ಭಾರಿ ಮಳೆ ಸಿಡಿಲು ಬಡಿದು ಆಡು,ಕುರಿ, ಮೇಕೆಗಳು ಸಾವು ಪರಿಹಾರಕ್ಕೆ ಮನವಿ
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಟಗ್ಯಾಳ್ಳ ಗ್ರಾಮದ ಬಡ ಕುರಿಗಾಹಿ ಸಂತೋಷ ಮೇತ್ರೆ ರವರ ನಾಲ್ಕು ಕುರಿಗಳು ಇಪ್ಪತೆಳ್ಳು ಆಡುಗಳು ಇತ್ತೀಚಿಗೆ ಭಾರಿ ಮಳೆಯಿಂದ ಸಿಡಿಲು ಬಡಿದು ಆಡು,ಕುರಿ, ಮೇಕೆಗಳು ಸಾವನೋಪಿರುತ್ತವೆ. ಈ ಕುರಿ ಆಡುಗಳು ದರ ಒಂದಕ್ಕೆ 15 ಸಾವಿರ ರೂಪಾಯಿ ಆದರೆ 31 ಕುರಿ ಆಡುಗಳು ದರ ಸರಿಸುಮಾರು ನಾಲ್ಕು ಲಕ್ಷದ ಹಣ ಮೇಲ್ಪಟ್ಟು ಬಡ ಕುರಿಗಾಹಿ ಸಂತೋಷ ಮೇತ್ರೆ ರವರಿಗೆ ಅಪಾರ ಹಾನಿಯಾಗಿದೆ.ಇವರು ಕುರಿ ಆಡುಗಳನೇ ಸಾಕಿಕೊಂಡು ಅವರ ಹಾಗೂ ಅವರ ಕುಟುಂಬ ವರ್ಗದವರ ಜೀವನ ನಡೆಸುತ್ತಿದ್ದಾರೆ.ಇವರಿಗೆ ಹಾಗೂ ಇವರ ಕುಟುಂಬ ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ,ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಕೊಡಲ್ಲೇ ಸೂಕ್ತ ಪರಿಹಾರ ಹಣವನ್ನು ಬಿಡುಗಡೆಗೊಳಿಸಿ ಬಡ ಕುರಿಗಾಯಿ ಸಂತೋಷ ಮೇತ್ರೆ ರವರಿಗೆ ಪ್ರಕೃತಿ ವಿಕೋಪದಿಂದ ಸಿಡಿಲು ಬಡಿದು ಸಾವನೋಪ್ಪಿರುವ ಕುರಿ ಆಡುಗಳಿಂದ ಲಕ್ಷಾಂತರ ರೂಪಾಯಿ ಹಾನಿ ನಷ್ಟವನ್ನು ಆಗಿರುವುದನ್ನು ಪರಿಹಾರ ಸರ್ಕಾರದಿಂದ ನೀಡಬೇಕೆಂದು ಭಾಲ್ಕಿ ಕ್ಷೇತ್ರದ ಶಾಸಕರು,ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ರವರಲ್ಲಿ ಮತ್ತು ಬೀದರ್ ಜಿಲ್ಲೆಯ ಸಂಸದರಾದ ಸಾಗರ್ ಖಂಡ್ರೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ, ಬಡ ಕುರಿಗಾಹಿ ಸಂತೋಷ್ ಮೇತ್ರೆ ಯವರಿಗೆ ಸೂಕ್ತ ಪರಿಹಾರ ನೀಡಿ ಅವರ ಹಾಗೂ ಅವರ ಕುಟುಂಬ ನಿರ್ವಹಣೆಗೆ ಅನು ಮಾಡಿಕೊಳ್ಳಬೇಕೆಂದು ಸಚಿವರಲ್ಲಿ ಮತ್ತು ಸಂಸದರಿಗೆ ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಅಂಬರೀಶ ಮಲ್ಲೇಶಿ ಅವರು ಮನವಿ ಮಾಡಿದ್ದಾರೆ