ಬೀದರ ಜಿಲ್ಲೆಯ “ರೌಢಿ ನಿಗೃಹ ದಳ” ಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಾಳಿ ಬಂಧನ”
ಗಾಂಧಿಗಂಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ನ್ಯೂ ಆದರ್ಶ ಕಾಲೋನಿಯಲ್ಲಿ ರಾಜಸ್ಥಾನ ರಾಯಲ್ಸ್ v/s ರಾಯಲ್ ಚಾಲೆಂಜ ಬೆಂಗಳೂರು ನಡುವೆ ನಡೆದ ಕ್ರಿಕೆಟ್ ಪಂದ್ಯದ ಮೇಲೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕ್ರಿಕೆಟ್ ಆಟದ ಮೇಲೆ ಕಾನೂನು ಬಾಹಿರವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದ ಮಾಹಿತಿಯಂತೆ ಬೀದರ ನಗರದ “ ರೌಢಿ ನಿಗೃಹ ದಳ” ದ ಅಧಿಕಾರಿ ಗಾಂಧಿಗಂಜ ಪೊಲೀಸ್ ಠಾಣೆಯ ಶ್ರೀ, ಹಣಮರೆಡ್ಡೆಪ್ಪಾ, ಪಿ.ಐ ರವರು ತಮ್ಮ ತಂಡದ ಶ್ರೀ, ಸಂಜೀವಕುಮಾರ, ಶ್ರೀ, ರಾಜಕುಮಾರ, ಶ್ರೀ, ಅನಿಲ, ಶ್ರೀ, ನವೀನ, ಶ್ರೀ, ಇರ್ಫಾನ್, ಶ್ರೀ, ಪ್ರವೀಣಕುಮಾರ, ಶ್ರೀ, ಗಂಗಾಧರ ರವರೊಂದಿಗೆ ದಾಳಿ ಮಾಡಿ ಅವನಿಂದ ನಗದು ಹಣ ಮತ್ತು 2 ಮೊಬೈಲ್ ಒಟ್ಟು ಅ:ಕಿ: 1,37,600=00 ರೂಪಾಯಿ ಜಪ್ತಿ ಮಾಡಿಕೊಂಡಿದ್ದು, ಅದರಂತೆ ಬ.ಕಲ್ಯಾಣ ನಗರದ “ ರೌಢಿ ನಿಗೃಹ ದಳ” ದ ಅಧಿಕಾರಿ ಶ್ರೀ, ಅಂಬರೀಷ್ ವಾಗ್ಮೇಡೆ, ಪಿ.ಎಸ್.ಐ ರವರು ತಮ್ಮ ತಂಡದ ಶ್ರೀ, ರಾಜಕುಮಾರ, ಶ್ರೀ, ಅಶೋಕ ರವರೊಂದಿಗೆ ಸಿದ್ದೇಶ್ವರ ಕಾಲೋನಿಯಲ್ಲಿ ದಾಳಿ ಮಾಡಿ ನಗದು ಹಣ ಮತ್ತು ಒಂದು ಮೊಬೈಲ್ ಒಟ್ಟು ಅ:ಕಿ: 50,600=00 ರೂಪಾಯಿ ಹೀಗೆ ಒಟ್ಟು 1,87,600=00 ರೂಪಾಯಿ ಮೌಲ್ಯದವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶಾಘಿಸಲಾಗಿದೆ.