ಸಿಂಧೋಲ ಗ್ರಾ ಪಂ ಅಧ್ಯಕ್ಷರಾಗಿ ಸುಭದ್ರಬಾಯಿ ಉಪಾಧ್ಯಕ್ಷರಾಗಿ ಸುಧಾಕರ ರಾಜಗೀರಾ ಆಯ್ಕೆ.
ಬೀದರ ದಕ್ಷಿಣ ಸಿದೋಲ ಗ್ರಾಮ ಪಂಚಾಯತಗೆ 27-7-2023 ರಂದು ಹೊಸ ಅಧ್ಯಕ್ಷರಾಗಿ ಶ್ರೀಮತಿ ಸುಭದ್ರಬಾಯಿ ರಾಮು ಉಪಾಧ್ಯಕ್ಷರಾಗಿ ಸುಧಾಕರ ರಾಜಗೀರಾ ರವರನ್ನು ಆಯ್ಕೆ ಮಾಡಲಾಗಿದೆ. ಚುನಾವಣೆ ಅಧಿಕಾರಿಯಾಗಿ ಭಗವಾನ ಸಿಂಗ ಸಮ್ಮುಖದಲ್ಲಿ ಚುನಾವಣೆ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ರಾಜಕುಮಾರ ಬನ್ನೆರ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಿಹಿಯನ್ನು ತಿನಿಸಿ ಸನ್ಮಾನಿಸಿದರು. ಗ್ರಾಮ ಪಂಚಾಯತ ಸದಸ್ಯರುಗಳಾದ ಜಾವಿದ ಮಿಯ್ಯಾ ಎಸ್ ತಡಪಳ್ಳಿ ಶಂಕ್ರೇಪ್ಪಾ ಬಾಪೂರೆ, ಪಂಡಿತ ಪವಾರ ಶಂಕರ ಮುಸ್ತರಿ, ಖದೀರ ಮಿಯ್ಯಾ ಸಿಂಧೋಲ ಜಗದೇವಿ ಶಾಂತಮ್ಮಾ ಸುಶಿಲಮ್ಮಾ ಗುಂಡಮ್ಮಾ ರಾಜಮ್ಮಾ ಪವಿತ್ರ ತಡಪಳ್ಳಿ ಮುಂತಾದವರು ಇದ್ದರು.
ಅಧ್ಯಕ್ಷರು ಉಪಾಧ್ಯಕ್ಷರು ಸಿಂಧೋಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮ ಪಂಚಾಯತ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು. ಸರ್ಕಾರದ ವಿವಿಧ ಯೋಜನೆಗೆಳ ಅನುಷ್ಠಾನಕ್ಕಾಗಿ ಸಹಕರಿಸುವುದಾಗಿ ಹೇಳಿದರು ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ ರಾಜಗೀರಾ ರವರಿಗೆ ಪ್ರಜಾ ಪರಿವರ್ತನೆ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪಕುಮಾರ ಭೋಸ್ಲೆ, ಸಾಹಿತಿಗಳಾದ ಸುಬ್ಬಣ್ಣ ಕರಕನಳ್ಳಿ ದಯಾನಂದ ನೌವಲೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.