ಬೀದರ್

ಸತ್ಸಂಗದಿAದ ಮಾನವೀಯತೆಯ ಏಳ್ಗೆ -ಪರಶುರಾಮ ಕಪಲಾಪೂರ

 ನಾವು ಅವಸರದ ಬದುಕಿನಲ್ಲಿ ಬದುಕುತ್ತಿದ್ದೇವೆ. ಶಾಂತಿ ನೆಮ್ಮದಿಗಳಿಂದ ವಂಚಿತರಾಗುತ್ತಿರುವುದು ನಿಜಕ್ಕೂ ವಿಷಾದನೀಯ. ದಿನ ಬೆಳಗಾದರೆ ವೈಯಕ್ತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಮ್ಮತನವೇ ನಾವು ಮರೆತು ಹೋಗುತ್ತಿದ್ದೇವೆ. ಯಾರಿಗೂ ಸಮಯವೇ ಇಲ್ಲವಾಗಿದೆ. ಇಂತಹದರಲ್ಲಿ  ಈ ಶ್ರಾವಣ ಮಾಸ ದಿನಗಳಲ್ಲಿ ನಾವು ನಮ್ಮ ದಿನನಿತ್ಯ ಬದುಕಿನ ಒಂದಿಷ್ಟು ಸಮಯವನ್ನು ಸತ್ಸಂಗಕ್ಕೆ ಮೀಸಲಿಟ್ಟು ಸಂತರ, ಶರಣರ ಪ್ರವಚನಗಳನ್ನು ಆಲಿಸಬೇಕು. ಸತ್ಯದ ಮಾರ್ಗದಲ್ಲಿ ನಡೆಯಬೇಕು. ನ್ಯಾಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಪಲಾಪುರ  ಗ್ರಾಮ ಪಂಚಾಯಿತದ ಅಧ್ಯಕ್ಷರಾದ ಶ್ರೀ ಪರಶುರಾಮ್ ರವರು ಮಾತನಾಡಿದರು.  ಅವರು ಕಪಲಾಪೂರದಲ್ಲಿ ಅಕ್ಕಮಹಾದೇವಿ ಅನುಭವ ಮಂಟಪ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶ್ರಾವಣ ಮಾಸದ “ಶರಣರ ಜೀವನ ದರ್ಶನ”ಕುರಿತ ವೇದಿಕೆಯಲ್ಲಿ ತಾವು ಮುಖ್ಯ ಅತಿಥಿಯಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾದ ಕಪಲಾಪೂರ ಗ್ರಾಮಪಂಚಾಯತದ ಉಪಾಧ್ಯಕ್ಷರಾದ ಶ್ರೀ ಸಂಜೀವ ಕುಮಾರ್ ಮಾಶೆಟ್ಟಿ ಅವರು ಮಾತನಾಡಿ “ಇಂದಿನ ತರಣರು ಒಳ್ಳೆ ಮಾರ್ಗದತ್ತ ಹೆಜ್ಜೆ ಇಟ್ಟು ಸಾಗಬೇಕು. ದೇಶದ ಉನ್ನತಿಗೆ ಮುಂದಾಗಬೇಕು. ಮೊಬೈಲ್ನಲ್ಲಿ ತಮ್ಮ ಜೀವನ ವ್ಯರ್ಥವಾಗಿ ಕಳೆದುಕೊಳ್ಳದೆ ಗ್ರಾಮದ ಹಿರಿಯರನ್ನು ಗೌರವಿಸಬೇಕು. ತಂಟೆ ತಕರಾರು ಗಳಿಲ್ಲದೆ ಸಮಾಧಾನ, ಸಮಾನತೆ ಭಾವದಿಂದ ಗ್ರಾಮದ ಏಳಿಗೆಗೆ ದುಡಿಯಬೇಕು. ಮತ್ತು ಎಲ್ಲರೊಂದಿಗೆ ಸೌಜನ್ಯದಿಂದ ಬೆರೆಯಬೇಕು” ಎಂದು ನುಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಶಿವಕುಮಾರ್ ಬೀರಗೆ, ಸತೀಶ್ ಕುಮಾರ್ ಶಿಕೆನಪುರೆ, ಆನಂದ ಕವಳೆ, ವಿಜಯಕುಮಾರ್ ಕೋಳಿ,  ಶಿವಶಂಕರ್ ಚಿಕುರ್ತಿ, ಚನ್ನಬಸವ ಟೇಕುರೆ ಮುಂತಾದವರು ಇದ್ದರು. ಈ ಕಾರ್ಯಕ್ರಮದಲ್ಲಿ ಪೂಜ್ಯ ಚರಜಂಗಮರಾದ ಶ್ರೀ ಸಿದ್ರಾಮಪ್ಪ ಕಪಲಾಪುರೆ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಈ ವೇದಿಕೆ ಮೇಲೆ ದಿವಂಗತ ಶ್ರೀಮತಿ ಸಂಗಮ್ಮ ಘಾಳೆಯವರ ಮೂರನೇ ಪುಣ್ಯ ಸ್ಮರಣೆಯನ್ನು ಅತ್ಯಂತ ಅದ್ದೂರಿಯಿಂದ ಆಚರಣೆ ಮಾಡಲಾಯಿತು. ಈ ವೇಳೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರು ಜನ ಭಾವಿಕ ಭಕ್ತರಿಗೆ ಬಸವಣ್ಣನವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು ಜೊತೆಗೆ 50 ಮಹಿಳಾ ಮಣಿಗಳಿಗೆ ಸೀರೆಗಳನ್ನು ವಿತರಣೆ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಓಂಕಾರ ಘಾಳೆಯವರು ಸ್ವಾಗತವನ್ನು ಕೋರಿದರು. ಬಸವೇಶ್ವರ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಚನ್ನಬಸವ ಘಳೆಯವರು ಕಾರ್ಯಕ್ರಮಕ್ಕೆ ಸಂಚಾಲನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಜನ ಭಾಗವಹಿಸಿದ್ದರು. ಆನಂದ ಪಾಟೀಲ್ ಕೋಲಾರ್ , ಪ್ರಕಾಶ ಕುಲಕರ್ಣಿ ಮುಗನೂರ ಸಂಗೀತವನ್ನು ನಡೆಸಿಕೊಟ್ಟರು. ವಿಜಯಲಕ್ಷ್ಮಿ ಮತ್ತು ಅಕ್ಕಮಹಾದೇವಿಯವರು ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಸೂರ್ಯಕಾಂತ್ ಘಾಳೆಯವರ ವಂದನಾರ್ಪಣೆಯೊAದಿಗೆ ಸಮಾರಂಭ ಮುಕ್ತಾಯಗೊಂಡಿತು.

Ghantepatrike kannada daily news Paper

Leave a Reply

error: Content is protected !!