ರಚಿಸು-2023 ಕ್ಕೆ ಹರಿಸಿ ಹಾರೈಸಿದವರಿಗೊಂದು ನಮನ ಹೇಳೋಣ
ಇತ್ತೀಚಿಗೆ ನನ್ನ ಐವತ್ತೊಂದು ಹುಟ್ಟುಹಬ್ಬದೊಂದಿಗೆ ನಮ್ಮ ಶ್ರೀ ಶಿವ ಚಿದಂಬರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿರೋಳ(ರಿ) ಸ್ಥಾಪನೆಯಾಗಿ 23ನೇ ವರ್ಷಕ್ಕೆ ಪಾದಾರ್ಪಣೆಯಾಯಿತು ಅಲ್ಲದೆ ಇದರೊಂದಿಗೆ ‘ರಚಿಸು’ 2023 ಎಂಬ ಹಸರಿನೊಂದಿಗೆ ಪ್ರಾಥಮಿಕ ಪ್ರೌಢಶಾಲಾ ಮಕ್ಕಳಿಗಾಗಿ ಪರಿಸರ ಸಂರಕ್ಷಣೆ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜೊತೆಗೆ ಹುಟ್ಟುಹಬ್ಬದ ಪ್ರಯುಕ್ತ ಪ್ರತಿಭಾವಂತ ಮಕ್ಕಳಿಗೆ ನೋಟಬುಕ್ಸ್ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ನೀಡಲಾಯಿತು.
ಇನ್ನೂ ಈ ಎಲ್ಲ ಕಾರ್ಯಕ್ರಮಕ್ಕೆ ವೇದಿಕೆಯಾಗಿ “ಹಸಿದವರೆಗೆ ಅನ್ನ” ಜೋಳಿಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದ ಕರಿಯಪ್ಪ ಶಿರಹಟ್ಟಿ ಅದರೊಂದಿಗೆ ವಾಹನಗಳ ಉದ್ಘಾಟನೆಯನ್ನು ನೆರವೇರಿಸಲು ಹುಬ್ಬಳ್ಳಿ ಧಾರವಾಡ ವಿಧಾನ ಸಭಾ ಕ್ಚೇತ್ರದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ಮಾಜಿ ರಾಜ್ಯಾಸಭಾ ಸದಸ್ಯರಾದ ಐ.ಜಿ.ಸನದಿ, ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ, ಶ್ರೀಮತಿ ನಾಗರತ್ನಾ ಚಂದ್ರಶೇಖರ ಅಮೀನಗಡ, ಡಾ|| ಆನಂದ ಪಾಂಡುರಂಗಿ, ಚನ್ನಬಸ್ಸಪ್ಪ ಧಾರವಾಡಶೆಟ್ರ, ಈ ಕಾರ್ಯಕ್ರಮದ ರೂವಾರಿಗಳಾದ ಕರಿಯಪ್ಪ ಶಿರಹಟ್ಟಿ ಮತ್ತು ವೆಂಕಟೇಶ ಬಂಡಾರಿ, ಚಂದ್ರಶೇಖರ, ಮಾಡಲಗೇರಿ, ಇನ್ನೂ ಅನೇಕ ಸ್ನೇಹಿತರು ಹಿರಿಯರು ಉಪಸ್ಥಿತರಿದ್ದರು. ಅಲ್ಲದೆ ಬೇರೆ-ಬೇರೆ ಕಡೆಯಿಂದ ಅಭಿಮಾನಿಗಳು ಆಗಮಿಸಿದ್ದರು.
ಹೀಗೆ ಸಾಮಾಜಿಕ ಕಳಕಳಿಯೊಂದಿಗೆ ಅಂದಿನ ನನ್ನ ಹುಟ್ಟುಹಬ್ಬದ ಆಚರಣೆಯು ನಿಜಕ್ಕೂ ಅರ್ಥರ್ಪೂಣವಾಗಿ ಜರುಗಿತು. ಅಲ್ಲದೆ ಸ್ನೇಹಲೋಕ ಸಾಂಸ್ಕøತಿಕ ಕಲಾ ತಂಡ ಹುಬ್ಬಳ್ಳಿಯವರಿಂದ ಅನೇಕ ಸಾಂಸ್ಕøತಿಕ ಚಟುವಟಿಕೆಗಳಿಗೆ ಹುಬ್ಬಳ್ಳಿಯಲ್ಲಿರುವ ಮೂರುಸಾವಿರ ಮಠದ ಪ್ರಾಂಗಣ ಸಾಕ್ಷಿಯಾಯಿತು.
ಇದೇ ಸಂದರ್ಭದಲ್ಲಿ ನನ್ನ ಅನೇಕ ಸ್ನೇಹಿತರು ಅಲ್ಲದೆ ವಿಶೇಷವಾಗಿ ಮಾಜಿ ಸದಸ್ಯರಾದ ಐ.ಜಿ.ಸನದಿ, ಮನೋರೋಗ ತಜ್ಞರಾಜ ಡಾ||ಆನಂದ ಪಾಂಡುರಂಗಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಶ್ರೀ ಅರಳಿ ನಾಗರಾಜ ಹಾಜರಿದ್ದು ನಮ್ಮ ಈ ಎಲ್ಲ ಸಾಮಾಜಿಕ ಕಾರ್ಯ ಹಾಗೂ ಹುಟ್ಟುಹಬ್ಬಕ್ಕೆ ಶುಭಹಾರೈಸಿದರು. ಕೆಲವರು ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಅವರಲ್ಲಿ ಆಯ್.ಎ ಲೋಕಾಪೂರ, ವಿನೋದಕುಮಾರ ಗುಂಜಾಳ, ಆಯ್.ಜಿ. ಪಾಟೀಲ ಮತ್ತು ಇದೇ ಸಂದರ್ಭದಲ್ಲಿ ನನ್ನೊಂದಿಗೆ ಬಾಲ್ಯದಿಂದ ಕೂಡಿ ಕಲಿತ ಆತ್ಮೀಯ ಮಿತ್ರರಾದ ಹುಸೇನ ನದಾಫ, ರಾಜು ಮರಿಗುದ್ದಿ, ಎಚ್ಚರಪ್ಪ ಕಿತ್ತಲಿ, ಶಿವಾಜಿ ಕಲಾಲ, ಮಹಾಂತೆಶ ಹಿರೇಮಠ, ಚಂದ್ರಶೇಖರ ಅದರಗುಂಚಿ, ಬಸವರಾಜ ಕುಪ್ಪಸ್ತ, ಬೈಲಪ್ಪ ಬಿಲ್ಲಾರ ನಾರಾಯಣ, ಆನೇಗುಂದಿ, ವೀರಯ್ಯ ಹಂಚಿನಮಠ ಇನ್ನೂ ಹಲವರು ನನ್ನ ಎಲ್ಲ ಬೆಳವಣೆಗೆಗೆ ಕಾರಣಾಗಿದ್ದಾರೆ.
ಅವರೆಲ್ಲರನ್ನು ಈ ಸಂದರ್ಭದಲ್ಲಿ ನೆನೆಯದೆ ಇರಲಾರೆ. ಅದರಲ್ಲಿ ಬಹು ವರ್ಷಗಳಿಂದ ಮನೆಯ ಸದಸ್ಯನಂತೆ ನಮ್ಮ ಎಲ್ಲ ಕ್ಷೇಮ ಸಮಾಚಾರವನ್ನು ವಿಚಾರಿಸುವ ಅಳ್ನಾವರದ ಬಸವರಾಜ ಕಂಬಳಿಯವರನ್ನು ನೆನಪಿಸಿಕೊಳ್ಳದ್ದಿದ್ದರೆ ತಪ್ಪಾದಿತು. ಹಾಗೆ ರಚಿಸು 2023ರ ಶ್ರೀ ಶ್ರೀ ಶಿವ ಚಿದಂಬರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿರೋಳ(ರಿ) 23 ವರ್ಷ ಪೂರೈಸಿದ ನೆನಪಿನೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಹೆಯಲ್ಲಿಯೂ ಸಂಸ್ಥೆಯ ವತಿಯಿಂದ ಹತ್ತು ಹಲವಾರು ವಿನೂತನ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆಯು ತೀರ್ಮಾನಿಸಲಾಯಿತು. ಅನೇಕ ಸಮಾನ ಮನಸ್ಕರು ಸೇರಿ ಈ ಎಲ್ಲ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಯೋಚನೆ ಯೋಜನೆಯಿದೆ. ನಮ್ಮ ಪ್ರತಿಯೊಂದು ಕೆಲಸಗಳನ್ನು ಗಮನಿಸಿ ಹಾರೈಸುವ ಬಂದು ಬಳಗ ಸ್ನೇಹಿತರು ಅಲ್ಲದೆ ವಿಶೇಷವಾಗಿ ಬೆಂಗಳೂರಿನ ಸಹಬಾಳ್ವೆ ಸಂಸ್ಥೆ (ರಿ) ಸಂಸ್ಥಾಪರಕಾದ ಡಾ|| ರಾಘವೇಂದ್ರ ಪ್ರಸಾದರವರು ನಮ್ಮ ಹಲವಾರು ಕಾರ್ಯಕ್ರಮಗಳಿಗೆ ಕೈ ಜೊಡಿಸಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸಾಮಾಜಿಕ ಕಾರ್ಯಗಳನ್ನು ನನ್ನ ಮೂಲಕ ಅನುಷ್ಠಾನಗೊಳಿಸುತ್ತಿದ್ದಾರೆ ಎಂಬುದು ಅಭಿಮಾನ ಸಂಗತಿಯಾಗಿದೆ ಹೀಗೆ ನನ್ನ ಈ ಎಲ್ಲ ಕಾರ್ಯಕ್ರಮಗಳಿಗೆ ಕಾರಣರಾದವರಲ್ಲರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಾ ಅವರೆಲ್ಲರಿಗೂ ನನ್ನ ಧನ್ಯವಾದಗಳನ್ನು ತಿಳಿಸುವೆ. ಶ್ರೀಮತಿ ಪೂಜಾ ಮೆಣಸಿನಕಾಯಿ, ಶ್ರೀಮತಿ ಹೀನಾ ಜಮಖಂಡಿ, ಶ್ರೀಮತಿ ಅನ್ನಪೂರ್ಣ ನಸಬಿಯವರು ಕೂಡ ನಮ್ಮ ಪ್ರತಿಯೊಂದು ಪತ್ರಿಕಾ ಮಾಧ್ಯಮಕ್ಕೆ ನಿರಂತರವಾಗಿ ನೀಡುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ.