ಸರ್ಕಾರಿ ಶಾಲೆಗೆ ಶಾಸಕ ಪ್ರಭು ಚವ್ಹಾಣ ದಿಢೀರ್ ಭೇಟಿ
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅ.27ರಂದು ಔರಾದ ತಾಲ್ಲೂಕಿನ ವಡಗಾಂವ ವ್ಯಾಪ್ತಿಯಲ್ಲಿರುವ ಬರಗ್ಯಾನ್ ತಾಂಡಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ನೀಡಿ ಪರಿಶೀಲಿಸಿದರು.
ಶಾಲೆಯ ತರಗತಿ ಕೋಣೆಗಳಲ್ಲಿ ಸುತ್ತಾಡಿ ಕಟ್ಟಡದ ಸ್ಥಿತಿಗತಿಯನ್ನು ವೀಕ್ಷಿಸಿದರು. ಕೆಲವು ಕೋಣೆಗಳು ಶಿಥಿಲಾವಸ್ಥೆಗೆ ಬಂದಿರುವುದನ್ನು ಕಂಡು, ಹೊಸ ತರಗತಿ ಕೋಣೆಗಳನ್ನು ನಿರ್ಮಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಇದೇ ವೇಳೆ ಮಕ್ಕಳೊಂದಿಗೆ ಕುಳಿತು ಪಠ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ವಿದ್ಯಾರ್ಥಿಯೊಬ್ಬರಿಗೆ ಕನ್ನಡ ಪುಸ್ತಕ ಓದಿಸುವುದರೊಂದಿಗೆ ಶಾಲೆಯಲ್ಲಿ ನಡೆಯುವ ಪಠ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು.
ಶಾಲೆಯ ಆವರಣ ಹಾಗೂ ತರಗತಿ ಕೋಣೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಶಿಕ್ಷಕರು ಅನಗತ್ಯ ಗೈರು ಹಾಜರಾಗುವುದು ನಿಲ್ಲಿಸಬೇಕು. ಕಡ್ಡಾಯವಾಗಿ ಸಮಯ ಪಾಲನೆ ಮಾಡಬೇಕು. ಪಠ್ಯ ಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಸಬೇಕೆಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಾಲೆಯ ಮುಖ್ಯಗುರು ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.