2022ನೇ ಸಾಲಿನ ‘ಸರಳಾ ರಂಗನಾಥರಾವ್ ಪ್ರಶಸ್ತಿ’ಗಾಗಿ ಕೃತಿಗಳ ಆಹ್ವಾನ
ಬೆಂಗಳೂರು: ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನವು ‘2022ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿ‘ಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.
ಕೃತಿಗಳು ಆತ್ಮಚರಿತ್ರೆ/ ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು 2022ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ ಸೀಮಿತವಾದ ಪ್ರಶಸ್ತಿಯಾಗಿದ್ದು, ಆಸಕ್ತ ಲೇಖಕಿಯರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಸೆಪ್ಟೆಂಬರ್ 30ರೊಳಗೆ, ಜಿ.ಎನ್.ರಂಗನಾಥ ರಾವ್, ಕಾರ್ಯಾಧ್ಯಕ್ಷರು, ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠನ, ನಂ.276, ‘ಸ್ನೇಹ‘, 3ನೇ ಮೈನ್ ರಸ್ತೆ, 8ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಈ ವಿಳಾಸಕ್ಕೆ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು ರೂ 10,000 ನಗದು ಮತ್ತು ಫಲ ತಾಬೂಲ, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ಗೌರವಾಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಪ್ರಧಾನ ಕಾರ್ಯದಶಿ ತೀರ್ಥ ಜಿ.ಆರ್ ಆರ್ ತಿಳಿಸಿದ್ದಾರೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7372473151