“ಸರ್ಕಾರಿ ಶಾಲೆ ಮಕ್ಕಳ ಸಂಖ್ಯೆ ನೂರಾರು ಆದರೆ ಮೂಲಸೌಲಭ್ಯಗಳ ಕೊರತೆ”
ವಿಶೇಷ ವರದಿ ರಾಜೇಂದ್ರ ಪ್ರಸಾದ್ ಎಸ್. ಕನಕಪುರ
ಚಿಂಚೋಳಿ ಚಂದಾಪುರ್ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪುರ ಶಾಲೆಯಲ್ಲಿ ಒಟ್ಟು 545 ಮಕ್ಕಳು ವ್ಯಾಸಂಗ ಮಾಡುತ್ತಿದ್ದು,ಅದರಲ್ಲಿ ಎಲ್ಕೆಜಿ-ಯುಕೆಜಿ ಹೊರತುಪಡಿಸಿ, ಇಲ್ಲಿ ಕಾಯಂ 20 ಶಿಕ್ಷಕರ ನಿಯೋಜನೆ ಇದ್ದು ಕೇವಲ 12 ಖಾಯಂ ಶಿಕ್ಷಕರು ಕೆಲಸ ಮಾಡುತ್ತಿದ್ದು, ಉಳಿದಂತ ಅತಿಥಿ ಶಿಕ್ಷಕರ ಮೇಲೆ ಕೆಲಸ ನಿರ್ವಹಿಸುತ್ತಿದ್ದು ಇಷ್ಟೊಂದು ದೊಡ್ಡ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ, ಈ ಶಾಲೆಯಲ್ಲಿ ಮಕ್ಕಳಿಗೋಸ್ಕರ ಶೌಚಾಲಯ ವ್ಯವಸ್ಥೆನೇ ಇಲ್ಲ, ಕೆಲ ಗುತ್ತಿಗೆದಾರರಿಂದ 2-3 ವರ್ಷಗಳ ಹಿಂದೆ ಕಳಪೆ,ಮತ್ತು ಉಪಯೋಗವಾಗದಂತೆ ಅರ್ಧ ಪ್ರಮಾಣದ ಕೆಲಸ ಮಾಡಿ ಶೌಚಾಲಯ ನಿರ್ಮಿಸಿ, ಉಪಯೋಗಕ್ಕೆ ಬಾರದಂತೆ ಮಾಡಿ ಹಣವನ್ನು ದುರ್ಬಳಕೆ ಮಾಡಿಕೊಂಡ ಸಂಶಯ ಕೆಲ ಪೋಷಕರಲ್ಲಿ, ಶುದ್ಧ ನೀರಿನ ಘಟಕವು ಕೂಡ ಈ ಶಾಲೆಯಲ್ಲಿ ಇಲ್ಲ, ಈ ಶಾಲೆಯ ಕೆಲವೊಂದು ಕೊಠಡಿ ಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ, ಮಕ್ಕಳಿಗೆ ಯಾವುದೇ ಒಂದು ತರಗತಿಯಲ್ಲಿ ಸರಿಯಾಗಿ ಕೂಡಲು ಬೆಂಚ್ ವ್ಯವಸ್ಥೆ ಕೂಡ ಇಲ್ಲ, ಕೆಲ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಅವರಿಗೆ ಕೈಕಾಲು ನೋವು ಇದೆ ಎಂದು ಹಲವಾರು ಪೋಷಕರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ, ಇಷ್ಟೊಂದು ವಿದ್ಯಾರ್ಥಿಗಳು ಇದ್ದು ಈ ಮಕ್ಕಳಿಗೆ ಆಡಲು ಸರಿಯಾದ ಆಟದ ಮೈದಾನವಿಲ್ಲ, ಮಳೆಗಾಲದಲ್ಲಿ ಆವರಣದಲ್ಲಿ ತುಂಬೆಲ್ಲ ನೀರು ನಿಂತು ಅನೇಕ ಮಕ್ಕಳು ನೀರಿನಲ್ಲಿ ಬಿದ್ದಿರುವ ಉದಾಹರಣೆಗಳಿವೆ, ಕೆಲವೊಂದು ಸಣ್ಣಪುಟ್ಟ ಗಾಯಗಳು ಕೂಡ ಆಗಿವೆ, ಯಾವುದೇ ಒಂದು ಮಗುವಿನ ಜೀವ ಹಾನಿ ಆದರೆ ಮಾತ್ರ ಈ ಕಡೆ ನೋಡುತ್ತಾರೆ ಎಂಬ ಕಲ್ಪನೆಯಲ್ಲಿ ಪೋಷಕರು, ನಮ್ಮ ಪತ್ರಿಕೆಯಲ್ಲೂ ಕೂಡ ಎರಡು ಬಾರಿ ಪ್ರಕಟಣೆ ಮಾಡಿದರು ಇಲ್ಲಿವರೆಗೆ
ಈ ಸಮಸ್ಯೆ ಬಗೆಹರಿದಿಲ್ಲ ಇದಕ್ಕೆ ಕಾರಣ ಇಲ್ಲಿನ ಕಿವಿ ಕೇಳದ ಕಣ್ಣು ಕಾಣದ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರಗಳು ಅನೇಕ ಯೋಜನೆಗಳು ತಂದು ಶಿಕ್ಷಣ ಹೆಚ್ಚಿಸಲು ಸಾವಿರಾರು ಕೋಟಿ ರೂಪಾಯಿ ಅನುದಾನ ಕೊಟ್ಟರು, ಸರ್ಕಾರಿ ಶಾಲೆಗಳು ಇನ್ನೂ ಕೂಡ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ, ರೋಹಿಣಿ ಆರ್ ಕೆ ಪೋಷಕರು ಪ್ರತಿಕ್ರಿಯಿಸಿ ನಮ್ಮ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು ಈ ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆನೇ ಇಲ್ಲ ಹೆಣ್ಣು ಮಕ್ಕಳು ಶೌಚಾಲಯ ಹೊರಗಡೆ ಹೇಗೆ ಕುಳಿತುಕೊಳ್ಳಲು ಸಾಧ್ಯ ಬೇರೆ ತಾಲೂಕಿನ ಶಾಸಕರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಕುಳಿತುಕೊಂಡು ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರ ನೀಡುತ್ತಾರೆ ನಮ್ಮಲ್ಲಿ ಮಾತ್ರ ಇದರ ವಿರುದ್ಧವಾಗಿದೆ ಇದೆ ಒಂದು ದೊಡ್ಡ ಬೇಸರದ ಸಂಗತಿ. ಸೂರ್ಯಕಾಂತ್, ಪೋಷಕರು ಪ್ರತಿಕ್ರಿಯಿಸಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತುಂಬಾ ಇದೆ ಜನಪ್ರತಿನಿಧಿಗಳು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಮೂಲಸೌಕರ್ಯಗಳನ್ನು ಕಲ್ಪಿಸಿ ಸರ್ಕಾರಿ ಶಾಲೆಗಳು ಬೆಳೆಯುವಂತೆ ಮಾಡಬೇಕು ಎಂದು ಹೇಳಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮೂಲಸೌಕರ್ಯ ಕೊರತೆ ನೀಗಿಸಲು ಆಗದೆ ಇದ್ದರೆ ಬಹಳಷ್ಟು ಶ್ರೀಮಂತರು ಇಂತಹ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಮೂಲಸೌಕರ್ಯಗಳ ಕೊರತೆ ನೀಗಿಸಲು ಪಣತೊಡಬೇಕು ಎಂಬ ಆಸೆ ಪೋಷಕರದ್ದು!