ಬೀದರ್

ವಿಧಾನಸೌಧ ಆವರಣದಲ್ಲಿ ಸಸಿ ನೆಟ್ಟ ಶಾಸಕ ಪ್ರಭು ಚವ್ಹಾಣ 

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಮ್ಮ ಜನ್ಮದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಏಕ್ ಪೇಡ್ ಮಾ ಕೆ ನಾಮ್'(ತಾಯಿಯ ಹೆಸರಿನಲ್ಲಿ ಒಂದು ಗಿಡ) ಅಭಿಯಾನದಂತೆ ಜುಲೈ 6ರಂದು ವಿಧಾನಸೌಧದ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಇದಕ್ಕೂ ಮುನ್ನ ಬೆಂಗಳೂರಿನ ಬಸವೇಶ್ವರ ವೃತ್ತದ ಬಳಿಯ ಹನುಮಾನ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿ, ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾತನಾಡಿ, ಈ ವರ್ಷ ಕ್ಷೇತ್ರದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಬೆಳೆ ಸರಿಯಾಗಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ವರ್ಷ ತಮ್ಮ ಜನ್ಮದಿನವನ್ನು‌ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ. ಆದರೆ ಜನ್ಮದಿನದಂದು ಪ್ರಧಾನಮಂತ್ರಿಯವರ ಆಶಯದಂತೆ ವಿಧಾನಸೌಧದ ಆವರಣದಲ್ಲಿ ಸಸಿಗಳನ್ನು‌ ನೆಟ್ಟಿದ್ದೇನೆ. ಪಕ್ಷದ‌‌ ಕಾರ್ಯಕರ್ತರು‌ ಮತ್ತು ಅಭಿಮಾನಿಗಳಿಗೂ ಹೂ ಹಾರಗಳು, ಫ್ಲೆಕ್ಸ್, ಬ್ಯಾನರ್ ಗಳಿಗೆ ಹಣ ವೆಚ್ಚ ಮಾಡದೇ ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸಬೇಕೆಂದು ತಿಳಿಸಿದ್ದೇನೆ‌ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಿಜಯಕುಮಾರ ಪಾಟೀಲ ಗಾದಗಿ, ಕಿರಣ ಪಾಟೀಲ, ವಿರೇಂದ್ರ ರಾಜಾಪುರೆ, ರತಿಕಾಂತ ಕೋಹಿನೂರ, ಸುಜಿತ ರಾಠೋಡ ಹಾಗೂ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!