ಸಂತಪೂರ ಪೊಲೀಸರಿಂದ ಇಸ್ಪೀಟ್ ಜೂಜಾಟದ ಮೇಲೆ ದಾಳಿ 77 ಸಾವಿರಕ್ಕೂ ಅಧಿಕ ಮೊತ್ತ ಜಪ್ತಿ
ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಡಗಾಂವ್ ಖೇರಾ ತಾಂಡಾ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಮಾಹಿತಿಯಂತೆ ಶ್ರೀ, ಮಹೇಬೂಬ ಅಲಿ, ಪಿ.ಎಸ್.ಐ ಸಂತಪೂರ ಠಾಣೆ ರವರು ತಮ್ಮ ಸಿಬ್ಬಂದಿಯವರಾದ ಶ್ರೀ, ಸೂರ್ಯಕಾಂತ, ರಾಜಕುಮಾರ, ಗೌತಮ್ ರವರೊಂದಿಗೆ ಮಿಂಚಿನ ವೇಗದಲ್ಲಿ ದಾಳಿ ಮಾಡಿ ಅವರಿಂದ ನಗದು ಹಣ 77,100=00 ರೂಪಾಯಿ, ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.