ಶರಣತತ್ವವನ್ನು ಮೈಗೂಡಿಸಿಕೊಂಡು ನಡೆದಾಗ ದಾಂಪತ್ಯ ಜೀವನ ಫಲಪ್ರದವಾಗಲು ಸಾಧ್ಯವಿದೆ -ಪೂಜ್ಯ ಶ್ರೀ ಡಾ. ಬಸವಲಿಂಗಪಟ್ಟದ್ದೇವರು
ಬೀದರಃ-ಆ.12, ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಸತ್ಯ ಶುದ್ಧ ಕಾಯಕ ಮಾಡಿ ದಾಂಪತ್ಯ ಜೀವನ ನಡೆಸಿದರು. ಸಂಸಾರದಲ್ಲಿದ್ದು ಸಂಸಾರದಲ್ಲಿರಲಾರದೇ ಸಕಲ ಜೀವಿಗಳ ಕಲ್ಯಾಣ ಬಯಸುವರು ಶರಣರಾಗಿದ್ದರು. ಸಕಲ ಮಾನವರನ್ನು ನಮ್ಮವರು ನಮ್ಮ ಮನೆಯ ಮಗನೆಂದೆನಿಸುವ ಉದಾತ್ತ ವಿಚಾರವುಳ್ಳವರಾಗಿದ್ದರು. ಇಂದು ಜಾಗತಿಕ ನೆರಳಿನಲ್ಲಿ ಮಾನವಿಯತೆಯೆಂಬುದು ಮಾಯವಾಗಿದೆ. ಮತ್ತೆ ಸಕಲರಲ್ಲಿ ಮಾನವೀಯ ಮೌಲ್ಯ ಪ್ರೀತಿ, ಅನುಕಂಪ, ಸಹೋದರತ್ವ ಭಾವನೆ ತರಬೇಕಾದರೆ ಶರಣರ, ಸಂತರ ನುಡಿಗಣನವನ್ನು ಆಲಿಸುವಂತಹ ಕಾರ್ಯವಾಗಬೇಕಾಗಿದೆ ಎಂದು ಪೂಜ್ಯ ಡಾ. ಬಸವಲಿಂಗಪಟ್ಟದ್ದೇವರು ನುಡಿದರು.
ಅವರು ದಿನಾಂಕ 11-8-2023 ರಂದು ಸಂಜೆ 6-30ಕ್ಕೆ ನಗರದ ಡಾ. ಚನ್ನಬಸವಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡ 155ನೇಯ ಅನುಭವ ಮಂಟಪ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ, ದಾಂಪತ್ಯ ಜೀವನವು ಸಮರಸದಿಂದ ಕೂಡಿರಬೇಕು. ಪ್ರತಿಯೊಬ್ಬರೂ ಶರಣತತ್ವವನ್ನು ಮೈಗೂಡಿಸಿಕೊಂಡು ನಡೆದಾಗ ದಾಂಪತ್ಯ ಜೀವನ ಫಲಪ್ರದವಾಗಲು ಸಾಧ್ಯವಿದೆ ಎಂದು ನುಡಿದರು.
ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಜಿ. ಶೆಟಕಾರ ಅವರು ಬಸವಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ವ್ಯಕ್ತಿ ಸಂಸಾರದಲ್ಲಿ ಸಮಾಧಾನ, ಶಾಂತಿ ನೆಲೆಗೂಡಬೇಕಾದರೆ ಶರಣರ ಬದುಕನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಕರ್ನಾಟಕ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಗನ್ನಾಥ ಹೆಬ್ಬಾಳೆಯವರು ದಾಂಪತ್ಯ ಜೀವನ ಕುರಿತು ಅನುಭಾವ ನುಡಿ ಮಂಡಿಸುತ್ತಾ, ಪ್ರಾಪಂಚಿಕ ಸುಖದಲ್ಲಿ ಮಾನವ ಮಗ್ನನಾಗುತಿದ್ದಾನೆ. ಆದರೆ ಅಧ್ಯಾತ್ಮಿಕ ಜೀವನ ಮತ್ತು ಕೌಟುಂಬಿಕ ಜೀವನ ಎರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಸುಖಿ ಕುಟುಂಬ ನೆಲೆಸಬೆಕಾದರೆ 12ನೇ ಶತಮಾನದಲ್ಲಿಯ ಶರಣ-ಶರಣೆಯರು ನಡೆದ ದಾರಿಯು ನಮಗೆ ದಾರಿದೀಪವಾಗಿದೆ ಎಂದರು. ನಮ್ಮ ಪೂರ್ವಜರು ಅವಿಭಕ್ತ ಕುಟುಂಬ ಅನುಸರಿಸಿಕೊಂಡು ಸುಖ-ದುಃಖದಲ್ಲಿ ಸಮರಸದಿಂದ ಬಾಳ್ವೆ ಸಾಗಿಸುತಿದ್ದರು. ಇಂದು ನಾವು ಭಾರತೀಯ ಸಂಸ್ಕøತಿ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ದಾಂಪತ್ಯ ಜೀವನದ ಮೌಲ್ಯವನ್ನು ಕಲಿಸಿಕೊಡುವುದು ಅವಶ್ಯಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪ್ರೊ. ಎಸ್. ಬಿ. ಬಿರಾದಾರ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದರು. ನಿವೃತ್ತ ಜಿಲ್ಲಾ ಸಂಖ್ಯಾ ಸಂಗ್ರÀಹಣಾಧಿಕಾರಿ ಅಶೋಕ ಪಾಟೀಲ, ಕರ್ನಾಟಕ ರಾ.ಶಿ.ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ವೀರಭದ್ರಪ್ಪಾ ಬುಯ್ಯಾ, ಬಸವರಾಜ ಧನ್ನೂರ, ಶಕುಂತಲಾ ಬೆಲ್ದಾಳೆ, ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶರಣೆ ಮೀನಾಕ್ಷಿ ವೈಜಿನಾಥ ಪಾಟೀಲ ನವದಂಪತಿಗಳಿಗೆ ಪೂಜ್ಯರು ಪುಷ್ಪವೃಷ್ಠಿ ಮಾಡಿ ಆಶಿರ್ವದಿಸಿದರು. ದಾಸೋಹಿಗಳಾದ ಗುಂಡಮ್ಮ ಕಲ್ಯಾಣರಾವ ಜಾಬಾ ಅವರು ಗುರುಬಸವ ಮತ್ತು ಡಾ. ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕು. ವಚನಶ್ರೀ ಚನ್ನಬಸಪ್ಪಾ ನೌಬಾದೆರವರು ವಚನ ಗಾಯನ ನಡೆಸಿಕೊಟ್ಟರು. ಅನುಭವ ಮಂಟಪದ ಸಂಸ್ಕøತಿ ವಿದ್ಯಾಲಯದ ವಿದ್ಯಾರ್ಥಿನಿ ಕು. ರೂಪಾಲಿ ಬಸವ ಮಂತ್ರ ಕುರಿತು ಮಾತನಾಡಿದರು. ಉಮೇಶ ಜಾಬಾರವರು ಸ್ವಾಗತ ಕೊ ್ರೀ ರಿದರೆ ಲಕ್ಷ್ಮಿ ಬಿರಾದಾರ ನಿರೂಪಿಸಿದರು. ಡಾ. ಶಾಂತಕುಮಾರ ಸಂಗೋಳಗಿ ವಂದಿಸಿದರು. ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಇಂಗಳೆ, ಶ್ರೀಕಾಂತ ಬಿರಾದಾರ, ಗುರುನಾಥ ಬಿರಾದಾರ, ಪ್ರಸಾದ ನಿಲಯದ ವ್ಯವಸ್ಥಾಪಕರಾದ ಶ್ರೀಕಾಂತ ಸ್ವಾಮಿ, ಶಿವಕುಮಾರ ಭಾಲ್ಕೆ, ಭೀಮಾಶಂಕರ ಬಿರಾದಾರ, ಅಶೋಕ ಪಾಟೀಲ, ಯೋಗೇಂದ್ರ ಯದಲಾಪುರೆ, ಸಂಜೀವಕುಮಾರ, ಮೀನಾಕ್ಷಿ ಪಾಟೀಲ, ಅನುಭವ ಮಂಟಪದ ಸಂಸ್ಕøತಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.