ಬೀದರ್

ಸಿಎ ಸುಪ್ರಭಾ ಆಚಾರ್ಯಗೆ ಡಾ. ಮೋಹನ್ ಆಳ್ವರಿಂದ ಸನ್ಮಾನ

ಕಲ್ಬುರ್ಗಿ: ಈ ಬಾರಿಯ ವೃತ್ತಿಪರ ಲೆಕ್ಕಪರಿಶೋಧಕರ (ಚಾರ್ಟೆರ್ಡ್ ಅಕೌಂಟೆಂಟ್- ಸಿ ಎ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಲಬುರ್ಗಿಯ ಸಿಎ ಸುಪ್ರಭಾ ಆಚಾರ್ಯ ಅವರನ್ನು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಡಾ. ಮೋಹನ್ ಆಳ್ವರು ವಿಶೇಷ ಸನ್ಮಾನ ಮಾಡಿ ಗೌರವಿಸಿದರು.

ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು , ಕಾಮರ್ಸ್ ಅಸೋಸಿಯೇಷನ್ ಹಾಗೂ ಮಹಿಳಾ ಕಲ್ಯಾಣ ಅಸೋಸಿಯೇಷನ್ ವತಿಯಿಂದ ಶನಿವಾರ ಆಗಸ್ಟ್ 17ರಂದು ) ನಡೆದ ಸಮಾರಂಭದಲ್ಲಿ ಕಲಬುರ್ಗಿಯ ಶ್ರೀನಿವಾಸ್ ಆಚಾರ್ಯ ಮತ್ತು ಲತಾ ಆಚಾರ್ಯ ಅವರ ಸುಪುತ್ರಿ ಸುಪ್ರಭಾ ಅವರು ಇತ್ತೀಚೆಗೆ ನಡೆದ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಆಳ್ವಾಸ್ ಪದವಿಯ ಪೂರ್ವ ಕಾಲೇಜಿಗೆ ಕೀರ್ತಿ ತಂದಿರುವುದರಿಂದ ಸನ್ಮಾನಿಸಲಾಯಿತು ಆಳ್ವಾಸ್ ಪಿಯು ಕಾಲೇಜಿನಲ್ಲಿ ಸಾಧನೆ ಮಾಡಿದ ಸಿಎ ವಿದ್ಯಾರ್ಥಿಗಳನ್ನು ಶಾಲು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದ್ಯಾರ್ಜನೆ ಮಾಡಿದ ಸಂಸ್ಥೆಗೆ ಹಾಗೂ ಕುಟುಂಬ ವರ್ಗಕ್ಕೆ ಹೆಮ್ಮೆಯನ್ನು ತಂದಿದ್ದೀರಿ. ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. ಶ್ರೀರಾಮ ಮಂದಿರ ಮತ್ತು ಮೋಹನ್ ಲಾಡ್ಜ್ ನ ಶ್ರೀನಿವಾಸ ಆಚಾರ್ಯ ಅವರ ಪುತ್ರಿ ಸುಪ್ರಭಾ ಅವರು ಸಂತ ಜೋಸೆಫ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಪದವಿಪೂರ್ವ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಅಧ್ಯಯನ ಮಾಡಿ ನಂತರ ಪುಣೆಯಲ್ಲಿ ಐಪಿಪಿ ಕೋರ್ಸ್ ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿ ಆಳ್ವಾಸ್ ಕಾಲೇಜಿಗೆ ಮತ್ತು ಕಲ್ಬುರ್ಗಿಗೆ ಹೆಮ್ಮೆ ತಂದ ಸುಪ್ರಭಾ ಆಚಾರ್ಯ ಅವರ ಯಶಸ್ಸಿಗೆ ತಾಯಿ ಶ್ರೀಮತಿ ಲತಾ ಆಚಾರ್ಯ ಸಂತಸ ವ್ಯಕ್ತಪಡಿಸಿ ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾಳೆ. ಹೆಣ್ಣು ಮಗಳು ಈ ರೀತಿಯ ಉತ್ತಮ ಸಾಧನೆ ಮಾಡಿರುವುದು ನಿಜಕ್ಕೂ ಹೆತ್ತವರಿಗೆ ಗೌರವ ತರುವಂತದ್ದುಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟ್ ವಿವೇಕ ಆಳ್ವ, ಆಳ್ವಾಸ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮೊಹಮ್ಮದ್ ಸಾದಕತ್, ವಾಣಿಜ್ಯ ವಿಭಾಗದ ಪ್ರಶಾಂತ್ ಎಂ ಡಿ, ಕಲಾವಿಭಾಗದಲ್ಲಿ ವೇಣುಗೋಪಾಲ್ ಶೆಟ್ಟಿ ಕಿದೂರು ಮತ್ತಿತರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!