ಬೀದರ್

ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಲಾಭ ಪಡೆಯಿರಿ: ಕ್ಯಾಪ್ಟನ್ ಎಮ್. ಜಯಸಿಂಹ

ಬೀದರ, ಆಗಸ್ಟ್ 1 (ಕರ್ನಾಟಕ ವಾರ್ತೆ)- ಬೀದರ ಕರ್ನಾಟಕ ಭೋವಿ ಅಭಿವೃದ್ದಿ ನಿಗಮ ನಿಗಮದ ಜಾಗೃತಿದಳ ಅಧಿಕಾರಿಗಳಾದ ಕ್ಯಾಪ್ಟನ್ ಎಮ್. ಜಯಸಿಂಹ ರವರು ಜುಲೈ 18 ಮತ್ತು 19 ರಂದು ಎರಡು ದಿವಸಗಳ ಕಾಲ ಜಿಲ್ಲೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಿಗಮ ಬೀದರ ಜಿಲ್ಲಾ ಕಛೇರಿಗೆ ಭೇಟಿ ನೀಡಿ ನಿಗಮದಿಂದ ನೀಡಿರುವ ವಿವಿಧ ಯೋಜನೆಗಳÀ ಘಟಕಗಳನ್ನು ಪರಿಶಿಲನೆ ಮಾಡಿದರು ಹಾಗೂ ಭೂ-ಒಡೆತನ ಯೋಜನೆಯಡಿ ಒದಗಿಸಿರುವ ಜಮಿನಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದು ಕೋಳ್ಳಲು ತಿಳಿಸಿದರು.
ಇದೆ ಸಮಯದಲ್ಲಿ ಭೊವಿ ಜನಾಂಗದ ಇತರ ಬಡ ಫಲಾಪೆಕ್ಷಿಗಳಿಗೆ ನಿಗಮವು ಅನುಷ್ಠಾನಗೋಳಿಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನಿಡಿ ತಿಳುವಳಿಕೆ ಹೇಳಿದರು.
ಕಚೇರಿಗೆ ಭೇಟಿ ನೀಡಿದ ಸಂರ್ದಭದಲ್ಲಿ ಕರ್ನಾಟಕ ಭೋವಿ ಅಭಿವೃದ್ದಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಸೋಮಶೇಖರ ಹಾಗು ತಾಲ್ಲೂಕ ಅಭೀವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
Ghantepatrike kannada daily news Paper

Leave a Reply

error: Content is protected !!