ರುಚಿಕರ ಅಡುಗೆ ತಯಾರಿಕೆ ಸ್ಪರ್ಧೆ 19ಕ್ಕೆ
ಬೀದರ್: ಅಡುಗೆ ತಯಾರಿಕೆ ಕೌಶಲಕ್ಕೆ ಉತ್ತೇಜನ ನೀಡಲು ನಗರದ ಅಂಬೇಡ್ಕರ್ ವೃತ್ತ ಸಮೀಪದ ಕರ್ನಾಟಕ ಸಾಹಿತ್ಯ ಸಂಘದ ಕಚೇರಿಯಲ್ಲಿ ಆಗಸ್ಟ್ 19 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಮಟ್ಟದ ರುಚಿಕರ ಅಡುಗೆ ತಯಾರಿಕೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧಾಳುಗಳು ಕರ್ನಾಟಕದ ಒಂದು ಸಾಂಪ್ರದಾಯಿಕ ತಿನಿಸು ತಯಾರಿಸಿ ಅಥವಾ ಅದಕ್ಕೊಂದು ವಿಶೇಷ ರೂಪ ನೀಡಿ, ಸ್ಥಳಕ್ಕೆ ತರಬಹುದು. ಸ್ವಾದಿಷ್ಟ ಅಡುಗೆ ತಯಾರಕರನ್ನು ಬೆಂಗಳೂರಿನಲ್ಲಿ ನಡೆಯುವ ಅಂತಿಮ ಅಡುಗೆ ತಯಾರಿಕೆ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಮುರಳೀಧರ ತೀರ್ಪುಗಾರರಾಗಿರಲಿದ್ದಾರೆ.
ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಗೊಲ್ಡ್ ವಿನ್ನರ್ ವತಿಯಿಂದ ಕ್ರಮವಾಗಿ ರೂ. 5000, ರೂ. 2,500 ಹಾಗೂ ರೂ. 1,000 ವೋಚರ್, ಬಟ್ಟರ್‍ಫ್ಲೈನಿಂದ ಗ್ಯಾಸ್ ಸ್ಟೌ, ಪ್ರೆಶರ್ ಕುಕ್ಕರ್, ಫ್ರೈ ಪ್ಯಾನ್, ಆರ್.ಕೆ.ಜಿ. ತುಪ್ಪದ ವತಿಯಿಂದ ಗಿಫ್ಟ್ ಹ್ಯಾಂಪರ್, ಇಬ್ಬರಿಗೆ ವಿಶೇಷ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ವಾಟರ್ ಬಾಟಲಿ, ಜ್ಯೂಸ್ ಟೆಟ್ರಾ ಪ್ಯಾಕ್ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಮುರಳಿ ಅವರೊಂದಿಗೆ ಸೆಲ್ಫಿಯ ಅವಕಾಶವನ್ನೂ ಕೊಡಲಾಗುವುದು.
ಸ್ಪರ್ಧೆಗೆ ಹೆಸರು ನೋಂದಣಿ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9700581992 ಅಥವಾ 6362827938 ಗೆ ಸಂಪರ್ಕಿಸಬಹುದು.
ಗೋಲ್ಡ್ ವಿನ್ನರ್ ಪ್ರಾಯೋಜಕತ್ವ, ದಿ ಹಿಂದೂ, ಆರ್.ಕೆ.ಜಿ ತುಪ್ಪ, ಬಟ್ಟರ್‍ಫ್ಲೈ ಗೃಹೋಪಯೋಗಿ ಸಾಮಗ್ರಿ, ಆಶೀರ್ವಾದ ಹಿಟ್ಟು, ಎವರೆಸ್ಟ್ ಮಸಾಲೆ ಹಾಗೂ ಪ್ಯಾರಿಶ್ ಸುಗರ್ ಸಹಯೋಗದಲ್ಲಿ ‘ನಮ್ಮ ರಾಜ್ಯ ನಮ್ಮ ಸ್ವಾದ’ ಘೋಷವಾಕ್ಯದಡಿ ಸ್ಪರ್ಧೆ ಆಯೋಜಿಸಲಾಗಿದೆ.