ಸಂಶಯಾತ್ಮಕ ಸಾವಿನ ತನಿಖೆ ನಡೆಸುವಂತೆ ಭೀಮ ವಾದ ಆಗ್ರಹ
“ರಟಕಲ್ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಸಂಶಯಾತ್ಮಕ ಸಾವಿನ ತನಿಖೆ ನಡೆಸುವಂತೆ ಭೀಮ ವಾದ ಆಗ್ರಹ ” ಕಾಳಗಿ ತಾಲೂಕಿನ ರಟಕಲ್ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ಹೃದಯಘಾತದಿಂದ ವಿಧಿವಶರಾಗಿದ್ದು ಇವರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಮಾಡಲು ಭೀಮ ವಾದ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತಿದೆ, ಭಾನುವಾರ ರಟಕಲ್ ಗ್ರಾಮದಲ್ಲಿ ವಚನಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಯಿಂದ ಇದ್ದರು, ಹಿಂದೆ ಯಾವುದೇ ತರಹ ಹೃದಯ ಸಂಬಂಧಿಸಿ ದ ಕಾಯಿಲೆಗಳು ಇರುವ ಉದಾಹರಣೆಗಳು ಇಲ್ಲ, ಆದ್ದರಿಂದ ಸಾವಿಗೆ ಕಾರಣ ಏನೆಂಬುದು ಸಂಪೂರ್ಣ ಪೊಲೀಸ್ ಇಲಾಖೆಯಿಂದ ತನಿಖೆಯಾಗಬೇಕು ಎಂದು ಶಾಮರಾವ್ ಹೇರೂರು ವಿಭಾಗ ಸಂಚಾಲಕರು ಮತ್ತು ಪ್ರಿಯದರ್ಶಿನಿ ಜಿ ತಿಲ್ಲಾಪುರ್ ರಾಜ್ಯ ಸಂಚಾಲಕರು ಭೀಮವಾದ ದ. ಸಂ.ಸ. ಕಲಬುರ್ಗಿ ಪತ್ರಿಕ ಪ್ರಕಟಣೆ ತಿಳಿಸಿದ್ದಾರೆ.