನರಿಗೆ ವಿರ್ಶವಾಸಾರ್ಹ ಸೇವೆ ನೀಡುವಲ್ಲಿ ಗಣಕೀಕರಣ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಶಯ ಇಟ್ಟುಕೊಳ್ಳದೇ ಸಂಸ್ಥೆಯನ್ನು ಬೆಳೆಸುವ ಚಿಂತನೆ ಮಾಡಬೇಕು. ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ತರಬೇತಿ ಪಡೆದುಕೊಳ್ಳಬೇಕಾಗುತ್ತದೆ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಮುಂದೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾರ್ದ ತರಬೇತಿ ಕೇಂದ್ರ, ನಿರ್ದೇಶಕರಾದ ಶ್ರೀ ಸುಬ್ರಮಣ್ಯ ಪ್ರಭು, ಸ್ವಾಗತಿದರು. ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ ಉಪನ್ಯಾಸಕರಾದ ಶ್ರೀ ಮಂಜುನಾಥ ಭಾಗವತ, ಎಸ್ ಜಿ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂಜು ಸ್ವಾಮಿಯವರು ಉಪನ್ಯಾಸ ನೀಡಿದರು. ಅನಿಲ್ ಪರೇಶ್ಯಾನೆ ಮತ್ತು ಮಹಾಲಿಂಗ ಕಟಗೀ ಕಾರ್ಯಕ್ರಮ ನಿರ್ವಹಿಸಿದರು.