ಬೀದರ್ ಎಲೆಕ್ಟ್ರಾನಿಕ್ ಮೇಡಿಯಾದ ಅಧ್ಯಕ್ಷರಾಗಿ ರಾಜಕುಮಾರ್ ಸ್ವಾಮಿ ಅವಿರೋಧ ಆಯ್ಕೆ.
ಬೀದರ್ ಎಲೆಕ್ಟ್ರಾನಿಕ್ ಮೇಡಿಯಾದ ಅಧ್ಯಕ್ಷರಾಗಿ ಪತ್ರಕರ್ತ ರಾಜಕುಮಾರ್ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇಂದು ನಡೆದ ಸಭೆಯಲ್ಲಿ ಸಂಘದ ಸರ್ವ ಸದಸ್ಯರ ಸರ್ವಾನುಮತದಿಂದ ರಾಜಕುಮಾರ್ ಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಅನೀಲಕುಮಾರ್ ದೇಶಮುಖ್ ಅವರು ಸತತ ನಾಲ್ಕು ಬಾರಿ ಸಂಘದ ಜವಾಬ್ದಾರಿ ವಹಿಸಿಕೊಂಡಿದ್ದು ಇದೀಗ ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟನಲ್ಲಿ ಸಂಘದ ಅಧ್ಯಕ್ಷರಾಗಿ ರಾಜಕುಮಾರ್ ಸ್ವಾಮಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ವೇಳೆಯಲ್ಲಿ ಸುರೇಶ ನಾಯಕ, ಲಿಂಗೇಶ ಮರಕಲೆ, ಬಸವರಾಜ ಕಡಗಂಚಿ, ಸಂಜುಕುಮಾರ್ ಬುಕ್ಕಾ, ಅಂಬ್ರೇಶ ಸ್ವಾಮಿ, ಬಸವರಾಜ ಹಾಗೂ ಸಾಬೀರ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.