ಸಸಿಗೆ 5 ರಿಂದ 10 ರೂಪಾಯಿ ನಿಗದಿ ಮಾಡಲು ವಿಜಯಕುಮಾರ ಸೋನಾರೆ ಮನವಿ
ಬೀದರ್, ಜುಲೈ. 22ಃ ರಾಜ್ಯ ಸರ್ಕಾರ ಕಾಡು ಬೆಳಸಿ, ನಾಡು ಉಳಿಸಿ ಎಂಬ ಸ್ಲೋಗನದಡಿಯಲ್ಲಿ ರಾಜ್ಯದಲ್ಲಿ 5 ಕೋಟಿ ಸಸಿ ನಡೆಸಲು ಉದ್ದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಉಚಿತವಾಗಿ ವಿತರಿಸುವ ಬದಲು ಒಂದು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಅರಣ್ಯ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್.ಬಿ. ಖಂಡ್ರೆ ಅವರಿಗೆ ಬರೆದ ಮನವಿ ಪತ್ರದಲ್ಲಿ ಕೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉಚಿತ ಸಸಿ ಪಡೆದವರು ಮನೆಗೆ ಒಯ್ದ ಸಸಿಗಳು ಹಚ್ಚುವುದಿಲ್ಲ. 5-10 ರೂಪಾಯಿ ಬೆಲೆಗೆ ಸಸಿ ನೀಡಿದರೆ, ಸಾರ್ವಜನಿಕರು ಕಾಳಜಿಯಿಂದ ಮನೆಗೆ ಒಯ್ದು ಸಸಿ ನೆಡುತ್ತಾರೆ. ಹೊಸ ಮನೆ ಕಟ್ಟುವರು ಮನೆಯ ಮುಂದೆ 5-10 ಸಸಿಗಳು ಕಡ್ಡಾಯವಾಗಿ ಹಚ್ಚಬೇಕು ಎಂದು ಬೀದರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಆದೇಶಿಸಬೇಕು ಎಂದು ಕೋರಿದ್ದಾರೆ.
ಈಗಾಗಲೇ ಮರ-ಗಿಡಗಳು ಇಲ್ಲದ ಕಾರಣ ಪರಿಸರ ನಾಶವಾಗುತ್ತಿದೆ. ಸಸಿಗಳು ಬೆಳೆಸಿದರೆ, ಪರಿಸರ ಉಳಿಯುತ್ತದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆಯಿಂದ ಸಸಿಗಳು ಖರೀದಿಸಿ ಸಸಿಗಳು ನೆಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.