ವೈದ್ಯಕೀಯ ಮಕ್ಕಳಿಂದ ಕನ್ನಡ ಕಲರವ ಶ್ಲಾಘನೀಯ – ಚನ್ನಬಸವಾನಂದ ಶ್ರೀಗಳು
ಬೀದರ: ಬ್ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬ್ರಿಮ್ಸ್ ಕನ್ನಡ ಸಂಘವು ಕಳೆದ ಒಂದು ದಶಕದಿಂದ ಇಲ್ಲಿ ಕನ್ನಡ ಕಲರವ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಅವ್ಯುಕ್ತನ್ 2022 ವೈದ್ಯಕೀಯ ವಿದ್ಯಾರ್ಥಿಗಳು, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬ್ರಿಮ್ಸ್ ಕನ್ನಡ ಸಂಘದ ವತಿಯಿಂದ ಬ್ರಿಮ್ಸ್ ಸಭಾಂಗಣದಲ್ಲಿ ಕನ್ನಡ ಕಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ವೈದ್ಯರು ದೇವರಿಗೆ ಸಮಾನ. ಮನಸ್ಸಿನ ನೋವುಗಳ ಅರ್ಥಮಾಡಿಕೊಳ್ಳುವ ಶಕ್ತಿ ವೈದ್ಯರಲ್ಲಿ ಇರಬೇಕು. ರೋಗಿಗಳನ್ನು ವಿನಯದಿಂದ ಮತ್ತು ಪ್ರೀತಿಯಿಂದ ಮಾತನಾಡಿಸಿ ಅವರ ರೋಗ ಗುಣಪಡಿಸುವ ಮಾನವೀಯತೆ ಬೆಳೆಸಿಕೊಳ್ಳಬೇಕು. ಮುಂದೆ ಎಲ್ಲರೂ ಉತ್ತಮ ವೈದ್ಯರಾಗಿ ಹೊರಹೊಮ್ಮಿ ಬ್ರಿಮ್ಸ್ ಕಾಲೇಜಿಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಸವ ಸೇವಾ ಪ್ರತಿμÁ್ಠನದ ಪೂಜ್ಯ ಶ್ರೀ ಡಾ. ಅಕ್ಕ ಗಂಗಾಂಬಿಕಾ ಮಾತನಾಡಿ ಕನ್ನಡ ಅದು ಬರೀ ಭಾμÉಯಲ್ಲ ಎಲ್ಲರ ಉಸಿರಾಗಿದೆ. ಬ್ರಿಮ್ಸ್ ವಿದ್ಯಾರ್ಥಿಗಳ ಕನ್ನಡ ಪ್ರೇಮ ಕಂಡು ಹೃದಯ ಉಕ್ಕಿ ಬರುತ್ತಿದೆ. ಕನ್ನಡ ಕಲಿಯುವುದರ ಜೊತೆಗೆ ವೈದ್ಯಕೀಯ ಮಕ್ಕಳು ಸತತ ಅಧ್ಯಯನ ಮಾಡಬೇಕು. ವೈದ್ಯರಾದರೆ ಸಾಲದು ಹೊಸ ಹೊಸ ಸಂಶೋಧನೆ ಕಡೆ ಗಮನ ಹರಿಸಬೇಕು. ಏಕಾಗ್ರತೆ, ಪರಿಶ್ರಮ ಹಾಗೂ ಸಮಯಪಾಲನೆ ಮೂಲಕ ಶ್ರೇಷ್ಠ ವೈದ್ಯರಾಗಿ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ ಬ್ರಿಮ್ಸ್ ನಲ್ಲಿ ಅಧ್ಯಯನ ಜೊತೆಗೆ ಕನ್ನಡ ಭಾμÉ ಉಳಿಸುವ ಕಾರ್ಯ ನಡೆಯುತ್ತಿದೆ. ಮಕ್ಕಳಿಗೆ ಕೇವಲ ಕಾನ್ವೆಂಟ್ ಶಾಲೆಗಳಲ್ಲಿ ಓದಿಸಿದರೆ ಸಾಲದು ಸಂಸ್ಕಾರ ನೀಡಬೇಕು. ವಿದ್ಯಾರ್ಥಿಗಳು ವಿಜ್ಞಾನದ ಜೊತೆಗೆ ಆಧ್ಯಾತ್ಮ ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಬ್ರಿಮ್ಸ್ ಆಸ್ಪತ್ರೆ ಬಡವರಿಗೆ ಸಂಜೀವಿನಿ ಇದ್ದಂತೆ ಎಂದರು. ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ ದಶಕಗಳಿಂದ ಕನ್ನಡ ಭಾμÉ ಪ್ರಚಾರಗೈಯುವ ನಿಟ್ಟಿನಲ್ಲಿ ಹತ್ತು ಹಲವಾರು ಕನ್ನಡಪರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ ವಹಿಸಿದ್ದರು. ಇದೇ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಬಸವ ತತ್ವ ಪ್ರಚಾರ ಕೈಗೊಂಡ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿಯವರಿಗೆ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪದಕಗಳನ್ನು ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆ ಮೇಲೆ ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಮಂಜುನಾಥ ಸ್ವಾಮಿ, ಪ್ರಚಾರ್ಯರಾದ ಡಾ. ರಾಜೇಶ ಪಾರಾ, ಸಹಾಯಕ ಪ್ರಾಧ್ಯಾಪಕಿ ಡಾ. ವμರ್Á ಅಖಾಡೆ, ಕನ್ನಡ ಕಲೋತ್ಸವ ಮೇಲುಸ್ತುವಾರಿ ಅಧಿಕಾರಿ ಆಮೋಲ್ ಕಾಂಬಳೆ ಸೇರಿದಂತೆ ಅವ್ಯುಕ್ತನ್ 2022 ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಮಂಜುನಾಥ್, ಕು. ದೀಕ್ಷಿತಾ ಗುರುಪ್ರಸಾದ ಕು. ತುಳಸಿ ನಿರೂಪಿಸಿ ವಂದಿಸಿದರು.