ಹಿಂದುಳಿದ ಸಮುದಾಯದ ಮಹಿಳೆಯರಿಗೆ ಉಚಿತ ಟೇಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ
ಬೀದರ: ಚಿಟಗುಪ್ಪಾ ತಾಲೂಕಿನ ಮನ್ನಾಎಖೆಳ್ಳಿ ಗ್ರಾಮದ ಜ್ಯೋತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಆಗಸ್ಟ್ 4 ರಂದು ಯಾದವ ಕಲ್ಬರಲ್ ರೂರಲ್ ಮತ್ತು ಅರಬನ್ ಡೆವಲಪಮೆಂಟ್ ಎಜುಕೇಷನ್ ಸೊಸೈಟಿ, ಇವರ ಆಶ್ರಯದಲ್ಲಿ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ 2023-24ನೇ ಸಾಲಿಗೆ ಹಿಂದುಳಿದ ಸಮುದಾಯದ ಮಹಿಳೆಯರಿಗೆ ಉಚಿತವಾಗಿ ಟೇಲರಿಂಗ್ ಮತ್ತು ವಿದ್ಯರ್ಥಿ/ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಲಲಾಯಿತು.
ಮನ್ನಾಯೆಖೆಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜಕುಮಾರ ಅಗಸಿ ಅವರು ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಶಿಬಿರಾರ್ಥಿಗಳಿಗೆ ಈ ಸೌಲಭ್ಯದ ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕೆಂದು ಹಾಗೂ ತರಬೇತಿ ಕೇಂದ್ರದಿAದ ಗ್ರಾಮೀಣ ಭಾಗದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮನ್ನಾಯೆಖೆಳ್ಳಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಧ್ಯಾರಾದ ಶ್ರೀಮತಿ ಸಾವಿತ್ರಿ ಸಾರನಾಡಗೌಡ, ಸಹ ಶಿಕ್ಷಕರಾದ ಸುಧೀರಕುಮಾರ ಬುಜ್ಜಿ, ಗ್ರಾ. ಪಂ. ಸದಸ್ಯರಾದ ಶಂಕರ ಪಂಡಿತ, ಬೇಮಳಖೇಡಾ ಪ್ರಜ್ವಲ್ ರತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಂಟೆಪ್ಪಾ ರತನ, ಮುಖ್ಯ ಗುರುಗಳಾದ ಶ್ರೀಮತಿ ಸಾವಿತ್ರಿ ಸಾರನಾಡಗೌಡ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಧಿರ ಬುಜ್ಜಿಯವರು ನಿರೂಪಣೆ ಮಾಡಿದರೆ, ರಾಜಕುಮಾರ ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಚೈತನ್ಯ ಕೃಷ್ಣ ಅವರು ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು ಎಂದು ಯಾದವ ಕಲ್ಚರಲ್ ರೂರಲ್ ಮತ್ತು ಅರ್ಬನ್ ಡೆವಲಪಮೆಂಟ್ ಎಜುಕೇಶನ್ ಸೋಸೈಟಿಯ ಅಧ್ಯಕ್ಷರಾದ ದಶರಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.